ನಗರದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ 15ರವರೆಗೂ ವಿಸ್ತರಣೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಂತಿಮ ದಿನ ಮೇ 15ಕ್ಕೆ ವಿಸ್ತರಣೆಯಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಂತಿಮ ದಿನ ಮೇ 15ಕ್ಕೆ ವಿಸ್ತರಣೆಯಾಗಿದೆ.

ಸಮೀಕ್ಷೆಗೆ ಮೇ 10 ಕೊನೆಯ ದಿನವಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕ ಕುಟುಂಬಗಳಿರುವುದರಿಂದ ಹಾಗೂ ವ್ಯಾಪ್ತಿ ದೊಡ್ಡದಾಗಿರುವುದರಿಂದ ಸಮೀಕ್ಷೆಯ ಅಂತಿಮ ದಿನವನ್ನು 5 ದಿನಗಳಿಗೆ ಎರಡನೇ ಬಾರಿ ವಿಸ್ತರಿಸಲಾಗಿದೆ. ಕೊನೆಯ ದಿನ ಶೇ.95ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಸೋಮವಾರ ಮುಂದವರಿದ ಸಮೀಕ್ಷೆಯಲ್ಲಿ ಶೇ.5 ರಷ್ಟು ಕುಟುಂಬಗಳನ್ನು ತಲುಪಲಾಗಿದೆ. 2011ರ ಜನಗಣತಿ ಪ್ರಕಾರ ನಗಪದಲ್ಲಿ 21,01,831 ಕುಟುಂಬಗಳು ವಾಸವಿದ್ದು, ಇದುವರೆಗೆ 21 ಲಕ್ಷ ಕುಟುಂಬಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಲಾಗಿದೆ. ಜನಗಣತಿ ಹಳೆಯದಾಗಿರುವುದರಿಂದ ನಾಲ್ಕು ವರ್ಷಗಳಲ್ಲಿ ಹೆಚ್ಚುವರಿಯÁಗಿ 2 ಲಕ್ಷ ಕುಟುಂಬ ಗಳು ನಗರದಲ್ಲಿರಬಹುದು ಎಂದು ಅಂದಾಜಿಸಲಾಗಿದೆ.

ನಗರದಲ್ಲಿ 18 ಸಾವಿರ ಬ್ಲಾಕ್ ಗಳನ್ನು ಗುರುತಿಸಿದ್ದು, ಪ್ರತಿ ಬ್ಲಾಕ್ ಗಳಲ್ಲಿ 150-200 ಕುಟುಂಬಗಳು ವಾಸಿಸುತ್ತಿವೆ ಎಂದು ಅಂದಾಜಿಸಲಾಗಿದೆ. 18ಸಾವಿರ ಗಣತಿ ದಾರರು, 3ಸಾವಿರ ಮೇಲ್ವಿಚಾರಕರು ಹಾಗೂ 165 ಮಾಸ್ಟರ್ ಟ್ರೈನರ್ಸ್, 198 ಚಾರ್ಜ್ ಅಧಿಕಾರಿಗಳು ಹಾಗೂ 198 ಹೆಚ್ಚುವರಿ ಚಾರ್ಜ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಆದರೆ ನಗರದ ಬೃಹದಾಕಾರವಾಗಿ ಬೆಳೆದಿರುವುದರಿಂದ ನಿಗದಿತ ಸಮಯದಲ್ಲಿ ಎಲ್ಲ ಕುಟುಂಬಗಳನ್ನು ತಲುಪಲು ಗಣತಿದಾರರಿಗೆ ಸಾಧ್ಯವಾಗಿಲ್ಲ.

ನಗರದ ವ್ಯಾಪ್ತಿ ದೊಡ್ಡದಿರುವುದರಿಂದ ಎಲ್ಲ ಕುಟಂಬಗಳನ್ನು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಅಂತಿಮ ದಿನವನ್ನು ವಿಸ್ತರಿಸಲಾಗಿದೆ. 2011ರ ಜನಗಣತಿ ಪ್ರಕಾರ ದಾಖಲಾದ ಎಲ್ಲ ಕುಟಂಬಗಳನ್ನು ತಲುಪಿದ್ದು, ಶೇ.101ರಷ್ಟು ಯಶಸ್ವಿಯಾಗಿದೆ. ಆದರೆ ನಂತರದ ವರ್ಷಗಳಲ್ಲಿ ಮತ್ತಷ್ಟು ಕುಟುಂಬಗಳು ಸೇರ್ಪಡೆಯಾಗಿದ್ದು, ಈ ಕುಟುಂಬಗಳನ್ನು ತಲುಪಬೇಕಿದೆ.

ಸಿದ್ದೂಜಿರಾವ್, ಬಿಬಿಎಂಪಿ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com