
ಬೆಂಗಳೂರು: ಬೆಂಗಳೂರಿನಲ್ಲಿ ಕಾನೂನು-ಸುವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಪ್ರತಿ ತಿಂಗಳು ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಪರಿಶೀಲನಾ ಸಭೆ ಆಯೋಜಿಸುವ ಬಗ್ಗೆ ನೂತನ ಗೃಹ ಸಚಿವ ಡಾ.ಜಿ.ಪರಮೇಶ್ವರ ಚಿಂತನೆ ನಡೆಸಿದ್ದಾರೆ.
ಗೃಹ ಸಚಿವರಾಗಿ ತಮ್ಮ ಕಾರ್ಯನಿ ರ್ವಹಣೆ ಹೇಗಿರುತ್ತದೆ? ಎಂಬ ಬಗ್ಗೆ ಸುದ್ದಿಗಾರರ ಜತೆ ಅನೌಪಚಾರಿಕವಾಗಿ ಮಾತನಾಡಿ, ಕಾನೂನು-ಸುವ್ಯವಸ್ಥೆ ಕಾಪಾಡುವುದಕ್ಕೆ ಹೆಚ್ಚಿನ ಒತ್ತು ನೀಡುವ ವಿಚಾರದಲ್ಲಿ ಇ-ಪೊಲೀಸಿಂಗ್, ಬೀಟ್-ಪೊಲೀಸಿಂಗ್ ಎರಡನ್ನೂ ಉತ್ತಮಪಡಿಸುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇನೆ. ಆಡಳಿತಾತ್ಮಕವಾಗಿ ನಾನು ಇದುವರೆಗೆ ಪಡೆದ ಅನುಭವವನ್ನು ಗೃಹ ಇಲಾಖೆಯ ನಿರ್ವಹಣೆಗೆ ವ್ಯಯಿಸುತ್ತೇನೆ ಎಂದರು.
ಇನ್ನೂ ನಿರ್ಧಾರವಿಲ್ಲ
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆ ವಿಚಾರ ಯಾವಾಗ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಒಂದೆಡೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಹೈಕಮಾಂಡ್ ನೀಡಿದರೆ
ನಿರ್ವಹಿಸಲು ಸಿದ್ಧ ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಅಪ್ಪಾಜಿ ನಾಡಗೌಡ ಹೇಳಿದ್ದರೂ, ಈ ಪ್ರಕ್ರಿಯೆ ಯಾವಾಗ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ರಾಷ್ಟ್ರೀಯ ವರಿಷ್ಠರು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಬಲ್ಲ ಮೂಲಗಳ ಪ್ರಕಾರ ಜನವರಿ ಅಂತ್ಯದವರೆಗೂ ಡಾ.ಜಿ.ಪರಮೇಶ್ವರ ಅವರೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
Advertisement