ಗುತ್ತಿಗೆದಾರರಿಗೆ ಬಾಕಿ ಪಾವತಿಸುವೆ: ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ

ಬಿಬಿಎಂಪಿ ಗುತ್ತಿಗೆದಾರರಿಗೆ ಇನ್ನು 10 ದಿನಗಳಲ್ಲಿ ರು.150 ಕೋಟಿ ಬಾಕಿ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಮೇಯರ್ ಬಿ. ಎನ್.ಮಂಜುನಾಥ ರೆಡ್ಡಿ ಭರವಸೆ ನೀಡಿದರು...
ಮೇಯರ್ ಬಿ. ಎನ್.ಮಂಜುನಾಥ ರೆಡ್ಡಿ (ಸಂಗ್ರಹ ಚಿತ್ರ)
ಮೇಯರ್ ಬಿ. ಎನ್.ಮಂಜುನಾಥ ರೆಡ್ಡಿ (ಸಂಗ್ರಹ ಚಿತ್ರ)

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರಿಗೆ ಇನ್ನು 10 ದಿನಗಳಲ್ಲಿ ರು.150 ಕೋಟಿ ಬಾಕಿ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಮೇಯರ್ ಬಿ. ಎನ್.ಮಂಜುನಾಥ ರೆಡ್ಡಿ ಭರವಸೆ
ನೀಡಿದರು.

ಕೌನ್ಸಿಲ್ ಸಭೆ ಮುಂದೂಡಿಕೆಯಾಗಿ ಮೇಯರ್ ಹಾಗೂ ಪಾಲಿಕೆ ಆಯುಕ್ತರು ಹೊರ ಬರುತ್ತಿದ್ದಂತೆ ಬಾಕಿ ಪಾವತಿಸುವಂತೆ ಆಗ್ರಹಿಸಿ ಗುತ್ತಿಗೆದಾರರು ಪ್ರತಿಭಟನೆ ನಡೆಸಿದರು. ಆಯುಕ್ತರ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಬಾಕಿ ಪಾವತಿಯಾಗದೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದೆ, ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮೇಯರ್ ಕಚೇರಿಯಲ್ಲಿ ಆಯುಕ್ತರು ಹಾಗೂ ಗುತ್ತಿಗೆದಾರರೊಂದಿಗೆಸಭೆ ನಡೆಸಿದರು. ಕಮಿಷನ್ ನೀಡಿದವರಿಗೆ ಬಾಕಿ ಪಾವತಿಸುತ್ತಿರುವುದರಿಂದ ಬಡ  ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಬಾಕಿ ಪಾವತಿಗೆ ಸುಮಾರು ಎರಡು ವರ್ಷದಿಂದ ಹೋರಾಟ ನಡೆಸುತ್ತಿದ್ದರೂ, ಪ್ರಯೋಜವಾಗಿಲ್ಲ. ಕೇವಲ ಭರವಸೆ ನೀಡಲಾಗುತ್ತಿದೆ ಹೊರತು,
ಕಾರ್ಯಗತವಾಗುತ್ತಿಲ್ಲ. ಬ್ಯಾಂಕ್‍ಗಳಲ್ಲಿ ಸಾಲ ಸಿಗುತ್ತಿಲ್ಲ. ಆನ್‍ಲೈನ್ ಬಿಲ್ ಪಾವತಿವ್ಯವಸ್ಥೆ ಸರಿಯಾಗಿಲ್ಲ. ಈ ಅನ್ಯಾಯವನ್ನು  ಸರಿಪಡಿಸುವುದು ಯಾರು ಎಂದು ಗುತ್ತಿಗೆದಾರರು ಪ್ರಶ್ನಿಸಿದರು.

ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿದ ಮೇಯರ್, 10 ದಿನಗಳಲ್ಲಿ ನಗರೋತ್ತಾನದ ಅಡಿಯಲ್ಲಿ ರು.150 ಕೋಟಿ ಬಾಕಿ ಪಾವತಿಸಲು ಕ್ರಮ ಕೈಗೊಳ್ಳುವುದು ಹಾಗೂ 2 ದಿನಗಳಲ್ಲಿ ಬಾಕಿ ಪಾವತಿ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಹಾಕಲಾಗುವುದು ಎಂದು ಭರವಸೆ ನೀಡಿದರು. ಆಯುಕ್ತ ಕುಮಾರ್ ನಾಯಕ ಮಾತನಾಡಿ, ಗುತ್ತಿಗೆದಾರರಿಗೆ ಸುಮಾರು ರು.2300-2400 ಕೋಟಿ ಬಾಕಿ ಕೊಡಬೇಕಾಗಿದೆ. ಗುತ್ತಿಗೆದಾರರ ಬೇಡಿಕೆ ಸಮಂಜಸವಾಗಿದ್ದರೂ, ತಕ್ಷಣದಲ್ಲೇ ನೀಡಲು ಸಾಧ್ಯವಾಗುತ್ತಿಲ್ಲ. ಪಾಲಿಕೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿದ್ದು, ತೆರಿಗೆ ವಸೂಲಿಯಿಂದಲೇ ಹಣ ಸಂಗ್ರಹಿಸಬೇಕು. ಹೀಗಾಗಿ ತುರ್ತು ಯೋಜನೆಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೂ, ಗುತ್ತಿಗೆದಾರರ ಬಾಕಿ ಪಾವತಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com