ಮೊದಲ ದಿನ ಮಂದಹಾಸ ಮೂಡಿಸಿದ ಮೆಟ್ರೋ

ರೀಚ್-2 ಮೆಟ್ರೋ ಮಾರ್ಗ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗೆ ಪ್ರತಿ ನಿತ್ಯ ಸುಮಾರು 2 ಸಾವಿರಮಂದಿ ಪ್ರಯಾಣಿಸುತ್ತಾರೆ...
ಉದ್ಘಾಟನೆಗೊಂಡ ಮೆಟ್ರೋ ರೈಲು
ಉದ್ಘಾಟನೆಗೊಂಡ ಮೆಟ್ರೋ ರೈಲು

ಬೆಂಗಳೂರು: ರೀಚ್-2 ಮೆಟ್ರೋ ಮಾರ್ಗ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗೆ   ಪ್ರತಿ ನಿತ್ಯ ಸುಮಾರು 2 ಸಾವಿರ ಮಂದಿ ಪ್ರಯಾಣಿಸುತ್ತಾರೆ ಎಂಬ ಮೆಟ್ರೋ ಅಧಿಕಾರಿಗಳ  ಲೆಕ್ಕಾಚಾರವನ್ನೇ ಪ್ರಯಾಣಿಕರು ಹಿಂದಿಕ್ಕಿದ್ದಾರೆ. ಎರಡು ದಿನಗಳ ಹಿಂದೆ   ಉದ್ಘಾಟನೆಯಾದ ಈ ಮಾರ್ಗ ಬುಧವಾರ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗಿತ್ತು.   ಮೊದಲ ದಿನವಾದ ಬುಧವಾರ ಸಂಜೆ 4 ಗಂಟೆಯಿಂದ ಆರಂಭವಾದ ಈ ಮಾರ್ಗದ   ರೈಲಿನಲ್ಲಿ ಸುಮಾರು 4514 ಮಂದಿ ಪ್ರಯಾಣಿಸಿದ್ದಾರೆ.

ಇನ್ನೂ ಹೆಚ್ಚಿನ ಮಂದಿ ಪ್ರಯಾಣಿಸುವ ನಿರೀಕ್ಷೆ ಹೊಂದಿದ್ದ ಮೆಟ್ರೋ ಅಧಿಕಾರಿಗಳಿಗೆ  ಇದೊಂದು ರೀತಿ ನಿರಾಸೆ ಮೂಡಿಸಿದೆ. ಆದರೂ ಮುಂದಿನ ದಿನಗಳಲ್ಲಿ ಅಂದರೆ ಪೂರ್ವ- ಪಶ್ಚಿಮ ಮಾರ್ಗದಲ್ಲಿ ರೈಲು ಸಂಪೂರ್ಣ(ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ) ಸಂಚಾರ  ಆರಂಭವಾದ ಬಳಿಕ ಹೆಚ್ಚಿನ ಪ್ರಯಾಣಿಕರು ಸಂಚರಿಸಲಿದ್ದಾರೆ ಎಂಬ ವಿಶ್ವಾಸ  ವ್ಯಕ್ತಪಡಿಸಿದ್ದಾರೆ.

ಮೊದಲ ಟ್ರಿಪ್ ಮಕ್ಕಳು: ಮೊದಲ ಟ್ರಿಪ್‍ನಲ್ಲಿ ಶಾಲಾ ಮಕ್ಕಳು ಸೇರಿದಂತೆ ಸುಮಾರು   200 ಮಂದಿ ಪ್ರಯಾಣಿಕರು ಮಾಗಡಿ ಮಟ್ರೋ ನಿಲ್ದಾಣದಿಂದ ಪ್ರಯಾಣ ಬೆಳೆಸಿದರು.    ಮೋಹನ್ ಕಾಮತ್ ಮೊದಲ ಟ್ರಿಪ್‍ನ ಮೊದಲ ಟಿಕೆಟ್ ಖರೀದಿ ಸಂಭ್ರಮಿಸಿದರು.  ಮೊದಲ ಟ್ರಿಪ್ ಆದ್ದರಿಂದ ಮೆಟ್ರೋ ಟ್ರೈನ್ ಅನ್ನು ಬಣ್ಣಬಣ್ಣದ ಬಲೂನ್‍ಗಳಿಂದ   ಅಲಂಕರಿಸಲಾಗಿತ್ತು. ಪ್ರತಿ 15 ನಿಮಿಷಕ್ಕೊಂದು ಎರಡೂ ಕಡೆ ರೈಲುಗಳು ಸಂಚರಿಸಿದವು.

ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮೊದಲು ರೈಲು ಪ್ರವೇಶಿಸಿದ್ದು ನಾನೇ. ಇಲ್ಲಿನ  ನಿಲ್ದಾಣಕ್ಕೆ ಕಳೆದ ಎರಡು ದಿನಗಳಿಂದ ರೈಲು ಆರಂಭ ಬಗ್ಗೆ ವಿಚಾರಿಸಿದ್ದೆ. ಬುಧವಾರವೂ  ಮೊದಲು ರೈಲು ಟಿಕೆಟ್ ಖರೀದಿಸಿ ರೈಲಿನೊಳಗೆ ಪ್ರವೇಶಿಸಿದೆ.
●ಮೋಹನ್ ಕಾಮತ್ ರಾಜಾಜಿನಗರ

ಈಗಾಗಲೇ ನಗರದಲ್ಲಿ 2 ಕಡೆ ಮೆಟ್ರೋ ರೈಲು ಸಂಚರಿಸುತ್ತಿವೆ. ಅಲ್ಲಿಗೆ ಹೋಗಬೇಕು  ಎಂದು ಆಸೆಯಾಗಿದ್ದರೂ ಹೋಗಲು ಆಗಿರಲಿಲ್ಲ. ಈಗ ನಮ್ಮ ಆಸೆ ಈಡೇರಿದೆ.
● ನಾರಾಯಣಪ್ಪ ಪ್ರಯಾಣಿಕರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com