ದಲಿತ ಅಡುಗೆ ಸಹಾಯಕಿ ಜನರಿಂದ ಶಾಲೆಗೆ ಬಹಿಷ್ಕಾರ

ಅಡುಗೆ ಸಹಾಯಕಿ ದಲಿತಳು, ಆಕೆಯನ್ನು ನೇಮಕ ಮಾಡುವಾಗ ನಮ್ಮನ್ನು ಪರಿಗಣಿಸಿಲ್ಲವೆಂದು ಗ್ರಾಮದ ಸವರ್ಣಿಯರು ತಮ್ಮ ಮಕ್ಕಳು ಶಾಲೆ ಬಹಿಷ್ಕರಿಸಲು ಕುಮ್ಮಕ್ಕು ನೀಡಿರುವ ಅನಾಗರಿಕ ಘಟನೆ ಮುಳಬಾಗಲು ತಾಲೂಕಿನ ಗಡಿ ಗ್ರಾಮವಾದ ಕಗ್ಗನಹಳ್ಳಿಯಲ್ಲಿ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಕೋಲಾರ: ಅಡುಗೆ ಸಹಾಯಕಿ ದಲಿತಳು, ಆಕೆಯನ್ನು ನೇಮಕ ಮಾಡುವಾಗ ನಮ್ಮನ್ನು ಪರಿಗಣಿಸಿಲ್ಲವೆಂದು ಗ್ರಾಮದ ಸವರ್ಣಿಯರು ತಮ್ಮ ಮಕ್ಕಳು ಶಾಲೆ ಬಹಿಷ್ಕರಿಸಲು ಕುಮ್ಮಕ್ಕು ನೀಡಿರುವ ಅನಾಗರಿಕ ಘಟನೆ ಮುಳಬಾಗಲು ತಾಲೂಕಿನ ಗಡಿ ಗ್ರಾಮವಾದ ಕಗ್ಗನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಹಿಳೆ ರಾಧಮ್ಮ ಎಂಬುವರು ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಒಪ್ಪದ ಒಂದು ವರ್ಗದ ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರದ ಯೋಜನೆಯಡಿ ನೀಡುವ ಮಧ್ಯಾಹ್ನದ ಊಟ ಸೇವನೆ ಮಾಡದಂತೆ ಸೂಚಿಸಿರುವುದಲ್ಲದೆ, ಶಾಲೆ ಬಹಿಷ್ಕರಿಸುವಂತೆ ಮಾಡಿದ್ದಾರೆ.
ಇದರಿಂದ ನೊಂದ ಅಡುಗೆ ಸಹಾಯಕಿ ರಾಧಮ್ಮ ಸರ್ಕಾರಕ್ಕೆ ದೂರು ನೀಡಿದ್ದರು.

ಇದರಿಂದ ಮತ್ತಷ್ಟು ಕುಪಿತರಾದ ಸವರ್ಣಿಯರು ತಮ್ಮ ಪ್ರಭಾವ ಬಳಸಿ ಶಾಲೆಯಲ್ಲಿದ್ದ ದಲಿತ ಮಕ್ಕಳನ್ನು ಸಹ ಹೊರ ಉಳಿಯುವಂತೆ ಮಾಡಿದ್ದಾರೆ. ಇದರಿಂದ ಬೇಸತ್ತ ರಾಧಮ್ಮ, ತನ್ನ
ಜಾತಿಯವರು ಸಹ ಊಟ ಮಾಡುತ್ತಿಲ್ಲ.ಶಾಲೆಗೆ ಬರುತ್ತಿಲ್ಲ. ಇಂತಹ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ತಮಗೆ ದಯಾ ಮರಣಕ್ಕೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com