ನಿಯಮ ಮೀರಿ ನಿರ್ಮಾಣಕ್ಕೆ ಹಾಕಲಿದೆ ಬಿಬಿಎಂಪಿ ಕಡಿವಾಣ

ರಸ್ತೆ ವಿಸ್ತೀರ್ಣಕ್ಕೆ ತಕ್ಕಂತೆ ಕಟ್ಟಡ ನಿರ್ಮಿಸುವಲ್ಲಿ ನಡೆಯುತ್ತಿರುವ ಅಕ್ರಮ ತಡೆಯಲು ಎಲ್ಲ ರಸ್ತೆಗಳಲ್ಲೂ ಒಂದೇ ರೀತಿಯ ಎಫ್ಎಆರ್ ನಿಯಮ ಅನುಸರಿಸಲು ಬಿಬಿಎಂಪಿ ಮುಂದಾಗಿದೆ...
ಬಿಬಿಎಂಪಿ (ಸಂಗ್ರಹ ಚಿತ್ರ)
ಬಿಬಿಎಂಪಿ (ಸಂಗ್ರಹ ಚಿತ್ರ)

ಬೆಂಗಳೂರು: ರಸ್ತೆ ವಿಸ್ತೀರ್ಣಕ್ಕೆ ತಕ್ಕಂತೆ ಕಟ್ಟಡ ನಿರ್ಮಿಸುವಲ್ಲಿ ನಡೆಯುತ್ತಿರುವ ಅಕ್ರಮ ತಡೆಯಲು ಎಲ್ಲ ರಸ್ತೆಗಳಲ್ಲೂ ಒಂದೇ ರೀತಿಯ ಎಫ್ಎಆರ್ ನಿಯಮ ಅನುಸರಿಸಲು ಬಿಬಿಎಂಪಿ ಮುಂದಾಗಿದೆ.

ಕಟ್ಟಡಗಳನ್ನು ನಿರ್ಮಿಸುವಾಗ ರಸ್ತೆ ವಿಸ್ತೀರ್ಣಕ್ಕೆ ತಕ್ಕಂತೆ ಮಹಡಿಗಳನ್ನು ನಿರ್ಮಿಸಲು ಅನುಮತಿ ನೀಡಲಾಗುತ್ತಿದೆ. ಆದರೆ ನಗರದಲ್ಲಿರುವ ಕೆಲವು ಬಿಲ್ಡರ್ ಗಳು ಈ ಅವಕಾಶ ಬಳಸಿಕೊಂಡು ಮಹಡಿಗಳನ್ನು ಹೆಚ್ಚಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಬಿಬಿಎಂಪಿಯಿಂದ ಸುತ್ತೋಲೆಯೊಂದನ್ನು ಹೊರಡಿಸಲಾಗಿದ್ದು, ಇಡೀ ನಗರಕ್ಕೆ ಒಂದೇ ರೀತಿಯ ಎಫ್ಐಆರ್ ನೀಡಬೇಕು ಎಂದು ಸೂಚಿಸಲಾಗಿದೆ.

ಬಿಬಿಎಂಪಿಯ ಯೋಜನಾ ವಿಭಾಗ ನಕ್ಷೆ ಮಂಜೂರಾತಿ ನೀಡುವಾಗ ಕಾನೂನಿನಲ್ಲಿರುವ ಈ ಅಂಶವನ್ನು ಬಿಲ್ಡರ್‍ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಂದೇ ರಸ್ತೆ ಕೆಲವು ಭಾಗದಲ್ಲಿ ವಿಸ್ತೀರ್ಣ ಕಡಿಮೆ ಹೊಂದಿದ್ದರೆ, ಮತ್ತೆ ಕೆಲವೆಡೆ ಕಡಿಮೆ ವಿಸ್ತೀರ್ಣ ಹೊಂದಿದೆ. ವಿಸ್ತೀರ್ಣಕ್ಕೆ ತಕ್ಕಂತೆ ಕಟ್ಟಡ ನಿರ್ಮಿಸುವ ಅವಕಾಶವನ್ನು ದುರ್ಬಳಕೆ ಮಾಡುತ್ತಿರುವುದರಿಂದ ಇನ್ನು ಮುಂದೆ ಎಲ್ಲ ಕಡೆ ಒಂದೇ ರೀತಿಯ ನಿಯಮ ಅನುಸರಿಸಲು ಸೂಚಿಸಲಾಗಿದೆ.

ರಸ್ತೆಯು 30 ಅಡಿಯಷ್ಟಿದ್ದರೆ ಇದಕ್ಕೆ ನಿರ್ದಿಷ್ಟವಾದ ಮಹಡಿ ನಿರ್ಮಿಸುವ ಎಫ್ಎಆರ್ ನೀಡಲು ಸಾಧ್ಯ. ಆದರೆ ಇದನ್ನು ಅಡಿಗಳಾಗಿ ಪರಿಗಣಿಸದೆ ಮೀಟರ್ ಆಗಿ ಪರಿಗಣಿಸಬೇಕು ಎಂದು ಬಿಲ್ಡರ್ ಗಳನ್ನು ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಹೀಗಾಗಿ 30 ಅಡಿಯ ರಸ್ತೆಯನ್ನು 9.14 ಮೀ. ರಸ್ತೆ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಹೆಚ್ಚಿನ ಮಹಡಿಗಳನ್ನು ನಿರ್ಮಿಸಲು ಎಫ್ಎಆರ್ ಮಂಜೂರಾಗುತ್ತದೆ.

ರಸ್ತೆಯ ಅಗಲ 6.09 ಮೀ., 9.14 ಮೀ., 12.19 ಮೀ., 15.24ಮೀ., 18.28 ಮೀ., 24.38 ಮೀ., 30.48 ಮೀ., ಇದ್ದರೆ ಕಟ್ಟಡ ನಿರ್ಮಿಸುವಾಗ ಇದನ್ನು ಪರಿಗಣಿಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಸ್ತೆಯು 12.19 ಮೀ. ಅಗಲವಿದ್ದರೆ  ಕಟ್ಟಡ ನಿರ್ಮಿಸಲು 2.25 ಅಂದಾಜು ಎಫ್ಎಆರ್ ನೀಡಲಾಗುತ್ತದೆ. ಇದರಿಂದ ಕಟ್ಟಡ ನಿರ್ಮಾಣ
ಮಾಡುವಾಗ ನೆಲಮಹಡಿಯೊಂದಿಗೆ 3ಕ್ಕಿಂತಲೂ ಹೆಚ್ಚಿನ ಮಹಡಿಗಳನ್ನು ನಿರ್ಮಿಸಬಹುದು. ಆದರೆ ಇದೇ ರಸ್ತೆಯನ್ನು 12 ಮೀ. ಎಂದು ಮಾತ್ರ ಪರಿಗಣಿಸಿದರೆ 1.75 ಎಫ್ಎಆರ್‍ಗೆ ಮಾತ್ರ ಅನುಮತಿ ದೊರೆಯುತ್ತದೆ. ಇದರಿಂದ ನಿರ್ದಿಷ್ಟವಾಗಿ ಮೂರು ಮಹಡಿ ಮಾತ್ರ ನಿರ್ಮಿಸಲು ಸಾಧ್ಯವಾಗುತ್ತದೆ. ಇದರಂತೆ ರಸ್ತೆಯ ಅಗಲವನ್ನು 6ಮೀ., 9 ಮೀ., 12 ಮೀ., 15 ಮೀ., 18 ಮೀ., 18ಮೀ., 24ಮೀ. ಹಾಗೂ 30 ಮೀ. ಎಂದು ಮಾತ್ರ ಬರೆಯಬೇಕು ಎಂದು ಸೂಚನೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com