ಬಂದ್‍ನಿಂದ ಬಂದ ಲಾಭ!

ಕರ್ನಾಟಕ ಬಂದ್ ವೇಳೆ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಶಬ್ದ ಮತ್ತು ವಾಯು ಮಾಲಿನ್ಯದ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಅಷ್ಟೇ ಅಲ್ಲ ಇದರಿಂದ ಜನರಿಗೆ ಸಾಕಷ್ಟು ಸಹಾಯವಾಗಿದೆ ಎಂದು...
ಮೆಜೆಸ್ಟಿಕ್ ಬಸ್ ನಿಲ್ದಾಣ (ಬೆಂಗಳೂರು)
ಮೆಜೆಸ್ಟಿಕ್ ಬಸ್ ನಿಲ್ದಾಣ (ಬೆಂಗಳೂರು)

ಬೆಂಗಳೂರು: ಕರ್ನಾಟಕ ಬಂದ್ ವೇಳೆ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಶಬ್ದ ಮತ್ತು ವಾಯು ಮಾಲಿನ್ಯದ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಅಷ್ಟೇ ಅಲ್ಲ ಇದರಿಂದ ಜನರಿಗೆ ಸಾಕಷ್ಟು ಸಹಾಯವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಏ.18ರಂದು ನಡೆದ ಬಂದ್ ಹಾಗೂ ಅದರ ಹಿಂದಿನ ಸಾಮಾನ್ಯ ದಿನಗಳನ್ನು ಹೋಲಿಸಿ ನೋಡಿದಾಗ ಮಾಲಿನ್ಯ ಪ್ರಮಾಣ ಇಳಿಕೆಯಾಗಿದೆ ಎಂಬುದು ಮಂಡಳಿಯ ನಿಗಾ ಕೇಂದ್ರಗಳ ಅಂಕಿಅಂಶಗಳಿಂದ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಬ್ದ ಮಾಲಿನ್ಯ ಇಳಿಕೆ
ಏ.18ರ ಹಗಲು ವೇಳೆ ಶಬ್ದದ ಪ್ರಮಾಣ ಹಿಂದಿನ ದಿನಕ್ಕಿಂತ ಒಟ್ಟಾರೆ ಶೇ.1.0 ರಿಂದ ಶೇ.9.9ರಷ್ಟು ಇಳಿದಿದೆ. ಬಿಟಿಎಂ ಲೇಔಟ್ ನ ವಸತಿ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ ಶೇ.8.9, ಪೀಣ್ಯದಲ್ಲಿ ಕನಿಷ್ಠ ಪ್ರಮಾಣದಲ್ಲಿ ಅಂದರೆ ಶೇ.2.7, ವೈಟ್ ಫೀಲ್ಡ್ ನಲ್ಲಿ ಶೇ.6.5, ಮಾರತ್ ಹಳ್ಳಿ ವಾಣಿಜ್ಯ ಪ್ರದೇಶದಲ್ಲಿ ಶೇ.2.8 ಯಶವಂತಪುರ ವಾಣಿಜ್ಯ ಪ್ರದೇಶದಲ್ಲಿ ಶೇ.5.5, ಟೇರಿ ಕಚೇರಿ ವಸತಿ ಪ್ರದೇಶದಲ್ಲಿ ಶೇ.6.4 ಹಾಗೂ ಆರ್ ವಿಸಿಇ ಸೂಕ್ಷ್ಮ ಪ್ರದೇಶದಲ್ಲಿ ಶೇ.5.5 ರಷ್ಟು ಶಬ್ಧ ಪ್ರಮಾಣ ಇಳಿಕೆಯಾಗಿದೆ.

ವಾಯು ಮಾಲಿನ್ಯ ಇಳಿಕೆ

ಏ.18ರಂದು ಬೆಂಗಳೂರಿನ ಹಲವು ನಿಗಾ ಪ್ರದೇಶಗಳಲ್ಲಿ ಸರಾಸರಿಯಾಗಿ ಸಲ್ಫರ್ ಡಯಾಕ್ಸೈಡ್‍ನ ಪ್ರಮಾಣ ಶೇ.12, ನೈಟ್ರೋಜನ್‍ಡಯಾಕ್ಸೈಡ್‍ನ ಪ್ರಮಾಣ ಶೇ.25 ಮತ್ತು ಉಸಿರಾಟ ಸಾಧ್ಯ ಕಣ ಪದಾರ್ಥಗಳ ಪ್ರಮಾಣ(ಆರ್‍ಎಸ್‍ಪಿಎಂ: ರೆಸ್ಟೈರಬಲ್ ಸಸ್ಪೆಂಡೆಡ್ ಪಾರ್ಟಿಕ್ಯುಲೇಟ್ ಮ್ಯಾಟರ್) ಶೇ. 40ರಷ್ಟು ಇಳಿದಿರುವುದು ಕಂಡುಬಂದಿದೆ. ಈ ಇಳಿಕೆಯನ್ನು ಏಪ್ರಿಲ್15ರ ಸಾಮಾನ್ಯ ದಿನಕ್ಕೆ ಹೋಲಿಸಲಾಗಿದೆ.

ಎಲ್ಲಿ? ಎಷ್ಟು ಇಳಿಕೆ? (ವಾಣಿಜ್ಯ, ಸೂಕ್ಷ್ಮ, ಔದ್ಯಮಿಕ ಪ್ರದೇಶ)

  • ಹೊಸೂರು ರಸ್ತೆಯ ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್‍ನಲ್ಲಿ ಸಲ್ಫರ್ ಡಯಾಕ್ಸೈಡ್, ನೈಟ್ರೋಜನ್ ಡಯಾಕ್ಸೈಡ್‍ಮತ್ತು ಆರ್‍ಎಸ್‍ಪಿಎಂ ಇವುಗಳ ಪ್ರಮಾಣ ಕ್ರಮವಾಗಿ ಶೇ.11.5, ಶೇ.63.6 ಮತ್ತು ಶೇ.35ರಷ್ಟು ಇಳಿಕೆ.
  • ವಿಕ್ಟೋರಿಯಾ ರಸ್ತೆಯ ಡಿಟಿಡಿಸಿ ಕಚೇರಿಯಲ್ಲಿ ಸಲ್ಫರ್ ಡಯಾಕ್ಸೈಡ್, ನೈಟ್ರೋಜನ್ ಡಯಾಕ್ಸೈಡ್ ಮತ್ತು ಆರ್‍ಎಸ್ ಪಿಎಂ ಇವುಗಳ ಪ್ರಮಾಣ ಕ್ರಮವಾಗಿ ಶೇ.15.9, ಶೇ.8.0 ಮತ್ತು ಶೇ.54.5 ರಷ್ಟು ಇಳಿಕೆ.
  • ನಿಮ್ಹಾನ್ಸ್ ಬಳಿಯ ಇಂದಿರಾ ಗಾಂಧಿ ಚೈಲ್ಡ್ ಹೆಲ್ತ್‍ಕೇರ್ ಸೆಂಟರ್ ನಲ್ಲಿ ಸಲ್ಫರ್ ಡಯಾಕ್ಸೈಡ್, ನೈಟ್ರೋಜನ್ ಡಯಾಕ್ಸೈಡ್ ಮತ್ತು ಆರ್‍ಎಸ್‍ಪಿಎಂ ಇವುಗಳ ಪ್ರಮಾಣ ಕ್ರಮವಾಗಿ ಶೇ.
  • 13.1, ಶೇ. 37.4 ಮತ್ತು ಶೇ.28.7ರಷ್ಟು ಇಳಿಕೆ.
  • ಮೈಸೂರು ರಸ್ತೆಯ ಆಮ್ಕೋ ಬ್ಯಾಟರೀಸ್‍ನಲ್ಲಿ ಸಲ್ಫರ್ ಡಯಾಕ್ಸೈಡ್, ನೈಟ್ರೋಜನ್ ಡಯಾಕ್ಸೈಡ್ ಮತ್ತು ಆರ್‍ಎಸ್ ಪಿಎಂ ಇವುಗಳ ಪ್ರಮಾಣ ಕ್ರಮವಾಗಿ ಶೇ. 8.3, ಶೇ. 17.6 ಮತ್ತು ಶೇ. 50ರಷ್ಟು ಇಳಿಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com