ಹಳಿ ತಪ್ಪಿದ ಗೂಡ್ಸ್ ರೈಲು

ಮಂಗಳೂರು- ಹಾಸನ ರೈಲು ಮಾರ್ಗದ ನಡುವಿನ ಎಡಕುಮೇರಿ ಹಾಗೂ ಸಿರಿಬಾಗಿಲು ನಡುವೆ ಗೂಡ್ಸ್ ರೈಲೊಂದು ಭಾನುವಾರ ರಾತ್ರಿ 8.10ರ ವೇಳೆಗೆ ಹಳಿ ತಪ್ಪಿದ್ದು, ಮಂಗಳೂರಿನಿಂದ ರಾತ್ರಿ ಬೆಂಗಳೂರಿಗೆ ಸಂಚರಿಸಬೇಕಾದ ಪ್ರಯಾಣಿಕರ ರೈಲು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಮಂಗಳೂರು: ಮಂಗಳೂರು- ಹಾಸನ ರೈಲು ಮಾರ್ಗದ ನಡುವಿನ ಎಡಕುಮೇರಿ ಹಾಗೂ ಸಿರಿಬಾಗಿಲು ನಡುವೆ ಗೂಡ್ಸ್ ರೈಲೊಂದು ಭಾನುವಾರ ರಾತ್ರಿ 8.10ರ ವೇಳೆಗೆ ಹಳಿ ತಪ್ಪಿದ್ದು,
ಮಂಗಳೂರಿನಿಂದ ರಾತ್ರಿ ಬೆಂಗಳೂರಿಗೆ ಸಂಚರಿಸಬೇಕಾದ ಪ್ರಯಾಣಿಕರ ರೈಲು ಸುಮಾರು ಒಂದೂವರೆ ಗಂಟೆ ವಿಳಂಬವಾಗಿ ಪಾಲಕ್ಕಾಡ್- ಸೇಲಂ ಮೂಲಕ ಸಂಚರಿಸಿದೆ.

ಮಂಗಳೂರಿನಿಂದ ಕೇರಳದ ಕೋಝಿಕೋಡ್ ಸಮೀಪದ ಕಳ್ಳಾಯಿಗೆ ಸಿಮೆಂಟ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿ ಪಲ್ಟಿಯಾಗಿದ್ದು, ಅದನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಶೀಘ್ರ ಕೈಗೆತ್ತಿಕೊಳ್ಳಲಾಯಿತು.

ಇದೇ ಮಾರ್ಗವಾಗಿ ರಾತ್ರಿ 8.55ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ ರೈಲು ಸಂಚರಿಸುವುದಿತ್ತು. ಘಟನೆ ನಡೆದಾಗ ಈ ಪ್ರಯಾಣಿಕರ ರೈಲು ಇನ್ನೂ ಮಂಗಳೂರು ಸ್ಟೇಷನ್ ಬಿಟ್ಟಿರಲಿಲ್ಲ. ಗೂಡ್ಸ್ ರೈಲು ತೆರವು ಹಾಗೂ ಹಳಿ ದುರಸ್ತಿಗೊಳಿಸುವ ಕಾರ್ಯಾಚರಣೆಯನ್ನು ನಡೆಸಲು ವಿಳಂಬವಾಗಿದ್ದರಿಂದ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರ ರೈಲು ಸುಮಾರು ಒಂದೂವರೆ ಗಂಟೆಗಳ ಕಾಲ ವಿಳಂಬವಾಗಿ ಸೇಲಂ ಮಾರ್ಗವಾಗಿ ಸಂಚರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com