ಬಿಬಿಎಂಪಿ: ಪರರ ಪಾಲಾದ ಪಾಲಿಕೆ ಸ್ಮಶಾನ

ಭೈರಸಂದ್ರ ವಾರ್ಡ್ ವ್ಯಾಪ್ತಿಯ ರುತ200 ಕೋಟಿ ಮೌಲ್ಯ 2 ಎಕರೆ ಸ್ಮಶಾನ ಬಿಬಿಎಂಪಿ ನಿರ್ಲಕ್ಷ್ಯದಿಂದ ಕೈ ಬಿಟ್ಟುಹೋಗಿದ್ದು, ಮೇಯರ್ ಮಂಜುನಾಥ ರೆಡ್ಡಿ ಪಾಲಿಕೆ ಕಾನೂನು ಕೋಶದ ಅಧಿಕಾರಿಗಳನ್ನು ಸೋಮವಾರ ತೀವ್ರ...
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)

ಬೆಂಗಳೂರು: ಭೈರಸಂದ್ರ ವಾರ್ಡ್ ವ್ಯಾಪ್ತಿಯ ರುತ200 ಕೋಟಿ ಮೌಲ್ಯ 2 ಎಕರೆ ಸ್ಮಶಾನ ಬಿಬಿಎಂಪಿ ನಿರ್ಲಕ್ಷ್ಯದಿಂದ ಕೈ ಬಿಟ್ಟುಹೋಗಿದ್ದು, ಮೇಯರ್  ಮಂಜುನಾಥ ರೆಡ್ಡಿ ಪಾಲಿಕೆ ಕಾನೂನು ಕೋಶದ ಅಧಿಕಾರಿಗಳನ್ನು ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡರು.

ಭೈರಸಂದ್ರ ವಾರ್ಡ್‍ನ ಸ.ನಂ.89/6 ರಲ್ಲಿ 2 ಎಕರೆ ಸ್ಮಶಾನವನ್ನು ಜೈಕುಮಾರ್ ಎಂಬುವರು ತಮ್ಮ ಆಸ್ತಿ ಎಂದು ಹೇಳಿ, ಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪು ಅವರ ಪರವಾಗಿಯೇ ಬಂದಿದೆ. ಆದರೆ ತೀರ್ಪಿನ ಪ್ರತಿ ಇನ್ನೂ ಬಿಬಿಎಂಪಿ ಕೈ ಸೇರಿಲ್ಲ.ಈ ಹಿನ್ನೆಲೆ ಯಲ್ಲಿ ಮೇಯರ್ ಮಂಜುನಾಥ ರೆಡ್ಡಿ, ಪರಿಶೀಲನೆ ನಡೆಸಿದರು.

ತೀವ್ರ ತರಾಟೆ: ಪರಿಶೀಲಿಸಿದ ನಡೆಸಿದ ಮೇಯರ್, ಪಾಲಿಕೆ ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ ಸೇರಿದಂತೆ ಅಧಿಕಾರಿಗಳ ನ್ನು ತರಾಟೆಗೆ ತೆಗೆದುಕೊಂಡರು. ಬಿಬಿಎಂಪಿಗೆ ಸೇರಿದ್ದ ಸ್ಮಶಾನದ ಜಾಗ ಖಾಸಗಿಯವರು ಪಡೆಯುವ ಸಂದರ್ಭ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೇಯರ್ ಆದೇಶ: ವಕೀಲ ಬಿ.ವಿ. ಅಂಗಡಿ ಅವರನ್ನು ಪ್ಯಾನಲ್ ನಿಂದ ಬಿಡುಗಡೆ ಮಾಡಬೇಕು. ಪ್ಯಾನಲ್ ನಿಂದ ಬಿಡುಗಡೆ ಮಾಡಬೇಕು. ಸ್ಮಶಾನದ ಒಳಗೆ ಪ್ರತಿವಾದಿ ಪುರಾತನ ಅವಶೇಷ ನಾಶ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಬೇಕು. ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಗ ವಾಪಸ್ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ ರೆಡ್ಡಿ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com