ಚರ್ಚು, ಮಸೀದಿಗಳಿಗೆ ಕಲ್ಲೆಸೆಯಬೇಡಿ: ಪೇಜಾವರ ಶ್ರೀ

ಪೇಜಾವರ ಶ್ರೀ
ಪೇಜಾವರ ಶ್ರೀ
Updated on

ಮಂಗಳೂರು: ಹಿಂದೂ ಯುವಶಕ್ತಿ ಚರ್ಚ್, ಮಸೀದಿಗಳಿಗೆ ಕಲ್ಲು ಹೊಡೆದು ಪುಂಡಾಡಿಕೆ ಮಾಡದೆ ಹಿಂದೂ ಧರ್ಮದ ಘನತೆ ಕಾಪಾಡಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥಿ ಸ್ವಾಮೀಜಿ ಹಿಂದೂ ಯುವ ಸಮಾಜಕ್ಕೆ ಸಲಹೆ ನೀಡಿದರು.

ವಿಶ್ವ ಹಿಂದೂ ಪರಿಷತ್ ಸ್ವರ್ಣ ಮಹೋತ್ಸವ ಅಂಗವಾಗಿ ಕೇಂದ್ರ ಮೈದಾನದಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಅವರು ಮಾತನಾಡಿದರು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಬೇಕು. ಇತರ ಧರ್ಮದ ಮೇಲೆ  ಆಕ್ರಮಣ ಮಾಡಬಾರದು. ನಾವು ಕೋಮುವಾದಿಗಳಲ್ಲ, ಪ್ರೇಮವಾದಿಗಳು. ಸಮಾಜೋತ್ಸವದಲ್ಲಿ ಹಿಂದೂ ಸಮಾಜದ ವಿಶ್ವ ರೂಪದರ್ಶನವಾಗಿ ಸ್ಫೂರ್ತಿಗೊಂಡ ಯುವ ಜನತೆ ಅರ್ಜುನ ಕುರುಕ್ಷೇತ್ರದಲ್ಲಿ ಹೋರಾಡಿದಂತೆ ದೇಶಕ್ಕಾಗಿ ಹೋರಾಡಲಿ ಎಂದರು. ಪಾಶ್ಚಾಮಾತ್ಯರಿಗಿಂತಲೂ ಹೆಚ್ಚು ಅವರಿಂದ ಪ್ರಭಾವಿತರಾದ, ಬುದ್ಧಿಜೀವಿಗಳೆಂಬವರಿಂದ ಹಿಂದೂ ಧರ್ಮಕ್ಕೆ ಹೆಚ್ಚಿನ ಆಘಾತವಾಗಿದೆ.

ಇಡೀ ಜಗತ್ತಿಗೆ ಕರ್ತವ್ಯದ, ಜೀವನ, ಆಧ್ಯಾತ್ಮ ಸಂದೇಶ ನೀಡಿದ ಭಗವದ್ಗೀತೆಯನ್ನು ಸುಡಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಕುರಾನ್, ಬೈಬಲ್ ಕುರಿತು ಹೇಳದೆ ಕೇವಲ ಭಗವದ್ಗೀತೆ ಬಗ್ಗೆ ಮಾತನಾಡುತ್ತಿದ್ದಾರೆ.ಗೀತೆಯನ್ನು ಸುಡಬೇಕೆಂದು ಹೇಳುವವರನ್ನು ಸುಡಬೇಕಾಗಿಲ್ಲ, ಅವರ ಅಜ್ಞಾನವನ್ನು ಸುಡವ ಕಾರ್ಯ ನಡೆಯಬೇಕು.

ಬ್ರಾಹ್ಮಣರಿಂದ, ದಲಿತರವರೆಗೆ ಎಲ್ಲರನ್ನು ಸಮಾನವಾಗಿ ಕಾಣಬೇಕು. ಯಾವುದೇ ವೃತ್ತಿ ನಿಕೃಷ್ಟವಾಗಿ ಕಾಣದೆ ಗೌರವಕ್ಕೆ ಗೀತೆಯಲ್ಲಿ ಅಸಮಾನತೆ ಸಂದೇಶ ಇಲ್ಲ. ಎಲ್ಲಿ ಬೇಕಾದರೂ ಸಮರ್ಥಿಸಲು ಸಿದ್ಧ ಎಂದರು. ಮತಾಂತರ ಕುರಿತು ಯಾರೂ ಮಾತನಾಡುತ್ತಿಲ್ಲ, ಸಂತೋಷದಿಂದ ಮಾತೃಧರ್ಮಕ್ಕೆ ಮರು ಮತಾಂತರ ಆದಾಗ ಮಾತ್ರ ವಿರೋಧ ವ್ಯಕ್ತಪಡಿಸುತ್ತಾರೆ. ಆಮಿಷದ ಮತಾಂತರ ಎರಡೂ ಸಲ್ಲದು. ಮರು ಮತಾಂತರ ಆದವರಿಗೆ ಸವರ್ಣೀಯ ಸ್ಥಾನಮಾನವನ್ನೇ ನೀಡುತ್ತೇವೆ. ಅವರ್ಣ ಪ್ರಶ್ನೆಯೇ ಇಲ್ಲ ಎಂದರು.

ಭಾರತವನ್ನು ವಿಶ್ವಗುರು ಮಾಡುವ ಸಲುವಾಗಿ 100 ಕೋಟಿ ಹಿಂದೂಗಳಿರುವಲ್ಲಿ ಘರ್‍ವಾಪಸಿ ಮೂಲಕ 120 ಕೋಟಿ ಹಿಂದೂಗಳಾಗಿ ಪೂರ್ಣ ಹಿಂದೂ ರಾಷ್ಟ್ರ ಮಾಡುತ್ತೇವೆ
- ಸಾಧ್ವಿ ಬಾಲಿಕಾ ಸರಸ್ವತಿ, ವಿಎಚ್‍ಪಿ ಮಾರ್ಗದರ್ಶಕ ಮಂಡಳಿ ಸದಸ್ಯೆ (ಮಂಗಳೂರು
ಸಮಾಜೋತ್ಸವದಲ್ಲಿ)

ಪರಿಷತ್ ಆಯೋಜಿಸುತ್ತಿರುವ ವಿರಾಟ್ ಹಿಂದೂ ಸಮಾವೇಶಗಳನ್ನು ಕಂಡು ರಾಜ್ಯದ ಗೃಹ ಸಚಿವರಿಗೆ ಸಂಕಟ ಶುರುವಾಗಿದೆ. ಅದಕ್ಕಾಗಿ ವಿಶ್ವ ಹಿಂದೂ ಪರಿಷತ್‍ನ ಸಮಾಜೋತ್ಸವ ಗಳಿಗೆ ಅನುಮತಿ ನೀಡಲು ಅಡ್ಡಿಪಡಿಸುತ್ತಿದ್ದಾರೆ.
- ಗೋಪಾಲ ಭಟ್, ವಿಎಚ್‍ಪಿ ದಕ್ಷಿಣ ಪ್ರಾಂತ ಸಂಚಾಲಕ (ಬೆಳಗಾವಿ ಸಮಾಜೋತ್ಸವ)

ಭಾರತದ ರಾಷ್ಟ್ರೀಯತೆ ಯನ್ನು ಒಪ್ಪಿ ಸಂವಿಧಾನ, ತ್ರಿವರ್ಣಧ್ವಜಕ್ಕೆ ಗೌರವ ಸಲ್ಲಿಸುವರು ಮಾತ್ರ ಭಾರತದಲ್ಲಿರಲಿ. ದೇಶದ ವಿರುದ್ಧ ಕತ್ತಿ ಮಸೆಯುವವರಿಗೆ, ರಾಷ್ಟ್ರೀಯತೆ ವಿರೋಧಿಸುವವರಿಗೆ ನಡೆದುಕೊಳ್ಳುವವರಿಗೆ ದುರ್ಗತಿ ಕಾಣಿಸುತ್ತೇವೆ.
-ಯೋಗಿ ಆದಿತ್ಯನಾಥ, ಸಂಸದ (ಹುಬ್ಬಳ್ಳಿ ಸಮಾಜೋತ್ಸವದಲ್ಲಿ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com