ಒತ್ತುವರಿ ಸಮಸ್ಯೆಗೆ ಒಗ್ಗೂಡಿ ಪರಿಹಾರ

``ಕೆರೆ ಒತ್ತುವರಿಯಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿರುವುದು ನಮ್ಮ ಕಣ್ಣ ಮುಂದಿವೆ. ಎಲ್ಲರೂ ಸೇರಿ ಈ ಸಮಸ್ಯೆ ಪರಿಹರಿಸುತ್ತೇವೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ನನಗೆ ಮಹತ್ವದ ಜವಾಬ್ದಾರಿಗಳಿವೆ, ಘನತ್ಯಾಜ್ಯ ಸಮಸ್ಯೆ ನಿವಾರಿಸಲು ಸರ್ಕಾರ...
ಬೆಂಗಳೂರು ನಗರಾಭಿವೃದ್ಧಿ ಕೆ.ಜೆ.ಜಾರ್ಜ್ (ಸಂಗ್ರಹ ಚಿತ್ರ)
ಬೆಂಗಳೂರು ನಗರಾಭಿವೃದ್ಧಿ ಕೆ.ಜೆ.ಜಾರ್ಜ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ``ಕೆರೆ ಒತ್ತುವರಿಯಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿರುವುದು ನಮ್ಮ ಕಣ್ಣ ಮುಂದಿವೆ. ಎಲ್ಲರೂ ಸೇರಿ ಈ ಸಮಸ್ಯೆ ಪರಿಹರಿಸುತ್ತೇವೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ನನಗೆ ಮಹತ್ವದ ಜವಾಬ್ದಾರಿಗಳಿವೆ, ಘನತ್ಯಾಜ್ಯ ಸಮಸ್ಯೆ ನಿವಾರಿಸಲು ಸರ್ಕಾರ ಸಕಲ ರೀತಿಯಿಂದಲೂ ಸಜ್ಜಾಗಿದೆ.

ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಆರಂಭಿಸಲು ತೀರ್ಮಾನಿಸಲಾಗಿದೆ. ತ್ಯಾಜ್ಯ, ಕೆರೆ ಒತ್ತುವರಿ, ಟ್ರಾಫಿಕ್ ಸಮಸ್ಯೆಗಳೆಲ್ಲವೂ ಶೀಘ್ರ ತಹಬದಿಗೆ ಬರಲಿವೆ ,'' ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ``ಬೆಂಗಳೂರಿನಲ್ಲಿ ನಿತ್ಯ ನಾಲ್ಕು ಸಾವಿರ ಟನ್ ಗಳಿಗೂ ಅಧಿಕ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ,'' ಎಂದರು.

`` ಈ ಪೈಕಿ 750 ಟನ್ ಕಸವನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನೆಲದಲ್ಲಿ ಕಸ ಹೂಳುವುದರಿಂದ ಸಮಸ್ಯೆ ಬಿಗಡಾಯಿಸುತ್ತದೆ. ಹೀಗಾಗಿ ಯೂರೋಪ್, ನೆದರ್‍ಲ್ಯಾಂಡ್, ಚೀನಾ ಮಾದರಿಯಲ್ಲಿ  ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ಬೆಂಗಳೂರು, ನಂತರದಲ್ಲಿ ರಾಜ್ಯದ ಇತರ ಕಡೆ ಈ ಘಟಕಗಳನ್ನು ತೆರಯಲಾಗುವುದು,'' ಎಂದರು.

``ಮಿತಿಮೀರದ ಜನದಟ್ಟಣೆಯಿಂದ ನಗರ ಸಮಸ್ಯೆಗೆ ಸಿಲುಕದೆ. ಮೆಟ್ರೋ ಹಾಗೂ ಮೋನೋ ರೈಲು ಸೇವೆಗಳು ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂಬಡ್ತಿ ಅಲ್ಲ..: ``ನನಗೆ ಸಚಿವ ಸ್ಥಾನದಲ್ಲಿ ಹಿಂಬಡ್ತಿ ನೀಡಲಾಗಿದೆ ಎಂಬುದು ಸುಳ್ಳು.ಯಾರಿಗೆ ಯಾವ ಖಾತೆ ನೀಡಬೇಕೆಂಬುದು ಸಿಎಂ ಪರಮಾಧಿಕಾರ ಅದೇ ರೀತಿ ಗೃಹ ಖಾತೆ
ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ್ದರಿಂದ ಅದು ನಂಬರ್ ಟೂ ಖಾತೆಯಂತೆ ಕಾಣಬಹುದು. ಆದರೆ ನನಗೆ ಸಿಕ್ಕಿರುವ ಬೆಂಗಳೂರು ನಗರ ಅಭಿವೃದ್ಧಿ ಖಾತೆಯಲ್ಲಿ ಹಲವು
ಮಹತ್ವದ ಜವಾಬ್ದಾರಿಗಳಿವೆ. ಬೆಂಗಳೂರಿಗೇ ಪ್ರತ್ಯೇಕ ಸಚಿವರನ್ನು ನೀಡುವುದಾಗಿ ಪಾಲಿಕೆ ಚುನಾವಣೆ ವೇಳೆ ಸಿಎಂ ಭರವಸೆ ನೀಡಿದ್ದರು.

ಅದರಂತೆ ನನಗೆ ಅದರ ಜವಾಬ್ದಾರಿ ನೀಡಿದ್ದಾರೆ. ಗೃಹ ಸಚಿವನಾಗಿ ಅತ್ಯುತ್ತಮವಾಗಿ ಕೆಲಸ ಮಾಡಿ ತೃಪ್ತಿ ಇದೆ. ನನ್ನ ಕಾಲದಲ್ಲಿ ಒಂದು ಗೋಲಿಬಾರ್ ಆಗಲಿಲ್ಲ. ಒಂದು ಟಿಯರ್ ಗ್ಯಾಸ್ ಸಿಡಿಯಲಿಲ್ಲ. ದೊಡ್ಡ ಪ್ರಮಾಣದ ಲಾಠಿ ಚಾರ್ಜ್ ಕೂಡಾ ಆಗಲಿಲ್ಲ,'' ಎಂದು ಹೇಳಿದರು.

ಪರಮ್ ಅನುಭವಿ:
ಎಲ್ಲೋ ಒಂದು ಕಡೆ ಸಣ್ಣ ಪುಟ್ಟ ಗಲಾಟೆ ನಡೆದರೂ ಬಿಜೆಪಿಯವರು ನನ್ನ ರಾಜೀನಾಮೆಗೆ ಕೇಳುತ್ತಿದ್ದರು. ಆದರೆ ಈಗ ಗೃಹ ಸಚಿವರಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಅನುಭವ ಇರುವವರು. ಉತ್ತಮವಾಗಿ ಕೆಲಸ ಮಾಡುತ್ತಾರೆ. ಆದರೆ ಬಿಜೆಪಿಯವರು ಪದೇ ಪದೇ ಅವರ ರಾಜಿನಾಮೆ ಕೇಳಬಾರದು ಎಂದರು.

ಜನಪ್ರತಿನಿಧಿಯೇ, ಪತ್ರಕರ್ತರೇ?:
ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಅವರು ತಮ್ಮ ವಿರುದ್ಧ ಮಾಡಿರುವ ಆಪಾದನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ``ನನ್ನ ಬಗ್ಗೆ ಮಾತನಾಡಲು ಅವರೇನು ಜನಪ್ರತಿನಿಧಿಯೇ? ಪತ್ರಕರ್ತರೇ? ನನ್ನ ವಿರುದ್ಧ ಮಾತನಾಡಬಾರದು ಎಂದು ಹೇಳಿದ್ದರೂ ಮಾತನಾಡುತ್ತಾರೆ. ಅಂತವಹ ಮಾತಿಗೆ ನಾನೇಕೆ ಪ್ರತಿಕ್ರಿಯೆ ನೀಡಲಿ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com