ಗರ್ಭಿಣಿ ಕೋತಿಯ ಹೊಟ್ಟೆ ಒಡೆದು ಹೊರ ಬಂದ ಮರಿ

ಗರ್ಭಿಣಿ ಕೋತಿಯೊಂದು ಆಯ ತಪ್ಪಿ ಹದಿನೈದು ಅಡಿ ಮರದ ಮೇಲಿಂದ ಬಿದ್ದ ರಭಸಕ್ಕೆ ಹೊಟ್ಟೆ ಹೊಡೆದು ಮೃತಪಟ್ಟಿದೆ...
ಕೆಳಗೆ ಬಿದ್ದ ಕೋತಿ ಮತ್ತು ಅದರ ಮರಿ
ಕೆಳಗೆ ಬಿದ್ದ ಕೋತಿ ಮತ್ತು ಅದರ ಮರಿ

ಶ್ರಿ ಕುಣಿಗಲ್: ಗರ್ಭಿಣಿ ಕೋತಿಯೊಂದು ಆಯ ತಪ್ಪಿ ಹದಿನೈದು ಅಡಿ ಮರದ ಮೇಲಿಂದ ಬಿದ್ದ ರಭಸಕ್ಕೆ ಹೊಟ್ಟೆ ಹೊಡೆದು ಮೃತಪಟ್ಟಿದೆ.

ತಾಯಿ ಕೋತಿ ಗರ್ಭದಿಂದ ಹೊರಬಿದ್ದ ನವಜಾತ ಮರಿಕೋತಿ ಚರಂಡಿಯಲ್ಲಿ ಬಿದ್ದು ಸಾವು-ಬದುಕಿ ನಡುವೆ ಸೆಣಸಾಡುತ್ತಿದ್ದಾಗ ಅರಣ್ಯ ಇಲಾಖೆ ಆಗಮಿಸಿ ರಕ್ಷಿಸಿ ಘಟನೆ ಭಾನುವಾರ ಪಟ್ಟಣದ 18ನೆ ಬಡಾವಣೆಯ ಹೌಸಿಂಗ್‍ಬೋರ್ಡ್ ಕಾಲೋನಿಯಲ್ಲಿ ನಡೆದಿದೆ.

ಶಾಲೆ ಸಮೀಪದ ಮನೆಯಲ್ಲಿದಲ್ಲೇ ಇದ್ದ ನ್ಯಾಯಾಧೀಶ ಸಾಗರ್ ಜಿ. ಪಾಟೀಲ್ ಅವರು ಕೋತಿಗಳ ಅರಚಾಟ ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಮರಿಕೋತಿ ರಕ್ಷಣೆಗೆ ಮುಂದಾದಾಗ ಇತರೆ ಕೋತಿಗಳು ಪ್ರಾಣಭಯ ಲೆಕ್ಕಿಸದೆ ಸಿಬ್ಬಂದಿ ಮೇಲೆ ದಾಳಿಗೆ ಮುಂದಾದದವು. ಕೂಡಲೇ ಪಟಾಕಿ ಸಿಡಿಸಿ ಕೋತಿಗಳನ್ನು ಚದುರಿಸಲಾಯಿತು. ಇತ್ತ ತಾಯಿ ಹೊಟ್ಟೆಯಿಂದ ಹೊರಬಂದ ಮರಿಕೋತಿ ಸತ್ತ ತಾಯಿ ಕೋತಿಯನ್ನು ಭದ್ರವಾಗಿ ಹಿಡಿದು ಅಲಂಗಿಸಿದ ದೃಶ್ಯ ಮನಕಲುಕುವಂತಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಮರಿಕೋತಿಯ ಕರುಳ ಬಳ್ಳಿ ಕತ್ತರಿಸಿ ನಾಗರಿಕರ ಸಹಕಾರದಿಂದ ಮರಿಕೋತಿಯನ್ನು ಬಿಸಿ ನೀರಿನಿಂದ ಶುಚಿಗೊಳಿಸಿ, ಶುಭ್ರಬಟ್ಟೆಯಲ್ಲಿ ಸುತ್ತಿ ಉಪಚಾರ ಮಾಡಿದರು. ಮೃತ ತಾಯಿ ಕೋತಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com