ಬಿಬಿಎಂಪಿಯ ಮೊದಲ ವಾಸ್ತವ ಬಜೆಟ್ ಮಂಡನೆ

ಬಿಬಿಎಂಪಿಯ ಬಿಜೆಪಿ ಆಡಳಿತದ ಬಜೆಟನ್ನು ಕೌನ್ಸಿಲ್ ಸಭೆಯಲ್ಲಿ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ಆನಂದ್ ಮಂಗಳವಾರ ಮಂಡಿಸಿದ್ದಾರೆ.
Updated on

ಬೆಂಗಳೂರು: ಬಿಬಿಎಂಪಿಯ ಬಿಜೆಪಿ ಆಡಳಿತದ ಬಜೆಟನ್ನು ಕೌನ್ಸಿಲ್ ಸಭೆಯಲ್ಲಿ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ಆನಂದ್ ಮಂಗಳವಾರ ಮಂಡಿಸಿದ್ದಾರೆ.

ಯಾವುದೇ ಹೊಸ ಯೋಜನೆಗಳಿಲ್ಲದ್ದರು ಹಳೆಯ ಯೋಜನೆಗಳಿಗೆ ತೆಪೆ ಹಚ್ಚುವ ಕೆಲಸಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಬಾರಿ ರು. 6500 ಕೋಟಿಗೂ ಹೆಚ್ಚಿನ ಮೊತ್ತದ ಬಜೆಟ್ ಮಂಡನೆಯಾಗಿದ್ದು, ಬಿಬಿಎಂಪಿಯಲ್ಲಿ ಮಂಡನೆಯಾದ ಮೊದಲ ವಾಸ್ತವ ಬಜೆಟ್ ಇದಾಗಿದೆ.

ಬಿಜೆಪಿ ಆಡಳಿತ ಕಳೆದ ವರ್ಷ ಯಾವುದೇ ನಿರೀಕ್ಷಿತ ಚುನಾವಣೆ ಇಲ್ಲದಿದ್ದರೂ ಸ್ಟೀಲ್ ಸೇತುವೆ ಸೇರಿದಂತೆ ಅನೇಕ ಹೊಸ ಕಾರ್ಯಕ್ರಮಗಳಿದ್ದ ರು.7,773 ಕೋಟಿ ಮೊತ್ತದ ಬಜೆಟ್ ಮಂಡಿನೆಯಾಗಿತ್ತು.

ಆಡಳಿತದಲ್ಲಿ ಸುಧಾರಣೆ

* ಇ ಆಡಳಿತವನ್ನು ಪಾಲಿಕೆಯಲ್ಲಿ ತರುವ ನಿಟ್ಟಿನಲ್ಲಿ ಕ್ರಮ
* ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದಲ್ಲಿ ಹಾಲಿ ಇರುವ (ಐಎಫ್ಎಂಎಸ್) ತಂತ್ರಾಂಶ ಅಭಿವೃದ್ಧಿ.
* ಆರ್ಥಿಕ ವ್ಯವಹಾರಗಳನ್ನು ಆನ್ ಲೈನ್ ಮೂಲಕ ಜಾರಿಗೆ ತರಲು ಅಗತ್ಯ ಕ್ರಮ
* ಕಸ ವಿಲೇವಾರಿ ವ್ಯವಸ್ಥಿತವಾಗಿ ನಿರ್ವಹಿಸಲು ಈಗಾಗಲೇ ೪೦೦೦ ಸಾವಿರ ಪೌರ ಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಜಿ ಸ್ವೀಕರಿಸಲಾಗಿದೆ.

ಬಿಬಿಎಂಪಿ ಆದಾಯ ಮೂಲಗಳು
* ಸ್ವತ್ತುಗಳಿಗೆ ಪಿಐಡಿ ಸಂಖ್ಯೆಗಳನ್ನು ಈ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.
* ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಟ್ಟಡಗಳಿಂದ ಸೇವಾ ಶುಲ್ಕವನ್ನು ಕಡ್ಡಾಯವಾಗಿ * ವಸೂಲಿ ಮಾಡಲು ಕ್ರಮ.
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾಗಿರುವ ಸ್ವತ್ತುಗಳಿಂದ ಸುಧಾರಣಾ ವೆಚ್ಚವನ್ನು ಸಂಗ್ರಹಿಸಲು ಕಟ್ಟು ನಿಟ್ಟಿನ ಕ್ರಮ.
ಈ ಮೂಲಕ ಕಂದಾಯ ವಿಭಾಗದಿಂದ. ಆಸ್ತಿ ತೆರಿಗೆ ರೂಪದಲ್ಲಿ ಸೆಸ್, ಸುಧಾರಣೆ ಶುಲ್ಕ, ಸೇರಿ ಒಟ್ಟಾರೆ ೨.೬೩೬.೭೦ ಕೋಟಿ ಸಂಗ್ರಹ ನಿರೀಕ್ಷೆ.

ಮಾರುಕಟ್ಟೆ ವಿಭಾಗ
* ಬಿಬಿಎಂಪಿ ವ್ಯಾಪಿಗೆ ಬರುವ ಅಂಗಡಿ ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ ಮತ್ತು ಶುಲ್ಕವನ್ನೂ ಸಹ ಪರಿಷ್ಕರಿ ಈ ಮೂಲಕ ಮಾರುಕಟ್ಟೆ ವಿಭಾಗದಿಂದ ರು. ೭೫ ಕೋಟಿ ಆದಾಯ ನಿರೀಕ್ಷೆ.
 ಆಪ್ಟಿಕಲ್ ಫೈಬರ್ ಕೇಬಲ್ ಶುಲ್ಕ
* ಪ್ರಸಕ್ತ ಸಾಲಿನಲ್ಲಿ ಓಎಫ್ ಸಿ ಶುಲ್ಕ ರು. ೩೦೦ ಕೋಟಿ ಸೇರಿದಂತೆ ರು.೩೩೩.೬೫ ಕೋಟಿ ಸಂಗ್ರಹ ನಿರೀಕ್ಷೆ.

೨೦೧೫-೧೬ನೇ ಸಾಲಿನ ಜನಪರ ಕಾರ್ಯಕ್ರಮಗಳು
ಪ್ರಸಕ್ತ ಸಾಲಿನಲ್ಲಿ ಜನಪರ ಕಲ್ಯಾಣ ಕಾರ್ಯಕ್ರಮಗಳಿಗೆ ಆಯವ್ಯಯದಲ್ಲಿ ಒಟ್ಟಾರೆ ರು. ೪೦೧ ಕೋಟಿ ಮೀಸಲು.

ಆರೋಗ್ಯ ಕಾರ್ಯಕ್ರಮಗಳು
* ಆರೋಗ್ಯ ವಿಭಾಗಕ್ಕೆ ಒಟ್ಟಾರೆ ರು. ೧೦೫.೦೮ ಕೋಟಿ ಮೀಸಲಿಸಿರಿಸಿದೆ.
* ಹೆರಿಗೆ ಮತ್ತು ರೆಫರಲ್ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಉಚಿತವಾಗಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ನೀಡುವ ಕಾರ್ಯಕ್ರಮ ಮುಂದುವರಿಕೆ.
* ಪಾಲಿಕೆಯಲ್ಲಿ ರೆಫರಲ್ ಆಸ್ಪತ್ರೆಗಳು ಮತ್ತು ಡಯಾಲಿಸಿಸ್ ಸೆಂಟರ್ ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಉನ್ನತ್ತೀಕರಣ.

ಶಿಕ್ಷಣ
* ಶಿಕ್ಷಣ ವಿಭಾಗಕ್ಕೆ ಒಟ್ಟಾರೆ ರು. ೨೦.೬೬ ಕೋಟಿ ಮೀಸಲು
* ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸಿಸಿ ಕ್ಯಾಮರಗಳ ಅಳವಡಿಕೆಗೆ ೧ ಕೋಟಿ. ರುಪಾಯಿ ಮೀಸಲು
* ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ವ್ವವಸ್ಥೆ. ಇದಕ್ಕಾಗಿ ೨ ಕೋಟಿ ಮೀಸಲು.

* ಬಿಬಿಎಂಪಿಯಿಂದ ಬೆಂಗಳೂರು ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ನಗರೋಥ್ಥಾನ ಯೋಜನೆಯಡಿ ರು. ೧೦೦೦ ಕೋಟಿ ಮತ್ತು ಹೆಚ್ಚುವರಿಯಾಗಿ ರು. ೧೫೦೦ ಕೋಟಿ ಒಟ್ಟಾರೆ ೨೫೦೦ ಕೋಟಿ ಅನುದಾನದಲ್ಲಿ ರಸ್ತೆ ಅಗಲೀಕರಣ ಕೆರೆಗಳ ಅಭಿವೃದ್ಧಿ, ೭ ನಗರಸಭೆ ಮತ್ತು ೧ ಪುರಸಭೆ ವ್ಯಾಪ್ತಿಯಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕಾಮಗಾರಿ.


* ಕೆರೆಗಳ ಅಭಿವೃದ್ಧಿಗಾಗಿ ಒಟ್ಟಾರೆ ರು. ೧೩೦ ಕೋಟಿ ಮೀಸಲು.

* ಪಾಲಿಕೆಯ ಆಸ್ತಿಗಳ ಸಂರಕ್ಷಣೆಗೆ ಒಟ್ಟಾರೆ ರು. ೪೦.೪೦ ಕೋಟಿ ಮೀಸಲು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com