ಸಂಗೀತ, ವಿಜ್ಞಾನದಲ್ಲಿದೆ ವಿಫುಲ ಅವಕಾಶ

``ಸಂಗೀತ ಹಾಗೂ ವಿಜ್ಞಾನ ಕ್ಷೇತ್ರಗಳ ಹರಿವು ಬಹಳಷ್ಟು ವಿಸ್ತಾರವಾದುದು. ಈ ಕ್ಷೇತ್ರಗಳಲ್ಲಿ ಜೀವನ ಪರ್ಯಂತ ಕಲಿಯುವುದು ಮತ್ತು ಸಾಧಿಸುವುದು ಇದ್ದೆ ಇರುತ್ತದೆ. ನಿರಂತರ ಅಭ್ಯಸಿಸುವ ಆಸಕ್ತಿ ಇದ್ದವರು ಈ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳೆಯಲು ಅವಕಾಶವಿರುತ್ತದೆ...
ಭಾರತ ರತ್ನ ಸಿ.ಎನ್.ಆರ್.ರಾವ್ (ಸಂಗ್ರಹ ಚಿತ್ರ)
ಭಾರತ ರತ್ನ ಸಿ.ಎನ್.ಆರ್.ರಾವ್ (ಸಂಗ್ರಹ ಚಿತ್ರ)

ಬೆಂಗಳೂರು: ``ಸಂಗೀತ ಹಾಗೂ ವಿಜ್ಞಾನ ಕ್ಷೇತ್ರಗಳ ಹರಿವು ಬಹಳಷ್ಟು ವಿಸ್ತಾರವಾದುದು. ಈ ಕ್ಷೇತ್ರಗಳಲ್ಲಿ ಜೀವನ ಪರ್ಯಂತ ಕಲಿಯುವುದು ಮತ್ತು ಸಾಧಿಸುವುದು ಇದ್ದೆ ಇರುತ್ತದೆ. ನಿರಂತರ ಅಭ್ಯಸಿಸುವ ಆಸಕ್ತಿ ಇದ್ದವರು ಈ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳೆಯಲು ಅವಕಾಶವಿರುತ್ತದೆ,'' ಎಂದು ಭಾರತ ರತ್ನ ಸಿ.ಎನ್.ಆರ್.ರಾವ್ ಅಭಿಪ್ರಾಯಪಟ್ಟರು.

ಅಕಾಡೆಮಿ ಆಫ್ ಮ್ಯೂಸಿಕ್ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,`` ಈ ಎರಡೂ ಕ್ಷೇತ್ರಗಳಲ್ಲೂ ಎಷ್ಟು ಸಾಧನೆ ಮಾಡಿದರೂ ತೃಪ್ತಿ ಇರುವುದಿಲ್ಲ. ಹಿಂದೂಸ್ತಾನಿ ಸಂಗೀತ ಗಾಯಕ ಭಾರತ ರತ್ನ ಭೀಮಸೇನ ಜೋಷಿ ಅವರೂ ಸಹ ತಮ್ಮ ಕೊನೆಯ ದಿನಗಳಲ್ಲೂ ಈ ಮಾತನ್ನು ಹೇಳುತ್ತಿದ್ದರು,'' ಎಂದು ರಾವ್ ಸ್ಮರಿಸಿಕೊಂಡರು.

``ನಾನು ಕೇವಲ ವಿಜ್ಞಾನ ಮಾತ್ರವಲ್ಲ ಸಂಗೀತ ಕೇಳುವುದರಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಇದರಿಂದ ಸಾಧನೆಗೆ ಸಾಕಷ್ಟು ಸಹಾಯವಾಗಿದೆ,'' ಎಂದೂ ಇದೇ ವೇಳೆ ಅಭಿಪ್ರಾಯಪಟ್ಟರು. ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿದುಷಿ ಮಂಜುಳಾ ಸುರೇಂದ್ರ ಮತ್ತಿತರರು ಇದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com