ಅಧಿಕಾರಿಗಳಿಂದ ಮಾಗಡಿ ಮಾರುಕಟ್ಟೆ ಪರಿಶೀಲನೆ

ಮಾಗಡಿ ರಸ್ತೆಯ ಪಾಲಿಕೆ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿದ ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ವ್ಯಾಪಾರ ವಹಿವಾಟು ನಡೆಸದ ಹಾಗೂ ಶುಲ್ಕ ಪಾವತಿಸದ ಮಳಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿತು. ಮಳಿಗೆಗಳಲ್ಲಿ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮಾಗಡಿ ರಸ್ತೆಯ ಪಾಲಿಕೆ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿದ ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ವ್ಯಾಪಾರ ವಹಿವಾಟು ನಡೆಸದ ಹಾಗೂ ಶುಲ್ಕ ಪಾವತಿಸದ ಮಳಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿತು. ಮಳಿಗೆಗಳಲ್ಲಿ ವ್ಯಾಪಾರ ನಡೆಯದಿರುವುದು ಈ ವೇಳೆ ಕಂಡುಬಂದಿದೆ.

ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಮಳಿಗೆಗಳು ಯಾವಾಗಲೂ ಮುಚ್ಚಿರುತ್ತವೆ. ಮಾಸಿಕ ಶುಲ್ಕ ಮತ್ತು ಗುತ್ತಿಗೆ ಮೊತ್ತವನ್ನು ಪಾಲಿಕೆಗೆ ಪಾವತಿಸುತ್ತಿಲ್ಲ. ಹೀಗಾಗಿ ಮಳಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ನಂತರ ಎರಡು ಮಳಿಗೆದಾರರು ಮಾತ್ರ ಮಾಸಿಕ ಶುಲ್ಕ ಪಾವತಿಸಿ, ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇಲ್ಲಿ ವ್ಯಾಪಾರ
ನಡೆಸದಿರುವುದರಿಂದ ಮಾರುಕಟ್ಟೆಯಲ್ಲಿ ಕೆಡವಿ ಖಾಸಗಿ ಸಹ ಭಾಗಿತ್ವದಲ್ಲಿ ಉತ್ತಮವಾದ ಕಟ್ಟಡ ನಿರ್ಮಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ.

ಅನುಮೋದನೆ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದರು. ರಾಜಾಜಿನಗರ ವಾಣಿಜ್ಯ ಸಂಕೀರ್ಣ: ಈ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು 111 ಮಳಿಗೆಗಳಿವೆ. ಇಲ್ಲಿನ ವ್ಯಾಪಾರಿಗಳು ಮಳಿಗೆಯ ಹೊರಭಾಗದಲ್ಲಿನ ಜಾಗ ಅತಿಕ್ರಮಿಸಿಕೊಂಡು ಮೂರ್ನಾಲ್ಕು ಟೇಬಲ್‍ಗಳನ್ನು ಇಟ್ಟುಕೊಂಡು ವ್ಯವಹರಿಸುತ್ತಿರುವುದು ಕಂಡುಬಂದಿದೆ.

ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದ್ದು, ಅಂಥ ವ್ಯಾಪಾರಿಗಳಿಗೆ ನೋಟೀಸ್ ನೀಡಬೇಕು ಸದಸ್ಯರು ಸೂಚಿಸಿದರು. ಮಳಿಗೆದಾರರು ಪರಿಷ್ಕೃತ ಗುತ್ತಿಗೆ ಮೊತ್ತ ಪಾವತಿಸದೇ, ಹಳೆಯ ದರವನ್ನೆ ಪಾವತಿಸುತ್ತಿದ್ದಾರೆ. ಇನ್ನು ಮೇಲೆ ಪರಿಷ್ಕೃತ ದರ ಪಾವತಿಸದಿದ್ದರೆ ಬೀಗ ಮುದ್ರೆ ಹಾಕಲಾಗುವುದು ಎಂದು ಸದಸ್ಯರು ಎಚ್ಚರಿಸಿದರು. ವಾಣಿಜ್ಯ ಸಂಕೀರ್ಣದಲ್ಲಿರುವ ಜಿಂದಾಲ್ ಆಸ್ಪತ್ರೆ ಪರಿಶೀಲಿಸಿ, ಕಡಿಮೆ ದರದಲ್ಲಿ ಉತ್ತಮ ವೈದ್ಯ ಕೀಯ ಸೌಲಭ್ಯಗಳನ್ನು ರೋಗಿಗಳಿಗೆ ಒದಗಿಸು-ತ್ತಿರುವುದಕ್ಕೆ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com