ಶಾಸನ ಸಭೆಯಲ್ಲಿ ಪ್ರತಿಧ್ವನಿಸಿದ ಅಪ್ಪನ ಕೂಗು

ಕಳೆದೆರಡು ವರ್ಷದಿಂದ ಮಗಳನ್ನು ನೋಡಲು ಅಕಾಶ ನೀಡದ ವ್ಯವಸ್ಥೆಗಳ ವಿರುದ್ಧ ರೋಸಿ ಹೋದ ಅಪ್ಪ ನೊಬ್ಬ, ತನ್ನ ಮಗಳನ್ನು ನೋಡಲು ಅವಕಾಶ ಕಲ್ಪಿಸುವಂತೆ ನೇರವಾಗಿ ಶಾಸಕಾಂಗದ ಮುಂದೆ ಮೊರೆ ಇಟ್ಟ ವಿಚಿತ್ರ ಪ್ರಸಂಗ ನಡೆದಿದೆ...
ಚಳಿಗಾಲ ಅಧಿವೇಶನ
ಚಳಿಗಾಲ ಅಧಿವೇಶನ
Updated on

ವಿಧಾನ ಪರಿಷತ್: ಕಳೆದೆರಡು ವರ್ಷದಿಂದ ಮಗಳನ್ನು ನೋಡಲು ಅಕಾಶ ನೀಡದ ವ್ಯವಸ್ಥೆಗಳ ವಿರುದ್ಧ ರೋಸಿ ಹೋದ ಅಪ್ಪ ನೊಬ್ಬ, ತನ್ನ ಮಗಳನ್ನು ನೋಡಲು ಅವಕಾಶ ಕಲ್ಪಿಸುವಂತೆ ನೇರವಾಗಿ ಶಾಸಕಾಂಗದ ಮುಂದೆ ಮೊರೆ ಇಟ್ಟ ವಿಚಿತ್ರ ಪ್ರಸಂಗ ನಡೆದಿದೆ.

 ಅವರು ಇಂದ್ರಜಿತ್. ಮೂಲತಃ ಮಹಾರಾಷ್ಟ್ರದ ಥಾಣೆಯವರಾದ ಇವರು, ಬ್ಯಾಂಕ್ ನೌಕರಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನೆಲೆಸಿದ್ದರು. ಈ ವೇಳೆ ಮುಸ್ಲಿಂ ಯುವತಿಯೊಂದಿಗೆ ಸ್ನೇಹ ಬೆಳೆಯಿತು. ಕೊನೆಗೆ ವಿವಾಹವೂ ಆಗಿ ಹೆಣ್ಣು ಮಗುವಿನ ಜನನವಾಯಿತು. ಆ ಹೆಣ್ಣುಮಗಳೀಗೀಗ 8 ವರ್ಷ. ಆದರೆ, ಎರಡು ವರ್ಷದಿಂದ ಮಗಳಿಗೆ ಅಪ್ಪನ ಪ್ರೀತಿ ಸಿಗುತ್ತಿಲ್ಲ. ಅಪ್ಪನಿಗೆ ಮುದ್ದು ಮಗಳ ಮುದ್ದು ಮುಖ ನೋಡಲಾಗುತ್ತಿಲ್ಲ. ಹಾಗೂ ಹೀಗೂ ಮಗಳನ್ನು ನೋಡಲು ಪ್ರಯತ್ನ ಪಟ್ಟರಾದರೂ ರೌಡಿಗಳಿಂದ ಪೆಟ್ಟು ಬಿದ್ದಿದೆ.

ಅಚ್ಚರಿ ಎಂದರೆ, ವಿಧಾನ ಪರಿಷತ್ತಿನಲ್ಲಿ ಈ ಸಂಗತಿ ಎಲ್ಲ ಸದಸ್ಯರ ಕಿವಿನೆಟ್ಟಗಾಗುವಂತೆ ಮಾಡಿತು. ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ ಈ ಪ್ರಕರಣವನ್ನು ಸರ್ಕಾರದ ಗಮನಕ್ಕೆ ತಂದು, ಇಂದ್ರಜಿತ್ ಗೆ ನ್ಯಾಯಕೊಡಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಇಂದ್ರಜಿತ್ ಕಲಾಪವನ್ನು ವೀಕ್ಷಿಸಿ. ತಮಗೆ ನ್ಯಾಯ ಸಿಗಬಹುದೆಂಬ ವಿಶ್ವಾಸದಲ್ಲಿದ್ದರು. ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಕಲಾಪ ಮುಗಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅವರಿಂದ ಮಾಹಿತಿ ಪಡೆದುಕೊಂಡರು. ಇನ್ನೊಂದೆಡೆ ಸಚಿವ ಪರಮೇಶ್ವರ್ ಸಹ ಇಂದ್ರಜಿತ್ ಗೆ ನ್ಯಾಯಕೊಡಿಸುವ ಧೃಢ ಭರವಸೆ ನೀಡಿದರು.

ಬೆನ್ನುಬಿದ್ದ ರೌಡಿಗಳು: ಇಂದ್ರಜಿತ್ ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದಾಗ ಮದುವೆ ನಡೆದಿದ್ದು. ಇದಾದ ಮೇಲೆ ದೆಹಲಿಗೆ ವರ್ಗ ವಾಗಿದೆ. ಮೂರು ವರ್ಷದ ಹಿಂದೆ ಪತ್ನಿಯ ತಂದೆ, ತಾಯಂದಿರು ದೆಹಲಿಗೆ ಬಂದಿದ್ದರು. ಅವರಿಗೆ ಉತ್ತಮ ಆತಿಥ್ಯ ನೀಡಿ ಕಳುಹಿಸಿದ್ದರು. ಜತೆಗೆ ಪತ್ನಿಯನ್ನು ತವರಿಗೆ ಕಳಿಸಿದ್ದಾರೆ. ಇದಾದ ಮೇಲೆ ಇಂದ್ರಜಿತ್ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಮತ್ತೆ ಪತಿಯೊಂದಿಗೆ ವಾಪಸಾಗಲು ಒಪ್ಪಲಿಲ್ಲ. ಮಗಳನ್ನು ಕಳುಹಿಸಲೂ ಒಪ್ಪಿಲ್ಲ. ಈ ಪ್ರಕರಣ ಅಂತಿಮವಾಗಿ ಕೋರ್ಟ್ ಮೆಟ್ಟಿಲೇರಿತು.

 ಈ ಮಧ್ಯೆ ಕೋರ್ಟ್ ನಿರ್ದೇಶನ ನೀಡಿ ಮಗಳನ್ನು ನೋಡಲು ಇಂದ್ರಜಿತ್‍ಗೆ ಅವ ಕಾಶ ನೀಡುವಂತೆ ಸೂಚಿಸಿದೆ. ಆದರೆ, ನ್ಯಾ ಯಾಲಯದ ಆದೇಶಕ್ಕೆ ಬೆಲೆ ಕೊಡು ತ್ತಿಲ್ಲ. ಕೋರ್ಟ್ ಆದೇಶವಿದೆ ಎಂದು ಮಗಳನ್ನು ನೋಡಲು ಪತ್ನಿ ತವರು ಮನೆಗೆ ಇಂದ್ರಜಿತ್ ತೆರಳಿದರೆ ಅಲ್ಲಿ ರೌಡಿಗಳ ಕಾಟ. ರೌಡಿಗಳ ಉಪಟಳವನ್ನು ಏಕಾಂಗಿಯಾಗಿ ಎದುರಿಸಿದ ಇಂದ್ರಜಿತ್ ಪೆಟ್ಟು ಕೂಡ ತಿಂದಿದ್ದಾರೆ. ಆದರೆ, ಇಷ್ಟಕ್ಕೆ ಸುಮ್ಮನಾಗದೇ ಮಗಳನ್ನು ಹೇಗಾದರೂ ನೋಡಬೇಕೆಂಬ ತಹತಹದಿಂದ ಹಿಂದೆ ಗೃಹ ಸಚಿವ ಕೆ.ಜೆ. ಜಾರ್ಜ್‍ಭೇಟಿಗೆ ಸತತ ಮೂವತ್ತು ಬಾರಿ ಪ್ರಯತ್ನ ನಡೆಸಿದ್ದಾರೆ. ಇದೀಗ ಹಾಲಿ ಗೃಹ ಸಚಿವ ಪರಮೇಶ್ವರ್‍ರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಮಧ್ಯೆಯೇ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಅವರ ಗಮನಕ್ಕೂ ತಂದಿದ್ದಾರೆ. ಅಶ್ವಸ್ಥನಾರಾಯಣ ಅವರು ವಿಧಾನಸೌಧದೊಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು, ಸಮಸ್ಯೆ ಆಲಿಸಿ ಸದನದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಇಂದ್ರಜಿತ್, ನನ್ನ ವಿಷಯಗಳು ಮಾಧ್ಯಮ ದಲ್ಲಿ ಪ್ರಸಾರಗೊಂಡರೆ ಹೆಚ್ಚಿನ ಸಮಸ್ಯೆ ಎದು ರಿಸಬೇಕಾಗುತ್ತದೆ. ರೌಡಿಗಳಿಂದ ಆತಂಕವಿದೆ, ನನ್ನ ಜೊತೆಗೆ ಯಾವುದೇ ಅಂಗ ರಕ್ಷಕರಿಲ್ಲ, ಇರುವುದೊಬ್ಬನೇ. ಇದೀಗ ನನ್ನ ಕೋರಿಕೆ ಸರ್ಕಾರದ ಗಮನಕ್ಕೆ ಬಂದಿದ್ದು ನನ್ನ ಮಗಳನ್ನು ನೋಡುವ ಅವಕಾಶ ಸಿಗುವ ವಿಶ್ವಾಸವಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com