ಉಗ್ರರಿಂದ ನಕಲಿ ವಿಳಾಸ?

ಉಗ್ರ ಸಂಘಟನೆ ಐಎಸ್ ಸೇರಿ ಮೃತಪಟ್ಟಿದ್ದಾರೆ ಎನ್ನಲಾಗಿರುವ ಇಬ್ಬರು ಯುವಕರು ಬೆಂಗಳೂರಿನಲ್ಲಿ ನಕಲಿ ವಿಳಾಸ ನೀಡಿದ್ದರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉಗ್ರ ಸಂಘಟನೆ ಐಎಸ್ ಸೇರಿ ಮೃತಪಟ್ಟಿದ್ದಾರೆ ಎನ್ನಲಾಗಿರುವ ಇಬ್ಬರು ಯುವಕರು ಬೆಂಗಳೂರಿನಲ್ಲಿ ನಕಲಿ ವಿಳಾಸ ನೀಡಿದ್ದರು ಎನ್ನುವ ಅನುಮಾನ ಉಂಟಾಗಿದೆ.

ಐಎಸ್ ಉಗ್ರ ಸಂಘಟನೆ ಸೇರಲು ಹೋಗಿ ಭಾರತದ 6 ಮಂದಿ ಮೃತಪಟ್ಟಿದ್ದಾರೆಂದು ಕೇಂದ್ರ  ಗುಪ್ತಚರ ಇಲಾಖೆ ಪಟ್ಟಿ ಬಿಡುಗಡೆ  ಮಾಡಿದ್ದು ಈ ಪೈಕಿ ರಾಜ್ಯದ ಮೂವರು  ಇದ್ದಾರೆ. ಅದರಲ್ಲಿ  ಬೆಂಗಳೂರಿನ 2 ವಿಳಾಸಗಳು ಇವೆ. ಮಹಮ್ಮದ್ ಉಮರ್ ಸುಬಾನ್ ಶಿವಾಜಿ ನಗರ ಹಾಗೂ ಫೈಜ್ ಮಸೂದ್ (28) ಕಾಕ್ಸ್ ಟೌನ್ ಬೆಂಗಳೂರು ಎಂದಿದೆ.

ಸೋಮವಾರ ಐಬಿ ಅಧಿಕಾರಿಗಳಿಗೆ ಮಾಧ್ಯಮಗಳಿಗೆ ಈ ವಿಳಾಸಗಳನ್ನು ಬಿಡುಗಡೆ  ಮಾಡಿದ್ದಾರೆ. ಆದರೆ, ನಾಲ್ಕೈದು ದಿನಗಳಿಂದಲೇ ಕೇಂದ್ರ ಹಾಗೂ ರಾಜ್ಯದ ಆಂತರಿಕ ಭದ್ರತಾ ದಳದ ಅಧಿಕಾರಿಗಳು, ಪರಿಶೀಲನೆ ನಡೆಸಿದಾಗ ಅಂತಹ ವ್ಯಕ್ತಿಗಳಿದ್ದ ಸುಳಿವು ಕಂಡು ಬಂದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ವಿಳಾಸಗಳಲ್ಲಿ ಫೈಜ್ ಮಸೂದ್ ಹಾಗೂ ಮಹಮ್ಮದ್ ಉಮರ್ ಸುಬಾನ್ ಹೆಸರಿನ  ವ್ಯಕ್ತಿಗಳಾಗಲಿ, ಈ ವಿಳಾಸಗಳಾಗಲಿ ಸರಿಯಾಗಿರುವ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀತ್ತಿಲ್ಲ. `ಐಎಸ್ ಉಗ್ರ ಸಂಘಟನೆ ಸೇರಿರುವವರು ನಕಲಿ ವಿಳಾಸ ನೀಡಿರಬಹುದು ಅಥವಾ ಹೆಸರುಗಳನ್ನು ತಪ್ಪಾಗಿ ಹೇಳಿರಬಹುದು ಅಥವಾ ಹೆಸರು ಹಾಗೂ ವಿಳಾಸಗಳೆರಡನ್ನೂ ಸುಳ್ಳು ಹೇಳಿರಬಹುದು. ಐಎಸ್ ಸಂಘಟನೆ ಸೇರಲು ಹೋದಾಗ ಒಂದು ವೇಳೆ ಸಿಕ್ಕಿ ಬಿದ್ದರೆ ಅಥವಾ ಮೃತಪಟ್ಟರೆ ತಮ್ಮ ಕುಟುಂಬ ಸದಸ್ಯರಿಗೆ ಅವಮಾನ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಮಾಹಿತಿ ನೀಡಿರುತ್ತಾರೆ' ಎನ್ನುತ್ತವೆ ಗುಪ್ತಚರ ಇಲಾಖೆ ಮೂಲಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com