ಕುವೈತ್‍ನಲ್ಲಿ ಸತ್ಯನಾರಾಯಣ ಪೂಜೆ: ಬಂಧಿತರು ಭಾರತಕ್ಕೆ ಗಡಿಪಾರು

ಸಂಬಂಧಿಸಿದಂತೆ ಬಂಧಿತರಾಗಿದ್ದ ಕರಾವಳಿ ಹಾಗೂ ಕಾಸರಗೋಡಿನ 11 ಮಂದಿ ಪೈಕಿ 9 ಮಂದಿಯನ್ನು ಕುವೈಟ್ ಪೊಲೀಸರು ಭಾರತಕ್ಕೆ ವಾಪಸ್ ಕಳುಹಿಸಿದ್ದು,ಇನ್ನು ಮುಂದೆ ಕುವೈತ್ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದಾರೆ.
ಕುವೈತ್‍
ಕುವೈತ್‍

ಮಂಗಳೂರು: ಕುವೈತ್‍ನಲ್ಲಿ ಸತ್ಯನಾರಾಯಣ ಪೂಜೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಕರಾವಳಿ ಹಾಗೂ ಕಾಸರಗೋಡಿನ 11 ಮಂದಿ ಪೈಕಿ 9 ಮಂದಿಯನ್ನು ಕುವೈಟ್ ಪೊಲೀಸರು ಭಾರತಕ್ಕೆ ವಾಪಸ್ ಕಳುಹಿಸಿದ್ದು,ಇನ್ನು ಮುಂದೆ ಕುವೈತ್ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದಾರೆ.
ಪುತ್ತೂರಿನ ಪುರುಷೋತ್ತಮ ಕುಕ್ಯಾನ್, ಮಂಗಳೂರಿನ ಅಶೋಕ್ ಕುಮಾರ್, ಯಾದವ ಪೂಜಾರಿ, ಅನಿಲ್ ಕುಮಾರ್, ಕುಮಾರ್ ವಾಮಂಜೂರು, ಸತೀಶ್ ಬೆಳುವಾಯಿ, ಉಮೇಶ್ ಶೆಟ್ಟಿ, ಅರುಣ್ ಶೆಟ್ಟಿ ಉಡುಪಿ ಮತ್ತು ಪ್ರಶಾಂತ್ ಶೆಟ್ಟಿ, ಜೆ. ಕೆ.ಆಳ್ವ ಸೇರಿ 11 ಮಂದಿಯನ್ನು ಬಂಧಿಸಿದ್ದರು. ಇವರಲ್ಲಿ ಅರುಣ್ ಶೆಟ್ಟಿ ಮತ್ತು ಜೆ.ಕೆ.ಆಳ್ವ ಹೊರತುಪಡಿಸಿ ಉಳಿದ 9 ಮಂದಿಯನ್ನು ಗಡಿ ಪಾರು ಮಾಡಲಾಗಿದೆ. ಶುಕ್ರವಾರ ಕುವೈತ್ ನಿಂದ ಹೊರಟ 9 ಮಂದಿ ಭಾರತೀಯರು ಶನಿವಾರ ಮುಂಜಾನೆ ಮುಂಬೈ ತಲುಪಿದ್ದಾರೆ. ಬಂಧಿತರ ಬಗ್ಗೆ ಮಾಹಿತಿ ಪಡೆದ ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರದ ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ಅವರ ಗಮನಕ್ಕೆ ತಂದಿದ್ದರು. ಸತತ ಮಾತುಕತೆಯಿಂದಾಗಿ ಬಂಧಿತರನ್ನು ಬಿಡುಗಡೆಗೆ ಮಾಡಲು ಕುವೈತ್ ಕ್ರಮ ಕೈಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com