ಪೇದೆಗೆ ಮೇಘರಿಕ್ ಪ್ರಶಂಸೆ

ಮಲ್ಲೇಶ್ವರ 15ನೇ ಕ್ರಾಸ್‍ನಲ್ಲಿ ಹೋಟೆಲ್ ನೌಕರನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಕೇವಲ 3 ತಾಸಿನಲ್ಲೇ ಬಂಧಿಸಲು ಮುಖ್ಯಪಾತ್ರ ವಹಿಸಿದ ಕಾನ್ಸ್‍ಟೇಬಲ್ ಧನಂಜಯ್ ಅವರಿಗೆ ಪ್ರಶಂಸನಾ ಪತ್ರ ಮತ್ತು ರು.10 ಸಾವಿರ ಬಹುಮಾನ ನೀಡಿ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಗೌರವಿಸಿದರು...
ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ (ಸಂಗ್ರಹ ಚಿತ್ರ)
ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ (ಸಂಗ್ರಹ ಚಿತ್ರ)

ಬೆಂಗಳೂರು: ಮಲ್ಲೇಶ್ವರ 15ನೇ ಕ್ರಾಸ್‍ನಲ್ಲಿ ಹೋಟೆಲ್ ನೌಕರನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಕೇವಲ 3 ತಾಸಿನಲ್ಲೇ ಬಂಧಿಸಲು ಮುಖ್ಯಪಾತ್ರ ವಹಿಸಿದ ಕಾನ್ಸ್‍ಟೇಬಲ್ ಧನಂಜಯ್ ಅವರಿಗೆ ಪ್ರಶಂಸನಾ ಪತ್ರ ಮತ್ತು ರು.10 ಸಾವಿರ ಬಹುಮಾನ ನೀಡಿ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಗೌರವಿಸಿದರು.

ಅ.3ರ ರಾತ್ರಿ 11.30ಕ್ಕೆ ಹೋಟೆಲ್ ನೌಕರ ಆಶಿಷ್ ಪಾಲ್ (32) ಎಂಬಾತ ಕೆಲಸ ಮುಗಿಸಿ ಮಲ್ಲೇಶ್ವರ 15ನೇ ಕ್ರಾಸ್ ನಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಎರಡು ಬೈಕ್ ನಲ್ಲಿ ಹಿಂಬಾಲಿಸಿ ಬಂದ ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಹೊಟ್ಟೆಗೆ ಇರಿದು ಮೊಬೈಲ್ ಫೋನ್ ದೋಚಿದ್ದರು. ಗಾಯಾಳು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ವಿಷಯ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಎಲ್ಲ ಸಿಬ್ಬಂದಿಗೆ ಮಾಹಿತಿ ರವಾನೆಯಾಗಿತ್ತು. ಕೊಲೆ ಮಾಡಿ ದೇವಯ್ಯ ಪಾರ್ಕ್ ಬಳಿ ಚಹಾ ಸೇವಿಸುತ್ತಾ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಗಳನ್ನು ರಾತ್ರಿ ಗಸ್ತಿನಲ್ಲಿದ್ದ ಕಾನ್ಸ್‍ಟೇಬಲ್ ಧನಂಜಯ್ ಬಂಧಿಸಿದ್ದರು. ಇವರ ಬಂಧನದಿಂದ ಒಟ್ಟು 15 ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com