ಫೈವ್ ಸ್ಟಾರ್ ಹೋಟೆಲ್ ಗಳ ನೈಟ್ ಲೈಫ್ ಅವಧಿ ವಿಸ್ತರಣೆಗೆ ಚಿಂತನೆ: ಜಾರ್ಜ್

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಪಂಚತಾರಾ ಹೋಟೆಲ್ ಗಳಲ್ಲಿನ ರಾತ್ರಿ ಸೇವೆಯ ಅವಧಿಯನ್ನು ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದೆ
ಕೆ.ಜೆ.ಜಾರ್ಜ್
ಕೆ.ಜೆ.ಜಾರ್ಜ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಪಂಚತಾರಾ ಹೋಟೆಲ್ ಗಳಲ್ಲಿನ ರಾತ್ರಿ ಸೇವೆಯ ಅವಧಿಯನ್ನು ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ವಾರದ ಎಲ್ಲಾ ದಿನಗಳಲ್ಲಿಯೂ ದಿನದ 24 ಗಂಟೆ ಊಟ ಹಾಗೂ ಮದ್ಯ ಸರಬರಾಜಿಗೆ ಅವಕಾಶ ನೀಡಬೇಕೆಂದು ಐಟಿ-ಬಿಟಿ ವಲಯದ ನೌಕರರು ಮನವಿ ಮಾಡಿದ್ದಾರೆ. ತಡರಾತ್ರಿ ಕೆಲಸ ಮುಗಿಸಿಕೊಂಡು ಬರುವ ಉದ್ಯೋಗಿಗಳಿಗೆ ಉತ್ತಮ ಊಟದ ಅವಶ್ಯಕತೆ ಇರುತ್ತದೆ, ಹೀಗಾಗಿ ವಾರದ ಎಲ್ಲ ದಿನಗಳಲ್ಲಿಯೂ ಲೈಟ್ ನೈಟ್ ಅವಧಿ ವಿಸ್ತರಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅವರು ಹೇಳಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ಬೆಂಗಳೂರಿಗೆ ವಿದೇಶಿ ಪ್ರವಾಸಿಗರು ಹಾಗೂ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರ ಅನುಕೂಲಕ್ಕಾಗಿ ಅವಧಿ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಸಂಬಂಧ ಶೀಘ್ರವೇ ಐಟಿ. ಬಿಟಿ ವಲಯ, ಪ್ರವಾಸೋದ್ಯಮ ಹಾಗೂ ಅಬಕಾರಿ ಇಲಾಖೆಗಳ ಜೊತೆ ಸಮಾಲೋಚಿಸಿ ಅವಧಿ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಾರದ ಎರಡು ದಿನ ಅಂದರೆ ಶುಕ್ರವಾರ ಹಾಗೂ ಶನಿವಾರ ಮಧ್ಯರಾತ್ರಿ 1 ಗಂಟೆ ವರೆಗೆ ಬಾರ್ ಮತ್ತು ರೆಸ್ಟೋರೆಂಟ್ ಗಳು ತೆರೆದಿರುತ್ತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com