ಈ ವರ್ಷ ದೀಪಾವಳಿಯ ವಾಯುಮಾಲಿನ್ಯ ಕಡಿಮೆ: ಶೇ.42ರಷ್ಟು ಕ್ಷೀಣ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೀಪಾವಳಿ ಹಬ್ಬದ ಸಮಯದಲ್ಲಿ ವಾಯುಮಾಲಿನ್ಯದ ಪ್ರಮಾಣ ಪರಿಶೀಲಿಸಿದ್ದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೀಪಾವಳಿ ಹಬ್ಬದ ಸಮಯದಲ್ಲಿ ವಾಯುಮಾಲಿನ್ಯದ ಪ್ರಮಾಣ ಪರಿಶೀಲಿಸಿದ್ದು  ಬಾರಿಗೆ ಹೋಲಿಸಿದರೆ ಈ ಬಾರಿ ಶೇ.42 ರಷ್ಟು ವಾಯುಮಾಲಿನ್ಯ ಇಳಿಕೆಯಾಗಿದೆ.

ಮಂಡಳಿಯ ಅಧಿಕಾರಿಗಳು ನಗರದ 13 ಸ್ಥಳಗಳನ್ನು ವಾಯುಮಾಲಿನ್ಯದ ಗುಣಮಟ್ಟ ಪರಿಶೀಲನೆಗೆ ಆಯ್ಕೆ ಮಾಡಿದ್ದರು. 2014 ರ ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ವಾಯುಮಾಲಿನ್ಯ ಉಂಟಾಗಿತ್ತು. ಈಗ 11 ಸ್ಥಳಗಳಲ್ಲಿ ಇದರ ಪ್ರಮಾಣ ಕಡಿಮೆಯಾಗಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ನ.5, 6ರ ಸಾಮಾನ್ಯ ದಿನ ಹಾಗೂ ನ.10, 11, 12 ರ ದೀಪಾವಳಿ ಹಬ್ಬದ ದಿನಗಳಂದು ಮಂಡಳಿಯು ಸಂಶೋಧನೆ ನಡೆಸಿದೆ. ಪಟಾಕಿ ಸಿಡಿಸುವುದರಿಂದ ಉಂಟಾಗುವ ಮಾಲಿನ್ಯದ ಪ್ರಮಾಣ ಅಳೆಯಲಾಗಿದೆ

ರಾಷ್ಟ್ರೀಯ ಮಟ್ಟದ ಲೆಕ್ಕಾಚಾರದ ಪ್ರಕಾರ ಗಾಳಿಯಲ್ಲಿ ಸಲ#ರ್ ಡೈ ಆಕ್ಸೈಡ್(ಎಸ್‍ಓ2) ಹಾಗೂ ನೈಟ್ರೋಜನ್ ಡೈ ಆಕ್ಸೈಡ್(ಎನ್ ಓ2) 80.0 ಮೈಕ್ರೋ ಗ್ರಾಂ ಮಿತಿ ಮೀರಬಾರದು. ನ.5,6 ರ ಸಾಮಾನ್ಯ ದಿನಗಳಂದು 13 ಸ್ಥಳಗಳಲ್ಲಿ ಎಸ್‍ಓ2 ಹಾಗೂ ಎನ್‍ಓ 2 ಪ್ರಮಾಣ ಮಿತಿಯಲ್ಲಿದೆ. ಧೂಳು, ಹೊಗೆ ಸೇರಿದಂತೆ ಎಲ್ಲ ಮಾಲಿನ್ಯಕಾರಕ ಅಂಶ ಒಳಗೊಂಡ ಪರ್ಟಿಕ್ಯುಲೇಟ್ ಮ್ಯಾಟರ್(ಪಿಎಂ10) 7 ಸ್ಥಳಗಳಲ್ಲಿ ಶೇ.26.0ರಷ್ಟು ಕಡಿಮೆಯಾಗಿದೆ. ಆದರೆ 6 ಸ್ಥಳಗಳಲ್ಲಿ ಇದರ ಪ್ರಮಾಣ ಶೇ.85 ರಷ್ಟು ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪಿಎಂ10 ಪ್ರಮÁಣ 11 ಸ್ಥಳಗಳಲ್ಲಿ ಶೇ.42 ರಷ್ಟು ಕಡಿಮೆಯಾಗಿದೆ. ಈ ಬಾರಿ ಮಳೆಯಿಂದಾಗಿ ಪಟಾಕಿ ಬಳಕೆ ಕಡಿಮೆಯಾಗಿದ್ದರಿಂದ ಈ ಪ್ರಮಾಣ ಎಂದು ಇಳಿಕೆಯಾಗಿರಬಹುದು
ಎಂದು ಅಂದಾಜಿಸಲಾಗಿದೆ. ಯಲಹಂಕದ ಕೆಎಚ್‍ಬಿ ಕೈಗಾರಿಕಾ ಪ್ರದೇಶ ಹಾಗೂ ಸೊನ್ನೇನಹಳ್ಳಿಯ ಜನವಸತಿ ಪ್ರದೇಶದಲ್ಲಿ ಪಿಎಂ 10 ಪ್ರಮÁಣ ಶೇ.43.5 ಕ್ಕೆ ಏರಿಕೆಯಾಗಿದೆ.

ಸಾಮಾನ್ಯ ದಿನ-ದೀಪಾವಳಿ ದಿನ:ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದೀಪಾವಳಿ ದಿನದಂದು ವಿಕ್ಟೋರಿಯಾ ಆಸ್ಪತ್ರೆ ಬಳಿ ಎಸ್‍ಓ2 ಶೇ.18 ಹೆಚ್ಚಳ, ಎನ್‍ಓ2 ಶೇ.23 ಇಳಿಕೆ ಹಾಗೂ ಪಿಎಂ10 ಶೇ.200 ಕ್ಕೆ ಏರಿದೆ. ಯಶವಂತಪುರ ಪೊಲೀಸ್ ಠಾಣೆ ಬಳಿ ಎಸ್ ಓ2 ಶೇ.8 ಏರಿಕೆ ಹಾಗೂ ಪಿಎಂ10 ಶೇ.5ಕ್ಕೆ ಇಳಿದಿದೆ. ಮೈಸೂರು ರಸ್ತೆಯ ಎಎಂಸಿಓ ಬ್ಯಾಟರೀಸ್ ಬಳಿ ಎಸ್‍ಓ2 ಪ್ರಮಾಣ ಶೇ.50 ಹೆಚ್ಚಿದ್ದು, ಪಿಎಂ10 ಪ್ರಮಾಣ ಶೇ.11 ಇಳಿಕೆಯಾಗಿದೆ. ಸಿಲ್ಕ್ ಬೋರ್ಡ್ ಬಳಿ ಎಸ್ ಓ2 ಶೇ.25ಕ್ಕೆ ಏರಿಕೆ ಹಾಗೂ ಪಿಎಂ10 .55ಕ್ಕೆ ಇಳಿದಿದೆ. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಕೇಂದ್ರದ ಬಳಿ ಎಸ್‍ಓ2 ಶೇ.42 ಇಳಿಕೆ, ಎನ್‍ಓ2 ಶೇ.23 ಇಳಿಕೆ ಹಾಗೂ ಪಿಎಂ10 ಶೇ.192ಕ್ಕೆ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದೆ. ವೈಟ್‍ ಫೀಲ್ಡ್  ಐಟಿಪಿಎಲ್ ಬಳಿ ಎನ್‍ಓ2 ಶೇ.45 ಇಳಿಕೆ ಹಾಗೂ ಪಿಎಂ10 ಶೇ.63 ಇಳಿಕೆಯಾಗಿದೆ. ಸೊನ್ನೇನಹಳ್ಳಿಯಲ್ಲಿ ಎಸ್‍ಓ2 ಶೇ.8 ಏರಿಕೆ, ಎನ್‍ಓ2 ಶೇ.34 ಏರಿಕೆ ಹಾಗೂ ಪಿಎಂ10 ಶೇ.21 ಹೆಚ್ಚಾಗಿದೆ. ಕೆಎಚ್‍ಬಿ ಕೈಗಾರಿಕಾ ಪ್ರದೇಶದಲ್ಲಿ ಎಸ್ ಓ2 ಶೇ.8 ಏರಿಕೆ, ಎನ್‍ಓ2 ಶೇ.81 ಇಳಿಕೆ ಹಾಗೂ ಪಿಎಂ10 ಶೇ.12 ಇಳಿದಿದೆ. ಪೀಣ್ಯದ ಕೆಎಸ್‍ಪಿಸಿಬಿ ಕಚೇರಿ ಬಳಿ ಎನ್‍ಓ2 ಶೇ.18 ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com