ಗುಂಡು, ಹಿಂಸೆಯಿಂದ ವೈಚಾರಿಕತೆ ಹತ್ತಿಕ್ಕಲಾಗದು

ಬಂದೂಕಿನ ಗುಂಡು, ಹತ್ಯೆ, ಹಿಂಸೆ ಹಾಗೂ ಬೆದರಿಕೆಗಳಿಂದ ವೈಚಾರಿಕ ಅಭಿವ್ಯಕ್ತಿ ಹತ್ತಿಕ್ಕಲಾಗದು. ಇತಿಹಾಸದುದ್ದಕ್ಕೂ ಇಂತಹ ಹಲವು ಪ್ರಯತ್ನಗಳು ನಡೆದಿದ್ದರೂ ವೈಚಾರಿಕತೆಯ ದೀಪ ಪ್ರಜ್ವಲಿಸುತ್ತಲೇ ಇರುತ್ತದೆ. ಈಗ ನಾವು ಪ್ರಶಸ್ತಿ ವಾಪಸಿ ಮೂಲಕ...
ಸಾಹಿತಿಗಳು, ಕಲಾವಿದರು ಡಾ. ಎಂ. ಎಂ. ಕಲಬುರ್ಗಿ ಅವರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸಾಹಿತಿಗಳು, ಕಲಾವಿದರು ಡಾ. ಎಂ. ಎಂ. ಕಲಬುರ್ಗಿ ಅವರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಧಾರವಾಡ: ಬಂದೂಕಿನ ಗುಂಡು, ಹತ್ಯೆ, ಹಿಂಸೆ ಹಾಗೂ ಬೆದರಿಕೆಗಳಿಂದ ವೈಚಾರಿಕ ಅಭಿವ್ಯಕ್ತಿ ಹತ್ತಿಕ್ಕಲಾಗದು. ಇತಿಹಾಸದುದ್ದಕ್ಕೂ ಇಂತಹ ಹಲವು ಪ್ರಯತ್ನಗಳು ನಡೆದಿದ್ದರೂ ವೈಚಾರಿಕತೆಯ ದೀಪ ಪ್ರಜ್ವಲಿಸುತ್ತಲೇ ಇರುತ್ತದೆ. ಈಗ ನಾವು ಪ್ರಶಸ್ತಿ ವಾಪಸಿ ಮೂಲಕ ಆ ವೈಚಾರಿಕ ರಥವನ್ನು ಮುನ್ನಡೆಸುತ್ತಿದ್ದೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ...
ಶುಕ್ರವಾರ ಪ್ರಶಸ್ತಿ ವಾಪಸಾತಿ ಮಾಡಿದ ಲೇಖಕರ ಸಮಾಗಮಕ್ಕೂ ಮುನ್ನ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಗುಜರಾತ್ ರಾಜ್ಯಗಳಿಂದ ಆಗಮಿಸಿದ ಸಾಹಿತಿಗಳು, ಕಲಾವಿದರು
ಸ್ಪಷ್ಟಪಡಿಸಿದ ಅಚಲ ನಿಲುವು ವ್ಯಕ್ತಪಡಿಸಿದರು.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಈ ವಿಚಾರವಾದಿಗಳು ಇಲ್ಲಿನ ವಿವಿಧತೆ, ಬಹುತ್ವ ಮತ್ತು ಬಹುಸಂಸ್ಕೃತಿಗೆ ಪೆಟ್ಟು ಬಿದ್ದಾಗಲೆಲ್ಲ ಸಿಡಿದೇಳುತ್ತಲೇ ಬಂದಿದ್ದಾರೆ. ಈಗ ವಿಚಾರವಂತರು ಮತ್ತು ಸಾಹಿತಿಗಳು ಹತ್ಯೆ ಖಂಡಿಸಿ ಪ್ರಶಸ್ತಿ ವಾಪಸಿ ಮಾಡುತ್ತಿದ್ದಾರೆ. ಇದು ಅವರ ಬರಹದ ಮುಂದುವರಿದ ಭಾಗ ಅಷ್ಟೇ. ಅಂದ ಮಾತ್ರಕ್ಕೆ ಇದು ಯಾವುದೇ ಪಕ್ಷ, ಧರ್ಮದ ವಿರೋಧವಲ್ಲ. ಸಂವಿಧಾನ ಮೀರಿ ನಡೆಯುವ ಶಕ್ತಿಗಳ ವಿರುದ್ಧ ಮಾತ್ರ ಎಂದು ಸ್ಪಷ್ಟಪಡಿಸಿದರು.

ಗುಜರಾತಿನ ಜಿ.ಎನ್. ದೇವಿ, ಅನಿಲ್ ಜೋಶಿ, ಗೋವಾದ ದಾಮೋದರ ಮಾಂಜಿ, ಕರ್ನಾಟಕದ ರಹಮತ್ ತರಿಕೇರಿ, ಮಹಾರಾಷ್ಟ್ರದ ಸಂಜೀವ ಖಾಂಡೇಕರ ಅವರು, ಬರಹಗಾರರಲ್ಲಿ ಸಾಕಷ್ಟು ರೀತಿಯ ತಾತ್ವಿಕ ಭಿನ್ನಾಭಿಪ್ರಾಯಗಳಿರುತ್ತವೆ. ಅಂದ ಮಾತ್ರಕ್ಕೆ ಅವರು ಪರಸ್ಪರ ಹೊಡೆದಾಡುವುದಿಲ್ಲ. ಮತ್ತೊಬ್ಬರ ಅಭಿಪ್ರಾಯವನ್ನು ಗೌರವಿಸುವುದೇ ಸಾಹಿತ್ಯಿಕ ಸಂಸ್ಕೃತಿ. ಇಂತಹ ಸಂಸ್ಕೃತಿ ಮತ್ತು ಸಹಿಷ್ಣುತೆ ಸಮಾಜದಲ್ಲಿ ಇರಬೇಕಾಗುತ್ತದೆ. ಸಮಾಜದ ಕನ್ನಡಿಯಾದ ಸಾಹಿತ್ಯ ಸಮಾಜವನ್ನು ತಿದ್ದುವುದಕ್ಕಾಗಿ ಇರುತ್ತದೆ. ಅಂದಮಾತ್ರಕ್ಕೆ ಅದನ್ನು ತಮ್ಮ ಮೂಗಿನ ನೇರಕ್ಕೆ ಪರಿಭಾವಿಸಿ ಹತ್ತಿಕ್ಕುವ ಯತ್ನವೇ ಸಂವಿಧಾನ ವಿರೋಧಿ ಕೃತ್ಯವಾಗಿದೆ. ಇಂಥ ಕೃತ್ಯವನ್ನು ಎಲ್ಲರೂ ಒಕ್ಕೂರಲಿನಿಂದ ವಿರೋಧಿಸಬೇಕೆನ್ನುವುದು ನಮ್ಮ ಹಕ್ಕೊತ್ತಾಯ
ಎಂದು ಅವರೆಲ್ಲ ಮನವಿ ಮಾಡಿದರು.

ನೀವು ಹಂತಕರ ಪರವೇ?: ನಾವು ಪ್ರಶಸ್ತಿ ವಾಪಸಿ ಮಾಡಿದ್ದನ್ನು ಖಂಡಿಸಿ ಕೆಲವರು ಪುಸ್ತಕ ವಾಪಸಿ ಆಂದೋಲನಕ್ಕೆ ಇಳಿದಿದ್ದಾರೆ. ಸಂವಿಧಾನದ ಆಶ ಯಗಳಿಗೆ ವಿರುದ್ಧವಾಗಿರುವುದನ್ನು, ವೈವಿಧ್ಯತೆಯನ್ನು ವಿಫಲಗೊಳಿಸುವವರ ವಿರುದ್ಧ ನಾವು ಮುನಿಸಿಕೊಂಡಿದ್ದೇವೆ, ಆದರೆ ಈ ಪುಸ್ತಕ ವಾಪಸಿ ನೀಡುವವರು ಹತ್ಯೆ ಮತ್ತು ಸಂವಿಧಾನ ವಿರೋಧಿ ನಿಲುವನ್ನು  ಬಲಿಸುತ್ತಿದ್ದಾರೆಯೇ? ಯಾರ ಪರ ಅವರ ನಿಲುವು ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ ನಮ್ಮನ್ನು ನಿರಾಸೆಗೊಳಿಸಿದ್ದಾರೆ. ಕಲುಬುರ್ಗಿ ಹತ್ಯೆ ಪ್ರಕರಣ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕಲಬುರ್ಗಿ ಕುಟುಂಬಕ್ಕೆ ನ್ಯಾಯ ಸಿಗುವುದು ಅಸಾಧ್ಯವೆನೋ ಎನ್ನುವ
ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲೂ ನಮ್ಮದು ಹಕ್ಕೊತ್ತಾಯ ಒಂದೇ ಶೀಘ್ರ ಹಂತಕರನ್ನು ಬಂದಿಸಿ ನಮಗೆಲ್ಲ ಧೈರ್ಯ ತುಂಬಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.ಇದಕ್ಕೂ ಮುನ್ನ ಎಲ್ಲ ಪ್ರಶಸ್ತಿ ವಾಪಸಿಗಳು ಸಾಮೂಹಿಕವಾಗಿ ಡಾ. ಕಲಬುರ್ಗಿ ಅವರ ಮನೆಗೆ ತೆರಳಿ ಮೌನ ಆಚರಿಸಿದರು. ಅವರ ಕುಟುಂಬಕ್ಕೆ ಧೈರ್ಯ ಹೇಳಿದರು. ಒಟ್ಟು 32 ಜನ ಪ್ರಶಸ್ತಿ ವಾಪಸಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜ.30ರಂದು ದಾಂಡಿಯಲ್ಲಿ ಸಮಾವೇಶ: ಧಾರವಾಡದಲ್ಲಿ ಆಯೋಜನೆ ಮಾಡಿದ್ದ ಪ್ರಶಸ್ತಿ ವಾಪಸಿ ಲೇಖಕರ ಸಮಾವೇಶದಲ್ಲಿ ದಕ್ಷಿಣ ಭಾಗವಾದ ಧಾರವಾಡದಲ್ಲಿ ಶುರುವಾದ ವೈಚಾರಿಕ ರಥವನ್ನು ಗುಜರಾತಿನ ದಾಂಡಿವರೆಗೆ ಕೊಂಡೊಯ್ಯಲು ನಿರ್ಧರಿಸಲಾಯಿತು. ಚಲೋ ದಾಂಡಿ ಎನ್ನುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಹುತಾತ್ಮರಾದ ಜ. 30ರಂದು ಗುಜಾರಾತಿನ ದಾಂಡಿಯಲ್ಲಿ ಲೇಖಕರು, ಚಿಂತಕರು, ಕಲಾವಿದರು, ಸಿನಿಮಾ ನಿರ್ದೇಶಕರು ಅಪಾರ ಸಂಖ್ಯೆಯಲ್ಲಿ ಸೇರುವ ನಿರ್ಧಾರ ಕೈಗೊಂಡರು. ಈ ವಿಚಾರವನ್ನು ಗುಜರಾತ್‍ನ ಹಿರಿಯ ಸಾಹಿತಿ ಅನಿಲ ಆರ್. ಜೋಶಿ ಪ್ರಕಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com