ಎಸ್ಟೇಟ್ ಲಾಬಿ ವಿರುದ್ಧ ಒಗ್ಗೂಡಿತು ಜನಶಕ್ತಿ

ಮಲ್ಲೇಶ್ವರಂನ ಸ್ಯಾಂಕಿ ಕೆರೆಯ ವಿಹಾರಿಗಳೆಲ್ಲ ಇಂದು ಒಟ್ಟುಗೂಡಿದ್ದರು. ಅವರೊಂದಿಗೆ ಮಕ್ಕಳೂ ಸೇರಿಕೊಂಡಿದ್ದರು. ಸ್ವಾತಂತ್ರ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿಮತ್ತು ಹಲವು ಸಂಘಟನೆಗಳು ಅವರ ಜತೆ ಗೂಡಿದ್ದರು. ಇವರೆಲ್ಲ ಒಟ್ಟು ಗೂಡಿದ್ದು ಸ್ಯಾಂಕಿ ಕೆರೆಯ ರಕ್ಷಣೆಗಾಗಿ...
ಸ್ವಾತಂತ್ರ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ (ಸಂಗ್ರಹ ಚಿತ್ರ)
ಸ್ವಾತಂತ್ರ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಮಲ್ಲೇಶ್ವರಂನ ಸ್ಯಾಂಕಿ ಕೆರೆಯ ವಿಹಾರಿಗಳೆಲ್ಲ ಇಂದು ಒಟ್ಟುಗೂಡಿದ್ದರು. ಅವರೊಂದಿಗೆ ಮಕ್ಕಳೂ ಸೇರಿಕೊಂಡಿದ್ದರು. ಸ್ವಾತಂತ್ರ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಮತ್ತು ಹಲವು ಸಂಘಟನೆಗಳು ಅವರ ಜತೆ ಗೂಡಿದ್ದರು.

ಇವರೆಲ್ಲ ಒಟ್ಟು ಗೂಡಿದ್ದು ಸ್ಯಾಂಕಿ ಕೆರೆಯ ರಕ್ಷಣೆಗಾಗಿ. ಸ್ಯಾಂಕಿ ಕೆರೆಯನ್ನು ರಿಯಲ್ ಎಸ್ಟೇಟ್ ಕುಳಗಳಿಂದ ರಕ್ಷಿಸಲು ಆಗ್ರಹಿಸಿ ‘ಸೇವ್ ಸ್ಯಾಂಕಿ ಫಾರಂ’ ಆಶ್ರಯದಲ್ಲಿ ಶನಿವಾರ ಒಟ್ಟುಗೂಡಿದ್ದ ಇವರೆಲ್ಲರೂ, ಕೆರೆ ಅಂಗಳದಲ್ಲಿ ಬೃಹತ್ ಪ್ರತಿಭಟನೆಯನ್ನೇ ನಡೆಸಿದರು.

ಸ್ಯಾಂಕಿ ಕೆರೆ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ಕೆರೆಯ ರಕ್ಷಣೆಗೆ ಮುಂದಾಗದ ಸರ್ಕಾರ ಮತ್ತು ಬಿಬಿಎಂಪಿ ಧೋರಣೆ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಹೋರಾಟಗಾರ ದೂರೆಸ್ವಾಮಿ ಬೆಂಗಳೂರು ಒಂದು ಕಾಲದಲ್ಲಿ ಕೆರೆಗಳ ತವರೂರಾಗಿತ್ತು. ನಗರದಲ್ಲಿ ನೂರಾರು ಕೆರೆಗಳು ಕುಡಿಯುವ ನೀರು ಪೂರೈಸುವ ಮೂಲವಾಗಿದ್ದವು. ಅದರೀಗ ಭೂಗಳ್ಳರ ಹಣದ ದಾಹಕ್ಕೆ ಕೆರೆಗಳು ಮಾಯವಾಗಿವೆ.  ಉಳಿದಿರುವ ನಾಲ್ಕಾರು ಕೆರೆಗಳನ್ನಾದರೂ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಪ್ರಾಣಿ ಮತ್ತು ಜೀವ, ಜಲಚರಗಳು ನೀರಿಗಾಗಿ ಹಾಹಾಕಾರ ಪಡಲಿವೆ," ಎಂದರು.

“ನಗರದಲ್ಲಿ ಈಗಾಗಲೇ ಅಂತರ್ಜಲ ಮಟ್ಟ ಪಾತಾಳಕ್ಕಿಳಿದು ಬೋರವೇಲ್ಧಿಗಳು ಬತ್ತುತ್ತಿವೆ. ಕೆರೆಗಳ ಒತ್ತುವರಿಯಿಂದ ನಗರ ಸೌಂದರ್ಯಕ್ಕೆ ಧಕ್ಕೆಯಾಗಿದೆ” ಎಂದು ಆಗ್ರಹಿಸಿದರು.
ಸಿಎಂ ಬಳಿ ನಿಯೋಗ: ನಂತರ ಪ್ರತಿಭಟನಾಕಾರರು ಮುಖ್ಯಮಂತ್ರಿಗಳ ಗೃಹ ಕಚೇರಿ ಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಗರದ ಕಾಡು ಮಲ್ಲೇಶ್ವರದಲ್ಲಿ 7.22 ಎಕರೆ ಜಾಗದಲ್ಲಿ ವಿಸ್ತಾರವಾಗಿ ಹರಡಿರುವ ಕೆರೆ ಸಂರಕ್ಷಿಸ ಬೇಕು. ಮಂತ್ರಿ ಡೆವಲಪರ್ಸ್ ಅತಿಕ್ರಮಿಸಿ ಕೊಂಡಿದೆ. ಕೂಡಲೇ ಇದನ್ನು ತೆರವುಗೊಳಿಸಿ ಕೆರೆ ಅಭಿವೃದ್ಧಿಗೊಳಿಸಬೇಕೆಂದು ಮನವಿ
ಸಲ್ಲಿಸಿದರು. ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಮಲ್ಲೇಶ್ವರಂ ರೆಸಿಡೆಂಟ್ಸ್ ವೆಲ್ ಫಾರ್ ಅಸೋಸಿಯೇಷನ್, ಮಲ್ಲೇಶ್ವರಂ ಸ್ವಾಭಿಮಾನ ಇನಿಶಿಯೇಟಿವ್, ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಸದಸ್ಯರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com