ಕಿಮ್ಸ್ ಸಿಬ್ಬಂದಿಗೆ ಈಗ ರೈತ ಸಂಘ ಬಲ

ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ಕಿಮ್ಸ್ ಆಸ್ಪತ್ರೆ ನರ್ಸ್ ಗಳು ನಡೆಸುತ್ತಿರುವ ಮುಷ್ಕರಕ್ಕೆ ರಾಜ್ಯ ರೈತ ಸಂಘ ಬೆಂಬಲ ಸೂಚಿಸಿದ್ದು ಬುಧವಾರ ಗೇಟ್ ಗೆ ಬೀಗ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ಕಿಮ್ಸ್ ಆಸ್ಪತ್ರೆ ನರ್ಸ್ ಗಳು ನಡೆಸುತ್ತಿರುವ ಮುಷ್ಕರಕ್ಕೆ ರಾಜ್ಯ ರೈತ ಸಂಘ ಬೆಂಬಲ ಸೂಚಿಸಿದ್ದು ಬುಧವಾರ ಗೇಟ್ ಗೆ ಬೀಗ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ನರ್ಸ್ ಗಳ ಬೇಡಿಕೆ ಸಂಬಂಧ ಕಿಮ್ಸ್ ನಿರ್ದೇಶಕರೂ ಆಗಿರುವ ಅಪ್ಪಾಜಿಗೌಡ ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನಡುವೆ ಶನಿವಾರ ಸಭೆ ನಿಗದಿಯಾಗಿತ್ತು. ಆದರೆ, ಅಪ್ಪಾಜಿಗೌಡ ಅವರು ವೈಯಕ್ತಿಕ ಕಾರಣಗಳಿಂದಾಗಿ ಬೆಳಗ್ಗೆ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿ ಮಧ್ಯಾಹ್ನದ ಬಳಿಕ ಬರುವುದಾಗಿ ತಿಳಿಸಿದ್ದರು. ಹೀಗಾಗಿ, ಸಭೆ ಸಂಜೆ 4 ಗಂಟೆಗೆ ಮುಂದೂಡಲಾಯಿತು. ಕೋಡಿಹಳ್ಳಿ ರಾತ್ರಿ 8 ರವರೆಗೆ ಕಾದರೂ ಅಪ್ಪಾಜಿಗೌಡ ಬರಲಿಲ್ಲ.

ನರ್ಸ್ ಗಳ ಹೋರಾಟದ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಸಭೆಗೆ ಅಪ್ಪಾಜಿಗೌಡ ಹಾಜರಾಗಿಲ್ಲ. ಅವರ ಕ್ರಮವನ್ನು ಖಂಡಿಸಿ ಹಾಗೂ ನರ್ಸ್ ಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಬುಧವಾರದಂದು ಮುಖ್ಯದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಲ್ಲಿ ಸುಮಾರು 500 ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗಾರರಿಗೆ ಹೇಳಿದರು. ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅಪ್ಪಾಜಿಗೌಡ, ನರ್ಸ್ ಗಳಿಗೆ ಅನ್ಯಾಯ ಮಾಡುವ ಉದ್ದೇಶವಿಲ್ಲ. ಪ್ರತಿಭಟನೆ ನಿಲ್ಲಿಸಿ ಶಾಂತಿಯುತವಾಗಿ ಮಾತುಕತೆಗೆ ಬಂದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com