ನಿನ್ನೆ ಸುರಿದ ಭಾರಿ ಮಳೆಯಿಂದ ಸಂಚಾರ ದಟ್ಟಣೆ

ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಎಂ.ಜಿರಸ್ತೆ, ಶಾಂತಿನಗರ, ರಿಚ್ಮಂಡ್ ರಸ್ತೆ, ಆಡುಗೋಡಿ ಮುಂತಾದ ...
ಮಳೆಯಿಂದ ಸಂಚಾರ ಅಸ್ತವ್ಯಸ್ತ
ಮಳೆಯಿಂದ ಸಂಚಾರ ಅಸ್ತವ್ಯಸ್ತ

ಬೆಂಗಳೂರು: ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಎಂ.ಜಿರಸ್ತೆ, ಶಾಂತಿನಗರ, ರಿಚ್ಮಂಡ್ ರಸ್ತೆ, ಆಡುಗೋಡಿ ಮುಂತಾದ ರಸ್ತೆಗಳಲ್ಲಿ ವಾಹನಗಳು ಗಂಟೆ ಗಟ್ಟಲೇ ನಿಂತಿದ್ದವು.ನಗರದ ಕಡೆಯಿಂದ  ಮಡಿವಾಳ ಹಾಗೂ ಮಡಿವಾಳ ಕಡೆಯಿಂದ ನಗರದ ಕಡೆ ಆಗಮಿಸುತ್ತಿದ್ದ ವಾಹನಗಳು ಸುಮಾರು 2 ತಾಸು ನಿಂತಲ್ಲೇ ನಿಂತಿದ್ದವು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಎನ್.ಎ ಹ್ಯಾರಿಸ್, ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಸಂಬಂಧ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದೆ, ಮಳೆ ಆರಂಭವಾದ ಕಾರಣ ಬೈಕ್  ಅನ್ನು ರಸ್ತೆಯಲ್ಲಿ ನಿಲ್ಲಿಸಿ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದೆ, ಈ ವೇಳೆ ಸುಮಾರು 15 ಕ್ಕೂ ಹೆಚ್ಚು ಮಂದಿ ನಿಂತಿದ್ದರು. ಮರ ಕೆಲ ಸೆಕೆಂಡ್ ಅಲುಗಾಡಿದಾಗ ಸದ್ದು ಕೇಳಿ ಬಂತು. ಓಡಿ ಹೋಗುವಷ್ಟರಲ್ಲಿ ಯೇ ಮರ ಬಿತ್ತು. ಕೆವಲರು ತಪ್ಪಿಸಿಕೊಂಡರು. ಉಳಿದವರಿಗೆ ಸಾಧ್ಯವಾಗಲಿಲ್ಲ.  ಮಹದೇವಸ್ವಾಮಿ, ಪ್ರತ್ಯಕ್ಷ ದರ್ಶಿ,

5.39ಕ್ಕೆ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು, ಕೂಡಲೇ ಒಂದು ರಕ್ಷಣಾ ವಾಹನ, 30ಕ್ಕೂ ಹೆಚ್ಚು ಸಿಬ್ಬಂದಿ ತೆರಳಿದವು. ಸುಮಾರು 2 ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಲಾಯಿತು. ಸಿ. ಬಸವಣ್ಣ, ಮುಖ್ಯ ಅಗ್ನಿ ಶಾಮಕ ಅಧಿಕಾರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com