ಬೆಂಗಳೂರು: ರಾಜ್ಯ ಸರ್ಕಾರದ ನಾಗರಿಕ ಸೇವಾ ನೇಮಕ ಸಂದರ್ಭದಲ್ಲಿ ಮಹಿಳಾ ಮೀಸಲು ಪ್ರಮಾಣವನ್ನು ಇನ್ನೂ ಶೇ.3ರಷ್ಟು ಹೆಚ್ಚಳ ಮಾಡುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.
ಈ ಸಂಬಂಧ ಸರ್ಕಾರ ರಾಜ್ಯಪತ್ರ ಹೊರಡಿಸಿದ್ದು, ಈಗಿರುವ ಶೇ.30ರಷ್ಟು ಮೀಸಲು ಪ್ರಮಾಣ ಇನ್ನು ಮುಂದೆ ಶೇ.33ಕ್ಕೆ ಹೆಚ್ಚಳವಾಗಲಿದ್ದು, ಮುಂದಿನ ಎಲ್ಲ ನೇಮಕ ಸಂದರ್ಭದಲ್ಲಿ ಈ ನಿಯಮ ಜಾರಿಗೆ ಬರುತ್ತದೆ.
ರಾಜ್ಯದಲ್ಲಿ ಹಾಲಿ ಇರುವ ಶೇ.30ರ ಮೀಸಲು ಪ್ರಮಾಣವನ್ನು ಶೇ.33ಕ್ಕೆ ಹೆಚ್ಚಳ ಮಾಡಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಲ್ಲಿಸಿದ್ದ ಪ್ರಸ್ತಾಪವನ್ನು ಸರ್ಕಾರ ಒಪ್ಪಿಕೊಂಡಿದೆ.