ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬೆಂಗಳೂರು ನಂ.1

ರಾಜ್ಯದ ಜೀವನ ಮಟ್ಟ ನಿರ್ಧರಿಸುವ ಗ್ರಾಮವಾರು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬೆಂಗಳೂರು ಪ್ರಥಮ ಸ್ಥಾನ ದಕ್ಕಿಸಿಕೊಂಡಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಜೀವನ ಮಟ್ಟ ನಿರ್ಧರಿಸುವ ಗ್ರಾಮವಾರು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬೆಂಗಳೂರು ಪ್ರಥಮ ಸ್ಥಾನ ದಕ್ಕಿಸಿಕೊಂಡಿದೆ. ಆದರೆ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ.

ರಾಜ್ಯದ 5898 ಗ್ರಾ.ಪಂಗಳ ಮಾನವ ಅಭಿವೃದ್ಧಿ ಚಿತ್ರಣ ಗಮನಿಸಿದರೆ ರಾಜ್ಯದ ಮಾನವ ಅಭಿವೃದ್ಧಿಯ ಸೂಚ್ಯಂಕ ಸರಾಸರಿ ದರ 0.4392 ಇದೆ. ರಾಜ್ಯದಲ್ಲಿ 2958 ಗ್ರಾಪಂಗಳ ಸೂಚ್ಯಂಕದ ದರ ಸರಾಸರಿಗಿಂತ ದರ 0.4392 ಇದೆ. ರಾಜ್ಯದಲ್ಲಿ  2958 ಗ್ರಾ. ಪಂಚಾಯಿತಿಗಳ ಸೂಚ್ಯಂಕದ ದರ ಸರಾಸರಿಗಿಂತ ಹೆಚ್ಚಿದೆ. ಉಳಿದವು ಸರಾಸರಿಗಿಂತ ಕಡಿಮೆ ಇದೆ. ರಾಜ್ಯ ಗ್ರಾಮೀಣಾಭಿವೃದ್ಧಿ, ಸಂಸ್ಥೆ ಸಿದ್ದ ಪಡಿಸಿರುವ ಗ್ರಾಮವಾರು ಮಾನವ ಅಭಿವೃದ್ಧಿಯ ಸೂಚ್ಯಂಕ ವರದಿಯನ್ನು ಮುಖ್ಯಮಂತ್ರಿ ಸಿದ್ದ ರಾಮಯ್ಯ ಬಿಡುಗಡೆಗೊಳಿಸಿದ್ದಾರೆ.

ವರದಿಯಲ್ಲೇನಿದೆ ?: ರಾಜ್ಯದ 5898 ಗ್ರಾ.ಪಂಗಳ ಮಾನವ ಅಭಿವೃದ್ಧಿ ಚಿತ್ರಣ ಗಮನಿಸಿದರೆ ರಾಜ್ಯದ ಸರಾಸರಿ ಮಾನವ ಅಭಿವೃದ್ಧಿ  ಸೂಚ್ಯಂಕ ದರ 0.4392 ಇದ್ದು, ಈ ದರಕ್ಕಿಂತ ಹೆಚ್ಚಿನ ಪ್ರಮಾಣ ಹೊಂದಿರುವುದು ಬೆಂಗಳೂರು ನಗರ ಜಿಲ್ಲೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂಗಳು. ಯಾದಗಿರಿ ಜಿಲ್ಲೆ ಅತ್ಯಂತ ಹಿಂದೆ ಬಿದ್ದಿದ್ದು, ಇಲ್ಲಿನ ಎಲ್ಲಾ ಗ್ರಾ.ಪಂಗಳೂ ಸರಾಸರಿ ಸೂಚ್ಯಂಕಕ್ಕಿಂತ ತೀರಾ ತಳಮಟ್ಟದಲ್ಲಿವೆ. ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ರಾಯಚೂರು ಮತ್ತು ವಿಜಯ ನಗರ ಜಿಲ್ಲೆಗಳ ಶೇ.90ರಷ್ಟು ಗ್ರಾ. ಪಂಗಳು ಸರಾಸರಿ ಸೂಚ್ಯಂಕಕ್ಕಿಂತ ಕಡಿಮೆ ಸ್ಥಾನ ಹೊಂದಿವೆ. ಈ ಎಲ್ಲಾ ಜಿಲ್ಲೆಗಳು ಹೈ.ಕ ಜಿಲ್ಲೆಗಳೆಂಬುದು ಇಲ್ಲಿ ಗಮನಾರ್ಹ.

ಬೆಂಗಳೂರು ಉತ್ತರ ತಾಲೂಕು ಪ್ರಥಮ: ಇನ್ನು ತಾಲೂಕುಗಳ ವಿಚಾರಕ್ಕೆ ಬಂದರೆ ಬೆಂಗಳೂರಿನ ಕೆಲವು ತಾಲೂಕುಗಳೂ ಸೇರಿದಂತೆ ರಾಜ್ಯದ 27 ತಾಲೂಕುಗಳ ಅಭಿವೃದ್ಧಿ ಸೂಚ್ಯಂಕ ದರ ಚೆನ್ನಾಗಿದೆ. ಉಳಿದ 19 ತಾಲೂಕುಗಳ ಸ್ಥಿತಿ ಶೋಚನೀಯ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ 64 ಪಂಗಳು ಅತ್ಯುನ್ನತ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ 47 ಗ್ರಾಪಂಗಳು ಮತ್ತು ಚಿಕ್ಕಮಗಳೂರು ತಾಲೂಕಿನ 42 ಗ್ರಾಪಂಗಳು ಉತ್ತಮವಾಗಿವೆ. ಯಾದಗಿರಿಯ ಸುರುಪುರ ಮತ್ತು ವಿಜಯಪುರ ಬಾಗೇವಾಡಿ ತಾಲೂಕುಗಳ ತಲಾ ಒಂದೊಂದು ಗ್ರಾಪಂಗಳು ಸೂಚ್ಯಂಕಕ್ಕಿಂತ ಮೇಲಿವೆ.

ಸರಾ ಸರಿ ಸೂಚ್ಯಂಕಕ್ಕಿಂತ ಮೇಲಿರುವ ಗ್ರಾಮ ಗಳಲ್ಲಿ ರಾಜಧಾನಿ ಬೆಂಗಳೂರಿನ ಶ್ರೀಕಂಠಪುರ ಪ್ರಥಮ ಸ್ಥಾನ ಪಡೆದಿದೆ. ನಂತರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಮಂಗಳೂರು, ಬೆಂಗಳೂರು ಉತ್ತರ ತಾಲೂಕಿನ ಗ್ರಾಪಂಗಳು ಉನ್ನತ ಸ್ಥಾನ ಕಾಯ್ದುಕೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com