ಉಬರ್ ಕಚೇರಿ ಮೇಲೆ ಕಲ್ಲು ತೂರಾಟ

ಉಬರ್ ಟ್ಯಾಕ್ಸಿ ಚಾಲಕರಿಗೆ ಆಡಳಿತ ಮಂಡಳಿ ನೀಡುತ್ತಿದ್ದ ಭತ್ಯೆ ವಿಚಾರವಾಗಿ ಕಂಪೆನಿ ವಿರುದ್ಧ ಪ್ರತಿಭಟನೆ ನಡೆಸಿದ ಟ್ಯಾಕ್ಸಿ ಚಾಲಕರು ಮಂಗಳವಾರ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಉಬರ್ ಟ್ಯಾಕ್ಸಿ ಚಾಲಕರಿಗೆ ಆಡಳಿತ ಮಂಡಳಿ ನೀಡುತ್ತಿದ್ದ ಭತ್ಯೆ ವಿಚಾರವಾಗಿ ಕಂಪೆನಿ ವಿರುದ್ಧ ಪ್ರತಿಭಟನೆ ನಡೆಸಿದ ಟ್ಯಾಕ್ಸಿ ಚಾಲಕರು ಮಂಗಳವಾರ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಸುಮಾರು 300 ಮಂದಿ ಚಾಲಕರು ಈ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಟ್ರಿಪ್ ಪ್ರಕಾರ ಭತ್ಯೆ ನೀಡುತ್ತಿದ್ದ ಕಂಪೆನಿ ಕಾಲ ಕ್ರಮೇಣ ವಾರಕ್ಕೆ ಬದಲಾಯಿಸಿತು. ನಿಗದಿಪಡಿಸಿದ್ದಕ್ಕಿಂತ ಕಡಿಮೆ ಭತ್ಯೆ ಪಾವತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಚಾಲಕರು 10 ದಿನಗಳಿಂದ ಪ್ರತಿಭಟಸುತ್ತಿದ್ದರು.

ಆಡಳಿತ ಮಂಡಳಿ, ಚಾಲಕರ ನಡುವೆ ಮಾತುಕತೆ ನಡೆದಿತ್ತು. ಆದರೆ, ತಮ್ಮ ಬೇಡಿಕೆಗೆ ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಕಲ್ಲು ತೂರಾಟ ನಡೆಸಿದರು. ಎಚ್ಎಸ್ಆರ್ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com