ಹೆಣ್ಮಕ್ಕಳ ಕಣ್ಣೀರು ನಿಂತಿಲ್ಲ: ಸಾರಾಯಿ ನಿಲ್ಲಿಸಬೇಕೇಕೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ `ಭಾಗ್ಯ'ಗಳ ಸರದಿಯಲ್ಲಿ ಇದೀಗ 'ಸಾರಾಯಿ ಭಾಗ್ಯ'ವೂ ಸೇರಿಕೊಳ್ಳುತ್ತಿದೆ!
ಸಾರಾಯಿ
ಸಾರಾಯಿ

ವಿಧಾನಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ `ಭಾಗ್ಯ'ಗಳ ಸರದಿಯಲ್ಲಿ ಇದೀಗ 'ಸಾರಾಯಿ ಭಾಗ್ಯ'ವೂ ಸೇರಿಕೊಳ್ಳುತ್ತಿದೆ!

ಅನ್ಯಭಾಗ್ಯ, ಕೃಷಿಭಾಗ್ಯ, ಶಾದಿಭಾಗ್ಯ ಸರಣಿಗೆ ಸಾರಾಯಿ ಭಾಗ್ಯವೂ ಸದ್ಯದಲ್ಲಿ ಸೇರ್ಪಡೆಯಾಗುವ ಮಾಹಿತಿಯನ್ನು ಸ್ವತಃ ಸಿದ್ದರಾಮಯ್ಯ ನೀಡಿದ್ದಾರೆ. ಸಾರಾಯಿ ನಿಷೇಧ ಹಳ್ಳಿಗಳ ಹೆಣ್ಣು ಮಕ್ಕಳ ಕಣ್ಣೀರನ್ನು ನಿಲ್ಲಿಸಿಲ್ಲ. ಹೀಗಾಗಿ ರಾಜ್ಯದಲ್ಲಿ ಸಾರಾಯಿ ಮತ್ತೆ ಜಾರಿಗೊಳಿಸುವ ಬಗ್ಗೆ ಚಿಂತಿಸಲಾ ಗುತ್ತದೆ ಎಂದು ವಿಧಾನಸಭೆಯಲ್ಲಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, `ಹೊಸ ಮದ್ಯದಂಗಡಿಗೆ ಲೈಸೆನ್ಸ್ ಅಥವಾ ಸಾರಾಯಿ ಅನುಮತಿ ಎರಡರಲ್ಲಿ ಒಂದಕ್ಕೆ ಸಮ್ಮತಿ ನೀಡಲಾಗುತ್ತದೆ' ಎಂದಿದ್ದಾರೆ.

ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ಕಣ್ಣೀರು ನಿಲ್ಲಿಸಬೇಕು ಎಂದು ಹಿಂದಿನ ಸರ್ಕಾರ ಸಾರಾಯಿಯನ್ನು ರಾಜ್ಯದಲ್ಲಿ ನಿಷೇಧಿಸಿತ್ತು. ಆದರೆ, ಆ ಹೆಣ್ಣು ಮಕ್ಕಳ ಕಣ್ಣೀರು ನಿಂತಿಲ್ಲ. ಸಾರಾಯಿ ಪ್ಯಾಕೆಟ್‍ಗೆ ರು.10 ರಿಂದ 12 ಇತ್ತು. ಅದು ಆರೋಗ್ಯ ಹಾಳು ಮಾಡುತ್ತದೆ ಎಂದು ನಿಲ್ಲಿಸಿದರು. ಆದರೆ, ಇದೀಗ ಕುಡಿಯೋದು ನಿಂತಿಲ್ಲ. ಕಣ್ಣೀರು ನಿಂತಿಲ್ಲ. ಕುಡಿಯುವುದಕ್ಕೆ ಎರಡು-ಮೂರು ಪಟ್ಟು ಹೆಚ್ಚು ಹಣ ವ್ಯಯ ಮಾಡುತ್ತಿದ್ದಾರೆ. ಹೀಗಾಗಿ, ಚೀಪ್ ಲಿಕ್ಕರ್ ಕೊಡೋಕೆ ಆಗಲ್ಲ ಎಂದು ವಿವರಿಸಿದರು.

ಬಜೆಟ್ ಮೇಲಿನ ಚರ್ಚಾಭಾಷಣದಲ್ಲಿ ಕಾಂಗ್ರೆಸ್‍ನ ರಮೇಶ್‍ಕುಮಾರ್ ಮಾತನಾಡಿ, 'ಅಬಕಾರಿಯಲ್ಲಿ ಹೊಸ ಲೈಸೆನ್ಸ್ ಕೊಡುತ್ತಿಲ್ಲ. ಹಳ್ಳಿಯ ಕಿರಾಣಿ ಅಂಗಡಿಗಳಲ್ಲೂ ಮದ್ಯ ಸಿಗುತ್ತಿದೆ. ಸೆಕೆಂಡ್ಸ್ ಕಾಲ ಇಲ್ಲ. ನಕಲಿ ಮದ್ಯ ಹೆಚ್ಚಾಗಿದೆ. ಈ ಬಗ್ಗೆ ಒಂದು ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com