ಸಿಬಿಐಗೆ ವಹಿಸಲು ಭಯವೇಕೆ?

`ಏನನ್ನೂ ಮುಚ್ಚಿಡುವುದಿಲ್ಲ ಎಂದಾದರೆ ಸಿಬಿಐ ಭಯವೇಕೆ?' ಎಂದು ನೇರವಾಗಿಯೇ ರಾಜ್ಯ ಸರ್ಕಾರವನ್ನು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮದನ್ ಗೋಪಾಲ್ ಪ್ರಶ್ನಿಸಿದ್ದಾರೆ...
ಡಿ.ಕೆ.ರವಿ
ಡಿ.ಕೆ.ರವಿ

ಬೆಂಗಳೂರು: `ಏನನ್ನೂ ಮುಚ್ಚಿಡುವುದಿಲ್ಲ ಎಂದಾದರೆ ಸಿಬಿಐ ಭಯವೇಕೆ?' ಎಂದು ನೇರವಾಗಿಯೇ  ರಾಜ್ಯ ಸರ್ಕಾರವನ್ನು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮದನ್ ಗೋಪಾಲ್ ಪ್ರಶ್ನಿಸಿದ್ದಾರೆ.

ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದಟಛಿ ಸಾರ್ವಜನಿಕರು ಬೀದಿಗಿಳಿದ ಬೆನ್ನಲ್ಲೇ ಐಎಎಸ್ ಅಧಿಕಾರಿಗಳು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಸರ್ಕಾರದ ನಿರ್ಧಾರದ ಬಗ್ಗೆ ಬಹಿರಂಗವಾಗಿ ಮಾತನಾಡಲು ರಾಜ್ಯದ ಐಎಎಸ್ ಅಧಿಕಾರಿಗಳು ಹೆದರುತ್ತಿದ್ದಾರೆ. ಆದರೆ ವೈಯಕ್ತಿಕವಾಗಿ ಮಾತನಾಡಿಸಿದಾಗ ಪ್ರತಿಯೊಬ್ಬರೂ ಸಿಬಿಐ ತನಿಖೆ ಆಗ್ರಹಿಸುತ್ತಿದ್ದಾರೆ. ಆದರೆ ಮೊದಲ ಬಾರಿಗೆ ಖಾಸಗಿ ಸುದ್ದಿ ವಾಹಿನಿಯ ಚರ್ಚೆಯಲ್ಲಿ ಕಾಣಿಸಿಕೊಂಡ ಅರಣ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್, `ರಾಜ್ಯ ಸರ್ಕಾರಕ್ಕೆ ಇನ್ನೂ ಕಾಲ ಮಿಂಚಿಲ್ಲ. ಪ್ರಕರಣದ ಗಂಭೀರತೆ ಹಾಗೂ ಜನರ ಆಕ್ರೋಶ ಮನಗಂಡು ಇನ್ನಾದರೂ ಸಿಬಿಐ ತನಿಖೆಗೆ ಆದೇಶಿಸಿದರೆ ಜನರ ಪ್ರೀತಿ ಗಳಿಸಿಕೊಳ್ಳಲು ರಾಜ್ಯ ಸರ್ಕಾರ ಸಫಲವಾಗುತ್ತದೆ.

ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚುವ ಬದಲು ಪ್ರಾಮಾಣಿಕ ತನಿಖೆಯಾಗಲಿ. ಏನೂ ಮುಚ್ಚಿಡುವುದು ಇಲ್ಲದಿರುವಾಗ ಸಿಬಿಐ ತನಿಖೆಗೆ ಭಯಪಡುವ ಅಗತ್ಯವಿಲ್ಲ' ಎಂದು ದಿಟ್ಟ
ಹೇಳಿಕೆ ನೀಡಿದ್ದಾರೆ. ಉತ್ತಿಷ್ಠ ಭಾರತ ನಡೆಸುತ್ತಿರುವ ಆನ್‍ಲೈನ್ ಸಹಿ ಸಂಗ್ರಹಣ ಅಭಿಯಾನದಲ್ಲೂ ಅವರು ಪಾಲ್ಗೊಂಡಿದ್ದಾರೆ.

ರವಿ ಅವರ ಚಾರಿತ್ರ್ಯ ಹರಣ ಮಾಡುವ ಮೂಲಕ ಮತ್ತೊಮ್ಮೆ ಕೊಲೆ ಮಾಡುವ ಪ್ರಯತ್ನ ನಡೆಯುತ್ತಿದೆ. ಅವರ ಸಾವಿನ ಹಿಂದಿನ ಘಟನೆ ಬಗ್ಗೆ ತನಿಖೆಯಾಗಬೇಕಿದೆ. ಪ್ರಾಮಾಣಿಕ ಅಧಿಕಾರಿ ಮೇಲೆ ಸಾಕಷ್ಟು ಬಾಹ್ಯ ಪ್ರಭಾವ ಬೀರಲಾಗಿರುವ ಆರೋಪ ಕೇಳಿಬಂದಿದೆ. ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಅವರ ಸಾವಿನ ನಿಜವಾದ ಕಾರಣ ಗೊತ್ತಾಗಬೇಕು. ಸಾವಿನ ವಿಚಾರ ಬಿಟ್ಟು ಬೇರೆಯದರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿರುವುದು ಬೇಸರದ ವಿಚಾರ.

-ಮದನ್ ಗೋಪಾಲ್
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com