ಜನರಿಗೆ ಮೆಟ್ರೋ ಮತ್ತಷ್ಟು ಹತ್ತಿರ

ಬಹುನಿರೀಕ್ಷಿತ ಮೆಟ್ರೊ ಟರ್ಮಿನಲ್ ರೀಚ್-2 (ಕಡುನೇರಳೆ ಮಾರ್ಗ) ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವೆಂಕಯ್ಯ ನಾಯ್ಡು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬಹುನಿರೀಕ್ಷಿತ ಮೆಟ್ರೊ ಟರ್ಮಿನಲ್ ರೀಚ್-2 (ಕಡುನೇರಳೆ ಮಾರ್ಗ) ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ
ಕಲ್ಪಿಸುವ ಈ ಮೆಟ್ರೋ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಸೋಮವಾರ ಸಂಜೆ 4.30ಕ್ಕೆ ಹಸಿರು ನಿಶಾನೆ ತೋರುವರು.

ಇದರೊಂದಿಗೆ ಬಿಎಂಆರ್ ಸಿಎಲ್ ಬೆಂಗಳೂರಿಗೆ `ಮೂರು ಮೆಟ್ರೋ ಮಾರ್ಗಗಳ'ನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದಂತಾಗುತ್ತದೆ. ಆದರೆ, ಆದರೆ ಮೆಟ್ರೋ ರೀಚ್-2, ಹಿಂದಿನ ಯಾವ ಮಾರ್ಗಗಳನ್ನೂ ಸಂಪರ್ಕಿಸುತ್ತಿಲ್ಲ. ಈ ಮಾರ್ಗದ ರಸ್ತೆ ಸಂಚಾರದಲ್ಲಿ ಟ್ರಾಪಿsಕ್ ಕಿರಿಕಿರಿ ಅನುಭವಿಸಿದ್ದ ನಾಗರಿಕರು ಇನ್ನು ಮುಂದೆ ಸರಾಗವಾಗಿ ಮೆಟ್ರೋ ರೈಲಿನಲ್ಲಿ ಓಡಾಡಬಹುದು. ಇದರಿಂದ ವಾಹನ ದಟ್ಟಣೆಯೂ ತಗ್ಗಲಿದೆ ಎನ್ನುತ್ತಾರೆ ಮೆಟ್ರೋ ಅಧಿಕಾರಿಗಳು.

ಮೆಜೆಸ್ಟಿಕ್‍ಗೆ ಸಂಪರ್ಕ; ನಂತರವೇ ಪ್ರಯಾಣಿಕ: ಮೆಜೆಸ್ಟಿಕ್‍ಗೆ ಸಂಪರ್ಕ ಕಲ್ಪಿಸುವ ಮಟ್ರೊ ರೈಲು ಸುರಂಗ ಮಾರ್ಗ ಮುಕ್ತವಾದರೆ ಪ್ರಯಾಣಿಕರು ನಗರದ ನಾಲ್ಕೂ ದಿಕ್ಕುಗಳಿಗೂ ಸುಲಭವಾಗಿ ಓಡಾಡಬಹುದು. ಹಾಗಾಗಿ ಸದ್ಯ ರೀಚ್-2 ಮಾರ್ಗದಲ್ಲಿ ಹೆಚ್ಚು
ಪ್ರಯಾಣಿಕರನ್ನು ನಿರೀಕ್ಷಿಸಲಾಗುದು ಎನ್ನುತ್ತಿದೆ ಬಿಎಂಆರ್‍ಸಿಎಲ್ ಮೂಲಗಳು. ಮಾಗಡಿ ರಸ್ತೆ, ಮೈಸೂರು ರಸ್ತೆ ಸುರಂಗ ಮಾರ್ಗ ಕಾಮಗಾರಿ ಆರಂಭವಾಗಿದ್ದು 2010ರಲ್ಲಿ.

2013-14ರಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇತ್ತು. ಆದರೆ, ಈ ಮಾರ್ಗದಲ್ಲಿ ಸುರಂಗ ನಿರ್ಮಾಣ ಕಾರ್ಯ ಇದ್ದುದ್ದರಿಂದ ಕಾಮಗಾರಿ 1 ವರ್ಷ ವಿಳಂಬವಾಗಿತ್ತು. ಯಾರ್ಯಾರು ಬರುತ್ತಿದ್ದಾರೆ ಉದ್ಘಾಟನೆಗೆ ಕಾರ್ಯಕ್ರಮಕ್ಕೆ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಫರ್ನೇಜ್ ನಿಕೋಲಾಸ್, ಜಪಾನ್ ಆಂತಾರಾಷ್ಟ್ರೀಯ ಸಹಕಾರ ಏಜೆನ್ಸಿ ಭಾರತ ಕಚೇರಿಯ ಮುಖ್ಯ ಪ್ರತಿನಿಧಿ ಶಿನ್ಯಾ ಏಜಿಮಾ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಅನಂತ ಕುಮಾರ್, ಸಚಿವ ಕೆ.ಜೆ.ಜಾರ್ಜ್, ಮೇಯರ್ ಮಂಜುನಾಥ ರೆಡ್ಡಿ ಹಾಗೂ ಪಾಲಿಕೆ ಸದಸ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಲೋಕಸಭಾ ಹಾಗೂ ರಾಜ್ಯ ಸಭಾ ಸದಸ್ಯರಾದ ವೀರಪ್ಪ ಮೊಯಿಲಿ, ಕುಪೇಂದ್ರ ರೆಡ್ಡಿ, ಡಿ.ಕೆ. ಸುರೇಶ್, ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಎಂ. ರಾಜೀವ್ ಚಂದ್ರಶೇಖರ್, ರೆಹಮಾನ್ ಖಾನ್, ವಿಜಯ ಮಲ್ಯ, ಎಂ.ವಿ. ರಾಜೀವ್ ಗೌಡ ಸೇರಿದಂತೆ ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ವರೆಗಿನ ಮಾರ್ಗಗಳು 1.ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ 2.ಮಲ್ಲೇಶ್ವರದ ಮಂತ್ರಿ ಸ್ಕೆ ್ವೀರ್‍ನಿಂದ ಪೀಣ್ಯ 3.ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com