ಬೆಂಕಿ ಕಾಣಿಸಿಕೊಂಡ ಬೆಳ್ಳಂದೂರು ಕೆರೆ
ಬೆಂಕಿ ಕಾಣಿಸಿಕೊಂಡ ಬೆಳ್ಳಂದೂರು ಕೆರೆ

ಬೆಳ್ಳಂದೂರು ಕೆರೆಯಲ್ಲಿ ಮತ್ತೊಮ್ಮೆ ಬೆಂಕಿ: ಸ್ಥಳೀಯರಲ್ಲಿ ಆತಂಕ

ಬೆಳ್ಳಂದೂರಿನ ಅಮಾನಿ ಕೆರೆಯ ಕೋಡಿಯಲ್ಲಿ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದ್ದು...

ಬೆಂಗಳೂರು : ಬೆಳ್ಳಂದೂರಿನ ಅಮಾನಿ ಕೆರೆಯ ಕೋಡಿಯಲ್ಲಿ  ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

ಕೆರೆಯಲ್ಲಿ ಸೇರುತ್ತಿರುವ ರಾಸಾಯನಿಕಗಳ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು ಕಳೆದ ರಾತ್ರಿಯಿಂದಳು ಬೆಂಕಿ ಹೊತ್ತಿ ಉರಿಯುತ್ತಿದೆ. ಕರಿಯಮ್ಮನ ಅಗ್ರಹಾರ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ತೊಂದರೆಯುಂಟಾಗುತ್ತಿದೆ. ಕರೆಯ ನೀರಿನಲ್ಲಿ ನೊರೆ ಶೇಖರಣೆಯಾಗಿದ್ದು, ರಾಸಾಯನಿಕದ ಪ್ರಮಾಣ ಹೆಚ್ಚಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಕೆರೆ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಗಳನ್ನು ನಿರ್ಮಿಸಿರುವ ಕಾರಣ ಕೆರೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇಷ್ಟಾದರೂ ಬಿಡಿಎ, ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸದೆ ಇರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೇ.17ರಂದೂ ಇಂತದ್ದೆ ಘಟನೆ ನಡೆದಿತ್ತು.  ಕೆರೆಯಲ್ಲಿ ರಾಸಾಯನಿಕಗಳು ಸೇರದಂತೆ ಕ್ರಮ ಕೈಗೊಂಡಿರುವ ಬಗ್ಗೆ ಉಪಲೋಕಾಯುಕ್ತರು ಬಿಬಿಎಂಪಿ, ಬಿಡಿಎ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸುರುವ ನಾಗರಿಕರು ಅಧಿಕಾರಿಗಳ ನಿರ್ಲಕ್ಷವನ್ನು ಖಂಡಿಸಿ ಮೇ.20 ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ . 

Related Stories

No stories found.

Advertisement

X
Kannada Prabha
www.kannadaprabha.com