ಮಾರ್ಚ್‍ಗೆ ಟೆರ್ರಾ ಫಾರ್ಮಗಿಲ್ಲ ಕಸ

ಮಾರ್ಚ್‍ನಲ್ಲಿ ಟೆರ್ರಾ ಫಾರ್ಮ ಘಟಕಕ್ಕೆ ಕಸ ಕಳುಹಿಸದಿರಲು ತೀರ್ಮಾನಿಸಿದ್ದು, ಎಲ್ಲ ಕಾರ್ಪೊರೇಟರ್‍ಗಳು ಮೂಲದಲ್ಲಿ ಕಸ ವಿಂಗಡಣೆಗೆ ಒತ್ತು ನೀಡಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಾರ್ಚ್‍ನಲ್ಲಿ ಟೆರ್ರಾ ಫಾರ್ಮ ಘಟಕಕ್ಕೆ ಕಸ ಕಳುಹಿಸದಿರಲು ತೀರ್ಮಾನಿಸಿದ್ದು, ಎಲ್ಲ ಕಾರ್ಪೊರೇಟರ್‍ಗಳು ಮೂಲದಲ್ಲಿ ಕಸ ವಿಂಗಡಣೆಗೆ ಒತ್ತು ನೀಡಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕಿವಿಮಾತು ಹೇಳಿದರು. ಬಿಬಿಎಂಪಿ ಸದಸ್ಯರಿಗಾಗಿ ಶುಕ್ರವಾರ ಪುರಭವನದಲ್ಲಿ ಆಯೋಜಿಸಿದ್ದ `ಕೆಎಂಸಿ ಕಾಯ್ದೆ  ಕುರಿತ ತರಬೇತಿ ಕಾರ್ಯಾಗಾರ'ದಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಹೆಚ್ಚುತ್ತಿದೆ. ನಿತ್ಯ 1,500 ಟನ್ ತ್ಯಾಜ್ಯ ರಸ್ತೆ ಬದಿಯಲ್ಲೇ ಉಳಿದು ಬಿಬಿಎಂಪಿಗೆ ಕೆಟ್ಟ ಹೆಸರು ಬರುತ್ತಿದೆ. ಟೆರ್ರಾ ಫಾರ್ಮ ಹಾಗೂ ಎಂಎಸ್
ಜಿಪಿ ಘಟಕಗಳಲ್ಲಿ ಸಾಮರ್ಥ್ಯದಷ್ಟೇ ಕಸ ಕಳುಹಿಸಲು  ನಿರ್ಧರಿಸಲಾಗಿದೆ. ಎರಡೂ ಘಟಕಗಳಲವ್ಲಿ ಅವೈಜ್ಞಾನಿಕವಾಗಿ  ಕಸ ವಿಲೇವಾರಿ ನಡೆಯುತ್ತಿರುವುದರಿಂದ ಈ ಸಮಸ್ಯೆ
ಉಂಟಾಗಿತ್ತು. ಮಾರ್ಚ್ ಅಂತ್ಯದ ವೇಳೆಗೆ ಟೆರ್ರಾ ಫಾರ್ಮಕ್ಕೆ ಕಸ ಕಳುಹಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹೊಸ 7 ಘಟಕಗಳಲ್ಲಿ 2,200 ಟನ್ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆಗೆ ಪ್ರಯತ್ನಿಸಬೇಕಿದೆ. ಹೀಗಾಗಿ ಬಿಬಿಎಂಪಿ ಸದಸ್ಯರು ತಮ್ಮ ವಾರ್ಡ್‍ಗಳಲ್ಲಿ ಕಸ ವಿಂಗಡಣೆಗೆ ಒತ್ತು ನೀಡಬೇಕು. ಕಸದಿಂದ ಇಂಧನ ಉತ್ಪಾದಿಸುವ 3-4
ಘಟಕ ಆರಂಭಕ್ಕೆ ನೆದರ್‍ಲ್ಯಾಂಡ್, ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಮಲೇಷ್ಯಾ ದೇಶಗಳ ಜತೆ ಚರ್ಚೆ ನಡೆಸಲಾಗಿದೆ ಎಂದರು.
ಗುಂಡಿ ಮುಚ್ಚಲು ಕ್ರಮ: ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಗುಂಡಿ ಮುಚ್ಚಲು ಸರ್ಕಾರ ರು.500 ಕೋಟಿವೆಚ್ಚದಲ್ಲಿ  ರಸ್ತೆ ಕಾಮಗಾರಿ ಆರಂಭಿಸಿದೆ.  ಲೋಕೋಪಯೋಗಿ 
ಇಲಾಖೆಯಿಂದ  ರು.275 ಕೋಟಿ ಮೊತ್ತದಲ್ಲಿ ಪ್ರಮುಖ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಟೆಂಡರ್  ಕರೆಯಲಾಗಿದೆ. ರು.200 ಕೋಟಿ ವೆಚ್ಚದಲ್ಲಿ ಇನ್ನಷ್ಟು ಕಾಮಗಾರಿ ಆರಂಭವಾಗಲಿದೆ. ಗುತ್ತಿಗೆದಾರರು ಕಾಮಗಾರಿ ಮಾಡುವಾಗ ಗುಣಮಟ್ಟಕ್ಕೆ ಒತ್ತು ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕಾರ್ಪೊರೇಟರ್‍ಗಳು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕಾಮಗಾರಿ ಪರಿಶೀಲಿಸಬೇಕು ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 23 ಲಕ್ಷ ಆಸ್ತಿಗಳಿದ್ದರೂ 16 ಲಕ್ಷ ಆಸ್ತಿಗಳಿಂದ ಮಾತ್ರ ತೆರಿಗೆ ವಸೂಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರು.2,900 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ಈಗಾಗಲೇ ರು.1,750 ಕೋಟಿ ಸಂಗ್ರಹವಾಗಿದೆ. ಸದಸ್ಯರು ಪಾಲಿಕೆಯ ಆರ್ಥಿಕ ಸ್ಥಿತಿ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದರು.
ವಿಶೇಷ ಅನುಮತಿ: ಮಳೆ ನಿಂತ ಸಮಯದಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆಯಿಂದ ಕಾಮಗಾರಿಗೆ ಅಡ್ಡವಾಗುತ್ತಿದೆ. ಹೀಗಾಗಿ ಕಾಮಗಾರಿಗೆ ನೀತಿ ಸಂಹಿತೆಯಿಂದ ಯಾವುದೇ ಅಡ್ಡಿಯಾಗದಂತೆ ವಿಶೇಷ ಅನುಮತಿ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸಚಿವ ಜಾರ್ಜ್ ತಿಳಿಸಿದರು.
ಏನ್ರೀ ಜನರ ಕರ್ಮ 
ಏನ್ರೀ ಈ ಜನರ ಕರ್ಮ! ಉದ್ದ ಸಾಲಿನಲ್ಲಿ ನಿಮಗೆ ಮತ ಹಾಕಿದ ನಂತರವೂ ಕೆಲಸ ಮಾಡಿಸಿಕೊಳ್ಳಲು ಅಂಗಲಾಚುವಂತಾಗಿದೆ. ಪುರಭವನದಲ್ಲಿ ನಡೆದ  ಬಿಬಿಎಂಪಿ ಕಾರ್ಯಾಗಾರದಲ್ಲಿ ಶಾಸಕ ಸುರೇಶ್‍ಕುಮಾರ್ ಸದಸ್ಯರನ್ನು ಹೀಗೆ ತರಾಟೆಗೆ ತೆಗೆದುಕೊಂಡರು. ಚುನಾವಣೆಗೆ ಅಭ್ಯರ್ಥಿಗಳು ನಿಲ್ಲಬೇಕು ಎಂದು  ಯಾವುದೇ  ಮತದಾರರು ಮನವಿ ಮಾಡಿಲ್ಲ. ಅಭ್ಯರ್ಥಿಗಳೇ ಮತದಾರರ ಕಾಲು ಹಿಡಿದು ಮತಯಾಚಿಸಿದ್ದಾರೆ. ಆದರೆ ಗೆದ್ದ ಬಳಿಕ ಸಣ್ಣ ಕೆಲಸಗಳನ್ನು ಮಾಡಿಕೊಡಿ ಎಂದು ಹತ್ತಿರ ಬಂದರೆ ಅವರ ಕಷ್ಟ ಕೇಳಲು ಕಾರ್ಪೊರೇಟರ್ ಗಳಿಗೆ ಸಮಯವಿಲ್ಲ. ಜನರು ಉದ್ದ ಸಾಲಿನಲ್ಲಿ ಮತ ಹಾಕುತ್ತಾರೆ. ಸಮಯಕ್ಕೆ ಸರಿಯಾಗಿನ ತೆರಿಗೆ ಪಾವತಿಸುವ ಮೂಲಕ ಕಾಮಗಾರಿಗೆ ವೆಚ್ಚ ಮಾಡಲು ಹಣವನ್ನೂ ನೀಡುತ್ತಾರೆ. ಆದರೆ ಅವರದ್ದೇ ದಯೆಯಿಂದ ಗೆದ್ದಿರುವ ಜನಪ್ರತಿನಿಧಿಗಳು ಅವರನ್ನೇ ಕಡೆಗಣಿಸುತ್ತಾರೆ. `ಕಾರ್ಪೊರೇಷನ್'  ಎಂಬುದು `ಕರಪ್ಶನ್' ಎಂಬಂತಾಗಿದೆ. ಬಿಬಿಎಂಪಿಯಲ್ಲಿ ¸ಸೋರಿಕೆ ಹೆಚ್ಚಿದ್ದು, ಇದನ್ನು ತಡೆಯಬೇಕಿದೆ. ಸೋರಿಕೆ ತಡೆದು ಟ್ಯಾಂಕ್ನ ನೀರನ್ನು ಎಲ್ಲರಿಗೂ  ಹಂಚಬೇಕು. ಆದರೆ ಸೋರಿಕೆ ತಡೆಯುವುದು ಬಿಟ್ಟು, ನಲ್ಲಿಗಳೇ ಇಲ್ಲದಂತೆ ಮಾಡಲಾಗುತ್ತಿದೆ ಎಂದರು.ಮೇಯರ್ ಮಂಜುನಾಥ ರೆಡ್ಡಿ, ಉಪಮೇಯರ್ ಹೇಮಲತಾ, ಆಡಳಿತ  ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com