
ನವದೆಹಲಿ: ಕರ್ನಾಟಕ ಮಾಹಿತಿ ಆಯೋಗವು ನಿತ್ಯ 140ಕ್ಕೂ ಹೆಚ್ಚು ಅರ್ಜಿ ವಿಚಾರಣೆ ಮಾಡುತ್ತಿದೆ. ಈ ಪೈಕಿ ಬೆಂಗಳೂರು ಮಹಾ ನಗರ ಪಾಲಿಕೆ, ಬಿಡಿಎ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪೌರಾಡಳಿತ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚು. ನಾಲ್ಕು ವರ್ಷಗಳಲ್ಲಿ ಮಾಹಿತಿ ಕೋರಿ ಸಲ್ಲಿಸುವ ಅರ್ಜಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅರ್ಜಿ ಸಲ್ಲಿಕೆ ಪೈಕಿ ಬೆಂಗಳೂರು ನಗರ ಮತ್ತು ನಗರ ಜಿಲ್ಲೆಗಳು ಅಗ್ರ ಸ್ಥಾನದಲ್ಲಿವೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಮಾಹಿತಿ ಆಯೋಗದ 10ನೇ ವಾರ್ಷಿಕ ಸಮ್ಮೇಳನದ ಕಾರ್ಯಗಾರದಲ್ಲಿ ಕರ್ನಾಟಕ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಟಿ. ರಾಮಾನಾಯಕ್ ಈ ಮಾಹಿತಿ ನೀಡಿದ್ದಾರೆ.
Advertisement