ಮರಗಳ ಮಾರಣ ಹೋಮಕ್ಕೆ ವಿರೋಧ, ಸಭೆ ಅರ್ಧಕ್ಕೆ ಮೊಟಕು

ಮೆಟ್ರೋ 2ನೇ ಹಂತ ಕಾಮಗಾರಿಗೆ ಬಲಿಯಾಗುತ್ತಿದ್ದ ಮರಗಳ ಹನನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ...
ನ್‍ವಿರಾನ್‍ಮೆಂಟ್ ಸಪೋರ್ಟ್ ಗ್ರೂಪ್‍ನ ಸಂಯೋಜಕ ಲಿಯೋ, ಎಫ್ ಸಲ್ಡಾನಾ
ನ್‍ವಿರಾನ್‍ಮೆಂಟ್ ಸಪೋರ್ಟ್ ಗ್ರೂಪ್‍ನ ಸಂಯೋಜಕ ಲಿಯೋ, ಎಫ್ ಸಲ್ಡಾನಾ

ಬೆಂಗಳೂರು: ಮೆಟ್ರೋ 2ನೇ ಹಂತ ಕಾಮಗಾರಿಗೆ ಬಲಿಯಾಗುತ್ತಿದ್ದ ಮರಗಳ ಹನನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಸರಿಯಾದ ಯೋಜನ ಇಲ್ಲದೇ ಜನರ ಕಣ್ಣಿಗೆ ಮಣ್ಣೆರಚಿ  ಮರಗಳನ್ನು ಕಡಿದು, ಮೆಟ್ರೋ 2ನೇ ಹಂತದ ಕಾಮಗಾರಿಗೆ ಚಾಲನೆ ನೀಡಲು ಮುಂದಾಗಿದ್ದ ಬಿಬಿಎಂಪಿ ಹಾಗೂ ಬಿಎಂಆರ್‍ಸಿಎಲ್ ಅಧಿಕಾರಿಗಳ ಯೋಜನೆಗೆ ಹಿನ್ನಡೆಯಾಗಿದೆ.

`ಟೌನ್ ಆ್ಯಂಡ್ ಕಂಟ್ರಿ ಪ್ಲಾನಿಂಗ್ ಕಾಯ್ದೆ' ಅಡಿ ಯೋಜನೆ ಸಿದ್ಧವಾಗಿಲ್ಲದ ಕಾರಣ ಮರಗಳಿಗೆ ಸದ್ಯಕ್ಕೆ ಕೊಡಲಿ ಬೀಳುವುದು ತಪ್ಪಿದೆ. ಈ ಕಾಯ್ದೆ ಅಡಿ ಸಮಗ್ರ ಮಾಹಿತಿಯನ್ನು ತಂದು ನಂತರ ಚರ್ಚೆಗೆ ಬರುವಂತೆ ಸಾರ್ವಜನಿಕರು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ನಗರದ ವೈಯಾಲಿ ಕಾವಲ್‍ನ ಬಿಬಿಎಂಪಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ `ಮೆಟ್ರೋ 2ನೇ ಹಂತಕ್ಕೆ ಮರಗಳ ಹನನ ಕುರಿತು ಚರ್ಚೆ ' ಕಾರ್ಯಕ್ರಮವನ್ನು ಅರ್ಧಕ್ಕೆ ಮೊಡಕುಗೊಳಿಸಲಾಯಿತು.

ನಗರ ಹಸಿರೀಕರಣ, `ಟೌನ್ ಆ್ಯಂಡ್ ಕಂಟ್ರಿ ಪ್ಲಾನಿಂಗ್ ಕಾಯ್ದೆ' ಅಡಿ ಯೋಜನೆ ಸಿದ್ಧವಾಗಿಲ್ಲ. ನಮ್ಮ ಮುಖಕ್ಕೆ ಮಂಕುಬೂದಿ ಎರಚುವ ಬಿಎಂಆರ್‍ಸಿಎಲ್ ಅಧಿಕಾರಿಗಳು, ಚರ್ಚೆಯಲ್ಲಿ ತಾವು ಹೇಳುವುದೊಂದು ನಂತರ ಮಾಡುವುದೊಂದು. ಹಾಗಾಗಿ ಈ ಬಗ್ಗೆ
ಸಮಗ್ರ ಯೋಜನೆ ಸಿದ್ಧಪಡಿಸಿ ತಮಗೆ ಮಾಹಿತಿ ನೀಡಬೇಕು. ಅದುವರೆಗೂ ತಾವು ಯಾವುದೇ ಕಾರಣಕ್ಕೂ ಮರಗಳನ್ನು ಕತ್ತರಿಸಲು ಬಿಡುವುದಿಲ್ಲ ಎಂದು ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಪಟ್ಟುಹಿಡಿದರು. ಇದರಿಂದ ತಬ್ಬಿಬ್ಬಾದ ಮೆಟ್ರೋ ಹಾಗೂ ಬಿಬಿಎಂಪಿ
ಅಧಿಕಾರಿಗಳು, ಅಲ್ಲಿ ನೆರೆದಿದ್ದವರಿಗೆ ಸೂಕ್ತ ಉತ್ತರ ನೀಡಲು ಸಾಧ್ಯವಾಗದೆ ಮುಂದಿನ ದಿನಗಳಲ್ಲಿ ಸಭೆ ಕರೆದು `ಮರಗಳ ಹನನ'ದ ಬಗ್ಗೆ ಚರ್ಚಿಸಲಾಗುವುದು ಎಂದು ಸಭೆಯನ್ನು ಮುಕ್ತಾಯಗೊಳಿಸಿದರು.

ಪ್ರಶ್ನೆಗೆ ತಬ್ಬಿಬ್ಬಾದ ಅಧಿಕಾರಿಗಳು: ಮೆಟ್ರೋ 2ನೇ ಹಾಗೂ 4ನೇ ಹಂತದಲ್ಲಿ ಒಟ್ಟು 425 ಮರಗಳಿಗೆ ಕೊಡಲಿ ಹಾಕಲು ಬಿಬಿಎಂಪಿಗೆ ಬಿಎಂಆರ್‍ಸಿಎಲ್ ಪತ್ರ ಬರೆದಿತ್ತು. ಆ ಪ್ರಕಾರ ಬಿಬಿಎಂಪಿ ಅಧಿಕಾರಿಗಳು ಸಹ ಮರ ಕಡಿಯಲು ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ಕರೆಯಲಾಗಿತ್ತು. ಈ ವೇಳೆ ಯೋಜನೆ ಬಗ್ಗೆ ಮಾತನಾಡಿದ ಮೆಟ್ರೋ ಅಧಿಕಾರಿ ಕಲಾಸ್ವಾಮಿ ನಾಯಕ್, ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ, ಹಾಗೂ ಪುಟ್ಟೇನಹಳ್ಳಿಯಿಂದ  ಅಂಜನಾಪುರದವರಗೆ ಮರಗಳನ್ನು  ಕತ್ತರಿಸಲು ಬಿಎಂಆರ್‍ಸಿಎಲ್ ಸಜ್ಜಾಗಿದೆ. ಮರಗಳನ್ನು ಸಹ ಈಗಾಗಲೇ ಗುರುತಿಸಲಾಗಿದೆ. ಇತರೆ ಸಾರಿಗೆಗಳಿಗೆ ಹೋಲಿಸಿದರೆ ಮೆಟ್ರೋ ಉತ್ತಮ ಎಂದು ಹೇಳುತ್ತಾ ತಮ್ಮ ಮಾತು ಮುಂದುವರಿಸಿದರು. ಅಷ್ಟರಲ್ಲಿ ಅವರ ವಿವರಣೆ ಪ್ರಶ್ನಿಸಿದ ಎನ್‍ವಿರಾನ್‍ಮೆಂಟ್ ಸಪೋರ್ಟ್ ಗ್ರೂಪ್‍ನ
ಸಂಯೋಜಕ ಲಿಯೋ, ಎಫ್ ಸಲ್ಡಾನಾ, ಮೆಟ್ರೋ ಸೇಫ್. ಸೇಫ್ ಅಲ್ಲ ಎಂಬಿತ್ಯಾದಿ ಬಗ್ಗೆ ಮಾಹಿತಿ ತಮಗೆ ಬೇಡ,'ಎಂದರು. ಮೆಟ್ರೋ 2 ಮತ್ತು 4ನೇ ಹಂತದ ಕಾಮಗಾರಿಗೆ ಕಡಿಯುವ ಮರಗಳು ಎಷ್ಟು? ಎಲ್ಲೆಲ್ಲಿ ಎಂಬ ಬಗ್ಗೆ ತಮಗೆ ಸಂಪೂರ್ಣ ವಿವರ ನೀಡಿ'
ಎಂದರು.

ಆದರೆ, ಪ್ರಶ್ನೆಗೆ ಸರಿಯಾದ ಉತ್ತರ ದೊರಕದ ಕಾರಣ ವಾಗ್ದಾದಕ್ಕಿಳಿದು ತಾಂತ್ರಿಕ ಮಾಹಿತಿ ನೀಡಿ. ಹತ್ತಾರು ವರ್ಷ, ನೂರಾರು ವರ್ಷದ ಮರ ಕತ್ತರಿಸುತ್ತೀರಿ. ಆದರೆ ನೀವು ಮತ್ತೆ ಮರ ನೆಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com