ಐಟಿ ಕ್ಯಾಂಪಸ್‍ಗಳಲ್ಲಿ ಧೂಮಪಾನ ನಿಷೇಧ

ಧೂಮಪಾನಿ ಟೆಕ್ಕಿಗಳಿಗೊಂದು ಇಲ್ಲಿದೆ ಒಂದು ಶಾಕಿಂಗ್ ನ್ಯೂಸ್. ಇನ್ನು ಮುಂದೆ ಐಟಿ ಕಂಪನಿ ಗಳ ಕ್ಯಾಂಪಸ್‍ಗಳಲ್ಲಿ ಧೂಮಪಾನ ನಿಷೇಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲವಾ ದರೂ ಐಟಿ ಕ್ಯಾಂಪಸ್‍ಗಳಲ್ಲಿ ಸ್ಮೋಕಿಂಗ್ ಝೋನ್‍ಗಳಲ್ಲಿ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಧೂಮಪಾನಿ ಟೆಕ್ಕಿಗಳಿಗೊಂದು ಇಲ್ಲಿದೆ ಒಂದು ಶಾಕಿಂಗ್ ನ್ಯೂಸ್. ಇನ್ನು ಮುಂದೆ ಐಟಿ ಕಂಪನಿ ಗಳ ಕ್ಯಾಂಪಸ್‍ಗಳಲ್ಲಿ ಧೂಮಪಾನ ನಿಷೇಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲವಾ ದರೂ ಐಟಿ ಕ್ಯಾಂಪಸ್‍ಗಳಲ್ಲಿ ಸ್ಮೋಕಿಂಗ್ ಝೋನ್‍ಗಳಲ್ಲಿ ಧೂಮಪಾನ ಅವ್ಯಾಹತವಾಗಿ ನಡೆದೇ ಇತ್ತು.

ಆದರೀಗ ಸರ್ಕಾರ ಸ್ಪಷ್ಟವಾಗಿ ಸೂಚನೆ ನೀಡಿದ್ದು, ಯಾವುದೇ ಕಾರಣಕ್ಕೂ ಐಟಿ ಕ್ಯಾಂಪಸ್‍ಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡಿದಂತೆ ಕಂಪನಿಗಳಿಗೆ ಸೂಚಿನೆ ನೀಡಿದೆ. ಹೀಗಾಗಿ ಇನ್ನು ಮುಂದೆ ಸಾರ್ವಜನಿಕರ ಸ್ಥಳದಲ್ಲಂತೂ ಧೂಮಪಾನ ಮಾಡುವಂತಿಲ್ಲ, ಕಂಪನಿ ಯ ಸ್ಮೋಕಿಂಗ್ ಝೋನ್‍ನಲ್ಲಿ ಮಾಡಿದರಾಯ್ತು ಎನ್ನುವವರಿಗೆ ಸುತ್ತೋಲೆ ಶಾಕ್ ನೀಡಿದೆ. ಕರ್ನಾಟಕದ ಐಟಿ ಕಂಪನಿಗಳಲ್ಲಿ ಲಕ್ಷಾಂತರ ಮಂದಿ ಕೆಲಸ ಮಾಡುತ್ತಿದ್ದಾರೆ.

ಇವರ ಆರೋ ಗ್ಯವನ್ನು ಗಮನದಲ್ಲಿಟ್ಟುಕೊಂಡು ಕ್ಯಾಂಪಸ್ಗಳಲ್ಲಿ ಸಿಗರೇಟು ಸೇವನೆಯನ್ನು ನಿಷೇ„ಸಲಾ ಗಿದೆ. ಈ ಮೂಲಕ ಅವರ ಆರೋಗ್ಯ ಸುಧಾರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಐಟಿ ಬಿಟಿ ಇಲಾಖೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com