ಮಳೆಗೆ 50 ಮರಗಳಿಗೆ ಹಾನಿ

ನಗರದಲ್ಲಿ ಭಾನುವಾರ ಸುರಿದ ಮಳೆಗೆ 50 ಮರಗಳಿಗೆ ಹಾನಿಯಾಗಿದ್ದು, ಕೆಲವೆಡೆ ವಿದ್ಯುತ್ ಕಂಬಗಳು ಬಿದ್ದು ವಾಹನಗಳು ಜಖಂಗೊಂಡಿವೆ. ವಿದ್ಯಾರಣ್ಯಪುರ...
ಮಳೆಗೆ ಧರೆಗುರುಳಿದ ಮರ (ಕೃಪೆ: ಕೆಪಿಎನ್)
ಮಳೆಗೆ ಧರೆಗುರುಳಿದ ಮರ (ಕೃಪೆ: ಕೆಪಿಎನ್)

ಕೆರೆಯಂತಾದ ರಸ್ತೆಗಳು, ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದು ವಾಹನಗಳ ಜಖಂ
ಬೆಂಗಳೂರು: ನಗರದಲ್ಲಿ ಭಾನುವಾರ ಸುರಿದ ಮಳೆಗೆ 50 ಮರಗಳಿಗೆ ಹಾನಿಯಾಗಿದ್ದು, ಕೆಲವೆಡೆ ವಿದ್ಯುತ್ ಕಂಬಗಳು ಬಿದ್ದು ವಾಹನಗಳು ಜಖಂಗೊಂಡಿವೆ. ವಿದ್ಯಾರಣ್ಯಪುರದ ನಂಜಪ್ಪ ಲೇಔಟ್ ಸೇರಿದಂತೆ ಹಲವೆಡೆಯಿಂದ 10ಕ್ಕೂ ಅಧಿಕ ದೂರುಗಳು ಬಂದಿದ್ದು, ಕೂಡಲೇ ಬಿಬಿಎಂಪಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿ 7-8 ಮರಗಳು ಹಾನಿಯಾಗಿದ್ದು, ಕೆಲವೆಡೆ ಇಡೀ ಮರ, ಮತ್ತೆ ಕೆಲವೆಡೆ ಸಣ್ಣ ಕೊಂಬೆಗಳು ನೆಲಕ್ಕುರುಳಿವೆ. ವಿದ್ಯಾರಣ್ಯಪುರದಲ್ಲಿ ವಿದ್ಯುತ್ ಕಂಬದ ಮೇಲೆ ಮರದ ಕೊಂಬೆಗಳು ಉರುಳಿ ಬಿದ್ದಿದ್ದು, ಪಕ್ಕದ ರಸ್ತೆಯಲ್ಲಿದ್ದ ಕಾರು ಜಖಂಗೊಂಡಿದೆ. ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿ ಜೊತೆಗೆ ಬೆಸ್ಕಾಂ ಸಿಬ್ಬಂದಿ ಹಾಗೂ ಸಾರ್ವಜನಿಕರುಸೇರಿಕೊಂಡು ವಿದ್ಯುತ್ ಕಂಬ ತೆರವುಗೊಳಿಸಿದ್ದಾರೆ. ಇದೇ ಪ್ರದೇಶದಲ್ಲಿ ಕೊಂಬೆಗಳು ಬಿದ್ದಿದ್ದರಿಂದ ಬೈಕ್‍ಗಳಿಗೂ ಹಾನಿಯಾಗಿದೆ.
ಕಾರ್ಯಾಚರಣೆಗೆ ಅರಣ್ಯ ಸಿಬ್ಬಂದಿಯ ಕೊರತೆ ಉಂಟಾಗಿದೆ. ಹೀಗಾಗಿ ಪಕ್ಕದ ಬಿಬಿಎಂಪಿ ವಲಯಗಳಿಂದ ಅರಣ್ಯ ಇಲಾಖೆಯ ಎರಡು ತಂಡವನ್ನು ಕರೆಸಲಾಗಿದೆ. `ವಿದ್ಯಾರಣ್ಯಪುರದಲ್ಲಿ ಮರ ಬಿದ್ದಿರುವ ಬಗ್ಗೆ 10ಕ್ಕೂ ಅಧಿಕ ದೂರು ಬಂದಿದ್ದು, ಕಾರ್ಯಾಚರಣೆ ನಡೆಸಲಾಗಿದೆ. ಬಿಬಿಎಂಪಿ ಅರಣ್ಯ ಸಿಬ್ಬಂದಿ ತಂಡದ ಕೊರತೆಯಿಂದ ಯಲಹಂಕ ಸೇರಿ ಕೆಲವು ವಲಯಗಳಿಂದ 2 ತಂಡಗಳನ್ನು ಕರೆಸಿಕೊಳ್ಳಲಾಗಿದೆ.


ಸಿವಿಲ್ ಡಿಫೆನ್ಸ್ ಹಾಗೂ ಸಾರ್ವಜನಿಕರು ಕಾರ್ಯಾಚರಣೆಗೆ ನೆರವಾಗಿದ್ದಾರೆ' ಎಂದು ಬಿಬಿಎಂಪಿ ಉಪ ವಲಯ ಅರಣ್ಯಾಧಿಕಾರಿ ರಾಧಾಕೃಷ್ಣ ಅವರು ತಿಳಿಸಿದ್ದಾರೆ. ಯಲಹಂಕದ ಮಾರುತಿನಗರ, ಯಲಹಂಕ ಓಲ್ಡ್ ಟೌನ್ ಹಾಗೂ ನ್ಯೂ ಟೌನ್, ಕೊಡಿಗೇಹಳ್ಳಿ, ಸಹಕಾರ ನಗರ, ಡಾಲರ್ಸ್ ಕಾಲೋನಿ, ಆರ್‍ಎಂಎ, ಸಂಜಯ ನಗರ, ಅನಿಲ್‍ಕುಂಬ್ಳೆ ವೃತ್ತ, ಸಂಪಂಗಿರಾಮನಗರ, ನೀಲಸಂದ್ರ, ಆರ್.ಟಿ ನಗರ, ಮನೋರಾಯನಪಾಳ್ಯ, ಕೆ.ಆರ್.ಪುರ, ಬಸವನಪುರದಲ್ಲಿ ಮರ, ಕೊಂಬೆಗಳು ಬಿದ್ದಿವೆ. ದಾಸರಹಳ್ಳಿ ವಲಯದ ಎಂಎ ಬಡಾವಣೆಯ 14ನೇ ಅಡ್ಡರಸ್ತೆ, ಜಕ್ಕಸಂದ್ರ, ಗಿಡ್ಡದಹಳ್ಳಿ, ಎಜಿಬಿ ಬಡಾವಣೆ, ಭೈರವೇಶ್ವರ ನಗರ, ಬಾಗಲಗುಂಟೆ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 10 ಮರಗಳಿಗೆ ಹಾನಿಯಾಗಿದೆ. ದಕ್ಷಿಣ ವಲಯದ ವಿಜಯನಗರ, ಬನಶಂಕರಿ ಹಾಗೂ ಜೆಪಿ ನಗರ ಪ್ರದೇಶಗಳಲ್ಲಿ ಮರ ಹಾಗೂ ಕೊಂಬೆಗಳು ನೆಲಕ್ಕುರುಳಿವೆ.

ಎಲ್ಲೆಲ್ಲಿ, ಎಷ್ಟು ಮಳೆ?: ನಗರದ ನಾನಾ ಪ್ರದೇಶಗಳಲ್ಲಿ  ಹೆಚ್ಚಿನ ಮಳೆ ಪ್ರಮಾಣ ದಾಖಲಾಗಿದೆ. ಬಿದರಹಳ್ಳಿ 70 ಮಿ.ಮೀ, ಬೊಮ್ಮಸಂದ್ರ 41ಮಿ.ಮೀ, ಮಾದಾವರ
23.5ಮಿ.ಮೀ, ಯಲಹಂಕದ ಉತ್ತರ ಭಾಗ 4.5ಮಿ.ಮೀ, ಕೊಡಿಗೇಹಳ್ಳಿ 26.5ಮಿ.ಮೀ, ವಿದ್ಯಾರಣ್ಯಪುರ 32.5ಮಿ.ಮೀ, ಬ್ಯಾಟರಾಯನಪುರ 16.5ಮಿ.ಮೀ, ವಡೇರಹಳ್ಳಿ 20.5ಮಿ.ಮೀ, ದೊಡ್ಡಬೊಮ್ಮಸಂದ್ರ 11.5ಮಿ.ಮೀ, ಜಕ್ಕೂರು 27.5ಮಿ.ಮೀ, ಯಶವಂತಪುರ 33.5ಮಿ.ಮೀ, ಪೀಣ್ಯ ಕೈಗಾರಿಕಾ ನಗರ 26.5ಮಿ.ಮೀ, ಚಿಕ್ಕಬಾಣಾವರದಲ್ಲಿ 31ಮಿ. ಮೀ ಪ್ರಮಾಣದ ಮಳೆಯಾಗಿದೆ. ಸೋಮಶೆಟ್ಟಿಹಳ್ಳಿ 31ಮಿ.ಮೀ, ಮÁರುತಿಮಂದಿರ 8.5ಮಿ.ಮೀ, ದಾಸರಹಳ್ಳಿ ಬಳಿಯ ಹೆಗ್ಗನಹಳ್ಳಿ 19.5ಮಿ.ಮೀ,ಬಾಗಲಗುಂಟೆ 33.5ಮಿ.ಮೀ, ಶೆಟ್ಟಿಹಳ್ಳಿ 43ಮಿ.ಮೀ, ಚೊಕ್ಕಸಂದ್ರ 36.5ಮಿ.ಮೀ, ಶಿವನಗರ 9.5ಮಿ.ಮೀ, ಮನೋರಾಯನಪಾಳ್ಯ 44.5ಮಿ.ಮೀ, ಗುಟ್ಟಹಳ್ಳಿ 18ಮಿ.ಮೀ, ದೊಡ್ಡಬಿದರಕಲ್ಲು 23ಮಿ.ಮೀ, ನಂದಿನಿ ಲೇಔಟ್ 17ಮಿ.ಮೀ, ನಾಗರಬಾವಿ 7.5ಮಿ.ಮೀ, ಆರ್.ಆರ್ ನಗರ ಬಳಿಯ ಎಎಂಟಿ 19.5ಮಿ.ಮೀ,
ಸಿಂಗಸಂದ್ರ 10.5ಮಿ.ಮೀ, ರಾಮೋಹಳ್ಳಿ 22ಮಿ. ಮೀ, ಕೆಂಗೇರಿ 27.5ಮಿ.ಮೀ, ತಾವರೆಕೆರೆ 12ಮಿ. ಮೀ, ಆವಲಹಳ್ಳಿ 32ಮಿ.ಮೀ, ಮಂಡೂರು 46ಮಿ. ಮೀ, ರಾಮಮೂರ್ತಿನಗರ 27ಮಿ.ಮೀ, ಬಸವನ ಪುರ 30ಮಿ.ಮೀ, ವರ್ತೂರು 29.5ಮಿ.ಮೀ, ಬೆಳ್ಳಂದೂರಿನಲ್ಲಿ 29ಮಿ.ಮೀ ಪ್ರಮಾಣದ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com