ಕೊಳೆಗೇರಿ ನಿವಾಸಿಗಳ ಧರಣಿ

ಸಮಾರಂಭದಲ್ಲಿ ವಿತರಿಸಿದ್ದ ಸ್ವಾಧೀನ ಪತ್ರಗಳನ್ನು ವಾಪಸ್ ಕಸಿದುಕೊಂಡಿರುವುದನ್ನು ವಿರೋಧಿಸಿ ಕುವೆಂಪುನಗರ ಕೊಳೆಗೇರಿ ನಿವಾಸಿಗಳು ಸೋಮವಾರ ಸ್ಲಂ ಬೋರ್ಡ್ ಕಚೇರಿ ಎದುರು ಧರಣಿ ನಡೆಸಿದರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಮಾರಂಭದಲ್ಲಿ ವಿತರಿಸಿದ್ದ ಸ್ವಾಧೀನ ಪತ್ರಗಳನ್ನು ವಾಪಸ್ ಕಸಿದುಕೊಂಡಿರುವುದನ್ನು ವಿರೋಧಿಸಿ ಕುವೆಂಪುನಗರ ಕೊಳೆಗೇರಿ ನಿವಾಸಿಗಳು ಸೋಮವಾರ ಸ್ಲಂ ಬೋರ್ಡ್ ಕಚೇರಿ ಎದುರು ಧರಣಿ ನಡೆಸಿದರು.

ಕುವೆಂಪುನಗರ ವಾರ್ಡ್‍ನ ಪಾಲಿಕೆ ಸದಸ್ಯೆ ಕೆ.ಆರ್.ಯಶೋದಮ್ಮ ನೇತೃತ್ವದಲ್ಲಿ ಮಂಡಳಿ ಕಚೇರಿ ಬಳಿ ಜಮಾಯಿಸಿದ ನಿವಾಸಿಗಳು ದಿನವಿಡೀ ಪ್ರತಿಭಟನೆ ನಡೆಸಿ ಸ್ವಾಧೀನ ಪತ್ರಕ್ಕಾಗಿ ಆಗ್ರಹಿಸಿದರು. ಸರ್ಕಾರ ಹಾಗೂ ಮಂಡಳಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಸ್ವಾಧೀನ ಪತ್ರ ವಿತರಿಸುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯಶೋದಮ್ಮ, ಹೊಸಬಾಳುನಗರದ ಸ್ಲಂನಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ಮಂಡಳಿ ತೀರ್ಮಾನದಂತೆ ಹಾಗೂ ವಸತಿ ಸಚಿವ ಅಂಬರೀಷ್ ಅವರ ಸಮ್ಮತಿಯಂತೆ ಅಧಿಕಾರಿಗಳು ದೊಡ್ಡ ಸಮಾರಂಭ ಮಾಡಿ ಸ್ವಾಧೀನ ಪತ್ರ ವಿತರಿಸಿದ್ದರು. ಆದರೆ ಸಮಾರಂಭದಲ್ಲಿ ಸಚಿವ ಕೃಷ್ಣಭೈರೇಗೌಡ ಇರಲಿಲ್ಲ. ಆದ್ದರಿಂದ ಮತ್ತೆ ಸಚಿವರಿಂದಲೇ ಸ್ವಾಧೀನ ಪತ್ರ ವಿತರಿಸಲಾಗುತ್ತದೆ ಎಂದು ನೀಡಿದ್ದ ಪತ್ರಗಳನ್ನು ನಿವಾಸಿಗಳಿಂದ ವಾಪಸ್ ಪಡೆಯಲಾಯಿತು. ಆದರೆ ವರ್ಷವೇ ಸಮೀಪಿಸುತ್ತಿದ್ದರೂ ಮಂಡಳಿ ಅಧಿಕಾರಿಗಳು ಮಾತ್ರ ಇನ್ನೂ ಸ್ವಾಧೀನ ಪತ್ರ ನೀಡದೆ ವಂಚಿಸುತ್ತಿದ್ದಾರೆ ಎಂದು ದೂರಿದರು.

ಐದು ಎಕರೆ ಪ್ರದೇಶದಲ್ಲಿ ಈ ಸ್ಲಂ ವ್ಯಾಪಿಸಿದ್ದು, ಮಂಡಳಿ ಅಧಿಕಾರಿಗಳು ರಾಜೀವ್ ಆವಾಸ್ ಯೋಜನೆ ಪ್ರಕಾರ 666 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿ ಇನ್ನೂ ಕಾಮಗಾರಿಯನ್ನೇ ಆರಂಭಿಸಿಲ್ಲ. ಆದರೆ ಅಧಿಕಾರಿಗಳು ನಿವಾಸಿಗಳನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ಯಶೋದಮ್ಮ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com