ನಿತ್ಯೋತ್ಸವ ಕವಿ ಕೆಎಸ್ ನಿಸಾರ್ ಆಹ್ಮದ್
ನಿತ್ಯೋತ್ಸವ ಕವಿ ಕೆಎಸ್ ನಿಸಾರ್ ಆಹ್ಮದ್

ಸಾಹಿತಿ ನಿಸಾರ್ ಅಹಮದ್ ಗೆ 'ರಾಷ್ಟ್ರಕವಿ' ಸ್ಥಾನ..?

ಹೆಸರಾಂತ ಸಾಹಿತಿ ಹಾಗೂ ಜನಪ್ರಿಯ ನಿತ್ಯೋತ್ಸವ ಕವಿ ಕೆಎಸ್ ನಿಸಾರ್ ಅಹಮದ್ ಅವರಿಗೆ ರಾಷ್ಟ್ರಕವಿ ಸ್ಥಾನ ನೀಡುವ ಕುರಿತು ರಾಜ್ಯ ಸರ್ಕಾರ ಚರ್ಚೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ...

ಬೆಂಗಳೂರು: ಹೆಸರಾಂತ ಸಾಹಿತಿ ಹಾಗೂ ಜನಪ್ರಿಯ ನಿತ್ಯೋತ್ಸವ ಕವಿ ಕೆಎಸ್ ನಿಸಾರ್ ಅಹಮದ್ ಅವರಿಗೆ ರಾಷ್ಟ್ರಕವಿ ಸ್ಥಾನ ನೀಡುವ ಕುರಿತು ರಾಜ್ಯ ಸರ್ಕಾರ ಚರ್ಚೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಜಿಎಸ್ ಶಿವರುದ್ರಪ್ಪ ಅವರ ನಿಧನದಿಂದಾಗಿ ತೆರವಾಗಿರುವ ರಾಷ್ಟ್ರಕವಿ ಸ್ಥಾನಕ್ಕೆ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರನ್ನು ಕೂರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗಿರುವ ವಿವೇಚನೆಯ ಅಧಿಕಾರ ಬಳಸಿ ಶೀಘ್ರದಲ್ಲಿಯೇ ರಾಷ್ಟ್ರಕವಿ ಸ್ಥಾನಕ್ಕೆ ನಿಸಾರ್ ಅಹಮದ್ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಹೇಳಲಾಗುತ್ತಿದೆ.

ತೆರವಾಗಿರುವ ರಾಷ್ಟ್ರಕವಿ ಸ್ಥಾನಕ್ಕೆ ಸಾಹಿತಿಗಳ ಹೆಸರನ್ನು ಶಿಫಾರಸು ಮಾಡಲು ಸರ್ಕಾರ ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಿತ್ತು. ಆದರೆ, ಈ ಸಮಿತಿ ರಾಷ್ಟ್ರಕವಿ ಪಟ್ಟಕ್ಕೆ ಸಾಹಿತಿಗಳ ಹೆಸರನ್ನು ಶಿಫಾರಸು ಮಾಡುವ ಬದಲು "ರಾಷ್ಟ್ರಕವಿ ಪ್ರಶಸ್ತಿ" ನೀಡುವುದು ಸರಿಯಲ್ಲ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬ ವರದಿಯನ್ನು ನೀಡಿತ್ತು. ಅಲ್ಲದೆ ರಾಷ್ಟ್ರಕವಿ ಪ್ರಶಸ್ತಿಗೆ ಯಾರ ಹೆಸರನ್ನು ಕೂಡ ಶಿಫಾರಸು ಮಾಡಿರಲಿಲ್ಲ. ಹೀಗಾಗಿ ಸರ್ಕಾರವೇ ರಾಷ್ಟ್ರಕವಿ ಹೆಸರನ್ನು ಅಂತಿಮಗೊಳಿಸಿ ಅಧಿಕೃತವಾಗಿ ಪ್ರಕಟಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರಕವಿ ಪ್ರಶಸ್ತಿ ನೀಡುವಿಕೆಗೆ ಸಂಬಂಧಿಸಿದಂತೆ ಸಾಹಿತ್ಯ ವಲಯದಲ್ಲಿ ಹಲವು ಭಿನ್ನಾಭಿಪ್ರಾಯಗಳಿದ್ದು, ಇದುವರೆಗೂ ರಾಜ್ಯದಲ್ಲಿ ನಡೆದುಬಂದಿರುವ ಸಂಪ್ರದಾಯದಂತೆ ರಾಷ್ಟ್ರಕವಿ ಪ್ರಶಸ್ತಿಯನ್ನು ಮುಂದುವರಿಸುವುದು ಸೂಕ್ತ ಎಂಬುದು ಬಹುತೇಕ ಸಾಹಿತಿಗಳ ಅಭಿಪ್ರಾಯವಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮತ್ತೊಂದು ಬಣ ಸಂವಿಧಾನದಲ್ಲಿ ರಾಷ್ಟ್ರಕವಿ ಪ್ರಶಸ್ತಿ ನೀಡುವಿಕೆಗೆ ಅವಕಾಶವಿಲ್ಲ ಎಂದು ವಾದಿಸಿವೆ.

ಈ ಹಿಂದೆ ರಾಷ್ಟ್ರಕವಿ ಪಟ್ಟವನ್ನು ಅಲಂಕರಿಸಿದವರಲ್ಲಿ ಎಂ.ಗೋವಿಂದ ಪೈ ಮೊದಲಿಗರಾಗಿದ್ದು, ಆನಂತರ ಕವಿ ಡಾ.ಕೆ.ವಿ.ಪುಟ್ಟಪ್ಪ (ಕುವೆಂಪು) ರಾಷ್ಟ್ರಕವಿ ಪ್ರಶಸ್ತಿಗೆ ಭಾಜನರಾಗಿದ್ದರು. ಮೂರನೆಯವರಾಗಿ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ರಾಷ್ಟ್ರಕವಿಯಾಗಿದ್ದರು.

Related Stories

No stories found.

Advertisement

X
Kannada Prabha
www.kannadaprabha.com