ಎಸ್ಸೈ ಹಂತಕರು ಸೆರೆಯಾಗಲು ನೆರವಾದನೇ ಜೈಲು ಸ್ನೇಹಿತ!

ಜೈಲಿನಲ್ಲಿದ್ದಾಗ ಅಪರಾಧಿ ಸ್ನೇಹಿತರು ಪರಿಚಯ ಮಾಡಿಕೊಟ್ಟಿದ್ದ ವ್ಯಕ್ತಿಯೇ ದೊಡ್ಡಬಳ್ಳಾಪುರ ಎಸ್ಸೈ ಜಗದೀಶ್ ಹಂತಕರ ಸೆರೆಗೆ ನೆರವಾಗಿದ್ದಾನೆ!...
ಆರೋಪಿಗಳಾದ ಮಧು ಹಾಗೂ ಹರೀಶ್ ಬಾಬು
ಆರೋಪಿಗಳಾದ ಮಧು ಹಾಗೂ ಹರೀಶ್ ಬಾಬು

ಬೆಂಗಳೂರು: ಜೈಲಿನಲ್ಲಿದ್ದಾಗ ಅಪರಾಧಿ ಸ್ನೇಹಿತರು ಪರಿಚಯ ಮಾಡಿಕೊಟ್ಟಿದ್ದ ವ್ಯಕ್ತಿಯೇ ದೊಡ್ಡಬಳ್ಳಾಪುರ ಎಸ್ಸೈ ಜಗದೀಶ್ ಹಂತಕರ ಸೆರೆಗೆ ನೆರವಾಗಿದ್ದಾನೆ!

ಹೌದು. ಹಂತಕರಾದ ಹರೀಶ್‍ಬಾಬು ಮತ್ತು ಮಧು ಎಸ್ಸೈ ಹತ್ಯೆ ಮಾಡಿದ ನಂತರ ಅವರಿಂದ ಪಿಸ್ತೂಲ್ ಕಿತ್ತುಕೊಂಡು ಪರಾರಿಯಾಗಿದ್ದರು. ನಂತರ ಆಂಧ್ರದ ಕರ್ನೂಲ್‍ನಗೆ ತೆರಳಿದ್ದಾರೆ.
ಅಲ್ಲಿ ಜೈಲಿನ ಸ್ನೇಹಿತರ ಮೂಲಕ ಪರಿಚಯವಾಗಿದ್ದ ಹನುಮಂತರಾಮು ಎಂಬಾತನಿಗೆ ಈ ಪಿಸ್ತೂಲ್ ನೀಡಿ ಸಿಮï ಕಾರ್ಡ್ ಪಡೆದು ಹೈದ್ರಾಬಾದ್ ಗೆ ತೆರಳಿದ್ದರು.ನಂತರ ಮಹಾರಾಷ್ಟ್ರದ ಚಂದ್ರಾಪುರದಿಂದ ಕರೆ ಮಾಡಿದ ಹಂತಕರು, ಇನ್ನಷ್ಟು ಹಣ, ಸಿಮï ಕಾರ್ಡ್ ಹಾಗೂ ಮೊಬೈಲ್ ಫೋನ್ ವ್ಯವಸ್ಥೆ ಮಾಡುವಂತೆ ಹನುಮಂತ ರಾಮುಗೆ ಹೇಳಿದ್ದರು.

ಇದರ ಜಾಡು ಹಿಡಿದ ಬೆಂ.ಗ್ರಾಮಂತರ ಪೊಲೀಸರ ತಂಡ, ಹನುಮಂತ ರಾಮುನನ್ನು ವಶಕ್ಕೆ ಪಡೆದಿದೆ. ಅಲ್ಲದೆ, ಆತನೊಂದಿಗೆ ಇದ್ದು ಆರೋಪಿಗಳ ಬರುವಿಕೆಗೆ ಕಾಯ್ದಿದೆ. ಆದರೆ, ಯಾವಾಗ ಆರೋಪಿಗಳು ನಾಗ್ಪುರದ ರೈಲು ನಿಲ್ದಾಣದಲ್ಲಿದ್ದಾರೆ ಎಂಬ ಮಾಹಿತಿ ತಿಳಿದ ಮೇಲೆ ರಾಜ್ಯ ಪೊಲೀಸರ ಮಾಹಿತಿ ಆಧರಿಸಿ ನಾಗ್ಪುರ ಕ್ರೈಂ ಬ್ರ್ಯಾಂಚ್, ಭಯೋತ್ಪಾದಕ ನಿಗ್ರಹ ತಂಡ, ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಯಾರು ಈ ಹನುಮಂತ ರಾಮು?:
ಎಸ್ಸೈ ಹತ್ಯೆ ಆರೋಪಿ ಹರೀಶ್‍ಬಾಬು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗ ಕೆಲ ಅಪರಾಧಿಗಳ ಪರಿಚಯವಾಗಿತ್ತು. ಈ ವೇಳೆ ಹರೀಶ್ ಗೆ ಕರ್ನೂಲ್‍ನ ಹನುಮಂತರಾಮುನನ್ನು ಪರಿಚಯ ಮಾಡಿಸಿಕೊಟ್ಟಿದ್ದರು. ಈತ ಕಳ್ಳ ಮಾಲುಗಳ ಮಾರಾಟ, ಇತರ ಕೆಲಸಕ್ಕಾಗಿ ನೆರವಾಗುತ್ತಾನೆ ಎಂದು ಹೇಳಿದ್ದರು. ಅದರಂತೆ ಹರೀಶ್ ತಾನು ಕದ್ದ ಮಾಲುಗಳನ್ನು ಕರ್ನೂಲ್‍ನಲ್ಲಿರುವ ಹನುಮಂತರಾಮುವಿನ ಮೂಲಕ ಮಾರಾಟ ಮಾಡುತ್ತಿದ್ದ. ಜೊತೆಗೆ ಆ ಮಾಲುಗಳನ್ನು ಅಡವಿಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಮೀನು ನೀಡುತ್ತಿದ್ದ ತಿಮ್ಮಕ್ಕ:
ಆರೋಪಿ ಮಧು ತಂದೆ ಕೃಷ್ಣಪ್ಪ ಕೂಡ ಕಳ್ಳ. ಕಳವು ಪ್ರಕರಣದಲ್ಲಿ ಜೈಲಿಗೆ ಹೋದಾಗ ಅಲ್ಲಿ ಹರೀಶ್ ಬಾಬುನ ಪರಿಚಯವಾಗಿತ್ತು. ಪತಿಗೆ ಜಾಮೀನು ಕೊಡಿಸಲು ಹೋಗಿದ್ದ ತಿಮ್ಮಕ್ಕ, ಹರೀಶನಿಗೂ ಜಾಮೀನು ಕೊಡಿಸಿದ್ದಳು. ಅಲ್ಲಿಂದ ತಿಮ್ಮಕ್ಕನಿಗೂ ಹರೀಶ್ ಬಾಬು ಪರಿಚಯವಾಗಿತ್ತು. ಪತಿ ಮೃತಪಟ್ಟ ನಂತರ ಪರಿಚಿತ ಹರೀಶನೊಂದಿಗೆ ತಿಮ್ಮಕ್ಕ ಸಂಪರ್ಕ ಸಾಧಿಸಲು ಆರಂಬಿsಸಿದಳು. ಹರೀಶ ಕದ್ದು ತರುತ್ತಿದ್ದ ಎಲ್ಲ ಒಡವೆಗಳನ್ನೂ ತಿಮ್ಮಕ್ಕಳಿಗೆ ಕೊಡುತ್ತಿದ್ದ. ನಂತರ ಆಕೆಯ ಮಗ ಮಧು ಕೂಡ ಆತನೊಂದಿಗೆ ಸೇರಿಕೊಂಡ. ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದರೆ ಅವರಿಗೆ ಜಾಮೀನು ಕೊಡಿಸುವುದಕ್ಕಾಗಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಕೀಲರನ್ನು ತಿಮ್ಮಕ್ಕ ಹುಡುಕಿಕೊಂಡಿದ್ದಳು. ಪೊಲೀಸರ ವಿಚಾರಣೆ ವೇಳೆ ತಿಮ್ಮಕ್ಕ 25 ವಕೀಲರ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ತಿಂಗಳಿಗೊಮ್ಮೆ ಮನೆ ಬದಲು!:

ನಾಲ್ಕು ಮೊಬೈಲ್‍ಗಳನ್ನು ಇಟ್ಟುಕೊಂಡಿದ್ದ ಮಧು, ನೂರಾರು ಸಿಮïಗಳನ್ನು ಬಳಸುತ್ತಿದ್ದ. ಒಂದು ಕಡೆ ಕಳವು ಮಾಡಿದರೆ, ಕೂಡಲೇ ಸಿಮï ನಾಶಗೊಳಿಸಿ ಮೊಬೈಲ್ ಫೋನ್ ಬದಲಾಯಿಸುತ್ತಿದ್ದ. ಅಲ್ಲದೇ, ತಾಯಿ ಜತೆ ವಾಸ್ತವ್ಯ ಬದಲಿಸುತ್ತಿದ್ದ. ಮನೆ ಬಾಡಿಗೆ ತೆಗೆದುಕೊಳ್ಳುವಾಗ ಹರೀಶ್ ಬಾಬು ತನ್ನ ಪತಿ ಮಧು ಹಾಗೂ ರಘು ಮಕ್ಕಳು ಎಂದು ಹೇಳುತ್ತಿದ್ದರು. ಯಾವ ಮನೆಯಲ್ಲೂ ಅವರು ಮೂರು ತಿಂಗಳಿಗಿಂತ ಹೆಚ್ಚು ಕಾಲ ಉಳಿದುಕೊಳ್ಳುತ್ತಿರಲಿಲ್ಲ. ಹೀಗಾಗಿ ಪತ್ತೆ ಕಾರ್ಯ ಕಷ್ಟವಾಗಿತ್ತು.

ಯುವತಿಯೊಬ್ಬಳೊಂದಿಗೆ ಸಂಪರ್ಕದಲ್ಲಿರುತ್ತಿದ್ದ ಮಧು ವಾಟ್ಸ್ ಆ್ಯಪ್ ಮೂಲಕ ಆಕೆ ಜತೆ ಸಂಪರ್ಕದಲ್ಲಿರುತ್ತಿದ್ದ. ಪ್ರೇಯಸಿಯನ್ನು ಹೊರತುಪಡಿಸಿ ಇನ್ನಾರಿಗೂ ಆ ಮೊಬೈಲ್
ಸಂಖ್ಯೆಯನ್ನು ಕೊಟ್ಟಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 33 ಪ್ರಕರಣ ದಾಖಲು: ಕಳವು, ದರೋಡೆ, ಡಕಾಯಿತಿ ಸೇರಿದಂತೆ ಹರೀಶ್ ಬಾಬು ಮತ್ತು ಮಧು ವಿರುದ್ಧ ಬೆಂಗಳೂರಿನಲ್ಲಿ 13, ಹಾಸನದಲ್ಲಿ ಆರು, ಶಿವಮೊಗ್ಗದಲ್ಲಿ ಎರಡು, ಚಿಕ್ಕಮಗಳೂರಿನಲ್ಲಿ ಮೂರು, ಚಿತ್ರದುರ್ಗದಲ್ಲಿ ನಾಲ್ಕು, ತುಮಕೂರಿನಲ್ಲಿ ಎರಡು, ದಾವಣಗೆರೆ, ಬಳ್ಳಾರಿ ಹಾಗೂ
ಮೈಸೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com