ಲಿನೆನ್ ಕ್ಲಬ್ ವತಿಯಿಂದ ಬೆಂಗಳೂರಿನಲ್ಲಿ ಹೊಸ ರೀಟೆಲ್ ಮಾರಾಟ ಮಳಿಗೆ ಉದ್ಘಾಟನೆ

ಮಳಿಗೆ ಉದ್ಘಾಟನೆ
ಮಳಿಗೆ ಉದ್ಘಾಟನೆ

ಬೆಂಗಳೂರು: ಆದಿತ್ಯ ಬಿರ್ಲಾ ನುವೊ ಲಿ.ನ, ಪ್ರೀಮಿಯಂ ಬ್ರ್ಯಾಂಡ್ ಜಯಶ್ರೀ ಟೆಕ್ಸ್‍ಟೈಲ್ಸ್, ಬೆಂಗಳೂರಿನ ಇಂದಿರಾನಗರದಲ್ಲಿ “ಲಿನೆನ್ ಕ್ಲಬ್” ಫ್ಯಾಬ್ರಿಕ್ಸ್, ಎಂಬ ವಿಶೇಷ ಮಾರಾಟ ಮಳಿಗೆಯನ್ನು ಸೋಮವಾರ ಅನಾವರಣಗೊಳಿಸಿತು.

ಈ ನೂತನ, ವಿಶೇಷ ಷೋರೂಂ, ಸಿದ್ಧಉಡುಗೆಗಳ ವಿಸ್ತಾರವಾದ ಶ್ರೇಣಿಯನ್ನು ಮಾರಾಟಕ್ಕೆ ಒದಗಿಸುತ್ತಿದೆ. ಪುರುಷರು ಹಾಗೂ ಮಹಿಳೆಯರು, ಇಬ್ಬರಿಗೂ (ಷರ್ಟ್‍ಗಳು, ಪ್ಯಾಂಟ್‍ಗಳು, ಸೂಟ್‍ಗಳು, ಸಾಂಪ್ರದಾಯಿಕ ಉಡುಗೆ, ಸ್ಕರ್ಟ್‍ಗಳು, ಟಾಪ್‍ಗಳು, ಜಾಕೆಟ್‍ಗಳು, ಇತ್ಯಾದಿ) ಒಪ್ಪುವಂತಹ, ಅಪ್ಪಟ ಲಿನೆನ್ ಬಟ್ಟೆಗಳಿಂದ ಹಿಡಿದು, ಮುದ್ರಣ ಮಾದರಿ ಹಾಗೂ ಎಂಬ್ರಾಯ್ಡರಿ ಮಾಡಿರುವಂತಹ ಬಟ್ಟೆಗಳು ಈ ಹೊಸ ಮಳಿಗೆಯಲ್ಲಿ ಲಭ್ಯವಿದೆ.

ಸ್ಟೋಲ್‍ಗಳು, ಲ್ಯಾಪ್‍ಟಾಪ್ ಬ್ಯಾಗ್‍ಗಳು, ಮಹಿಳೆಯರ ಬ್ಯಾಗ್‍ಗಳು ಹಾಗೂ ಸ್ಕಾರ್ವ್‍ಗಳನ್ನು ತನ್ನ ಹೊಸ ಮಾರಾಟ ಶ್ರೇಣಿಗೆ ಸೇರ್ಪಡೆ ಮಾಡಲಾಗಿದೆ. ಇದಲ್ಲದೆ, ಪ್ರಾದೇಶಿಕ ಆಸಕ್ತಿಗೆ ತಕ್ಕಂತೆ ಹಾಗೂ ಗ್ರಾಹಕರಿಂದ ಪಡೆದ ಹಿಮ್ಮಾಹಿತಿಯನ್ನು ಆಧರಿಸಿ, ಅಪ್ಪಟ ಲಿನೆನ್ ಧೋತಿಗಳು ಹಾಗೂ ಅಂಗವಸ್ತ್ರಗಳನ್ನೂ ಸಹ ತನ್ನ ಮಾರಾಟ ಶ್ರೇಣಿಗೆ ಸೇರ್ಪಡೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವ್ಯಾಪಾರ ಮುಖ್ಯಸ್ಥ ಥಾಮಸ್ ವರ್ಗೀಸ್  ಅವರು, “ಲಿನೆನ್ ಕ್ಲಬ್’ನ ಬಟ್ಟೆಗಳ ಮುದ್ರಣ, ಮಾದರಿ, ಬಣ್ಣ ಹಾಗೂ ವಿನ್ಯಾಸಗಳನ್ನು, ನಾವಿನ್ಯತೆಯ ಜೊತೆಗೆ, ಭಾರತೀಯ ಗ್ರಾಹಕರು ಇಷ್ಟಪಡುವಂತಹ ಕಲ್ಪನೆಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ವಿವಿಧ ಬಣ್ಣಗಳು, ವಿನ್ಯಾಸ, ಶೈಲಿಗಳಿಂದ ಕೂಡಿರುವ ನಮ್ಮ ಈ ವಿನೂತನ ಹೊಸ ಶ್ರೇಣಿಯ ಬಟ್ಟೆಗಳೊಂದಿಗೆ ಜಗತ್ತಿನಲ್ಲಿ, ಲಿನೆನ್ ಫ್ಯಾಬ್ರಿಕ್‍ನ ಅತೀ ದೊಡ್ಡ ರೀಟೆಲ್ ಸರಣಿಯನ್ನು  ಹೊಂದಿರುವ ಹೆಗ್ಗಳಿಕೆ ನಮ್ಮದಾಗಿದೆ. ಲೆನೆನ್ ಕ್ಲಬ್‍ನ ನಮ್ಮ ಈ ಹೊಸ ರೀಟೆಲ್ ಶ್ರೇಣಿ ಅತ್ಯಂತ ಆಕರ್ಷಕ ಹಾಗೂ ಆಧುನಿಕ ಫ್ಯಾಷನ್ ಅಂಶಗಳಿಂದ ಕೂಡಿದೆ,” ಎಂದರು.

ಆದಿತ್ಯ ಬಿರ್ಲಾ ಗ್ರೂಪ್‍ನ ಸ್ಥಳೀಯ ಟೆಕ್ಸ್‍ಟೈಲ್ಸ್ ವಿಭಾಗದ ಸಿಇಒ ಎಸ್.  ಕೃಷ್ಣಮೂರ್ತಿ ಅವರು ಮಾತನಾಡಿ, ನಮ್ಮ ಈ ಹೊಸ ಉತ್ಪನ್ನ, ಗ್ರಾಹಕರಿಗೆ ವಿಶೇಷ ಅನುಭವವನ್ನು  ಒದಗಿಸುತ್ತದೆ ಎಂದು ನಂಬಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com