ನಕಲಿ ವೈದ್ಯಕೀಯ ಬಿಲ್ ನಾಲ್ವರು ಪೊಲೀಸ್ ಬಲೆಗೆ

ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಪಡೆಯಲು ಯತ್ನಿಸಿ ನಾಲ್ವರನ್ನು ವಿಧಾನ ಸೌಧ ಪೊಲೀಸರು ಬಂಧಿಸಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಪಡೆಯಲು ಯತ್ನಿಸಿ ನಾಲ್ವರನ್ನು ವಿಧಾನ ಸೌಧ ಪೊಲೀಸರು ಬಂಧಿಸಿದ್ದಾರೆ. ದೇಶಲಿಂಗ, ಇಲಿಯಾಸ್, ರಾಜುಗೌಡ ಮತ್ತು ಲಿಂಗೇಗೌಡ ಬಂಧಿತರು. ಆರೋಪಿಗಳೆಲ್ಲರೂ ಮಂಡ್ಯ, ಚನ್ನಪಟ್ಟಣ ಮೂಲದವರು. ದೇಶಲಿಂಗನನ್ನು ಬೆಂಗಳೂರಿನಲ್ಲಿ ಬಂಧಿಸಿದ ಪೊಲೀಸರು ಆತ ನೀಡಿದ ಮಾಹಿತಿ ಆಧಾರಿಸಿ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ದೇಶಲಿಂಗ, ಮೂವರು ಆರೋಪಿಗಳಿಗೆ ಆಸ್ಪತ್ರೆಯ ನಕಲಿ ಬಿಲ್ ಹಾಗೂ ವೈದ್ಯಕೀಯ ಪ್ರಮಾಣಪತ್ರ ಒದಗಿಸುತ್ತಿದ್ದ. ಮೂವರು ಆರೋಪಿಗಳು ದಾಖಲೆಗಳೊಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ ವೈದ್ಯಕೀಯ ಆರ್ಥಿಕ ನೆರವು ಕೋರಿ ಒಂದೇ ವಾರದಲ್ಲಿ 14 ಮಂದಿ-ಯಿಂದ ಅರ್ಜಿಗಳು ಬಂದಿವೆ. ಪರಿಶೀಲನೆ ವೇಳೆ ವೈದ್ಯಕೀಯ ಪ್ರಮಾಣ -ಪತ್ರಗಳು, ಹಾಗೂ ಗುರುತಿನ ಚೀಟಿ ನಕಲಿ ನೀಡಿರುವುದು ಕಂಡು ಬಂದಿದೆ ಎಂದು ಅ.16ರಂದು ಮುಖ್ಯಮಂತ್ರಿ ಕಚೇರಿ ಪರಿಹಾರ ನಿಧಿ ವಿಭಾಗದ ಉಪ ಕಾರ್ಯದರ್ಶಿ ಸೋಮಶೇಖರ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ತನಿಖೆ ಕೈಗೊಂಡ ಪೊಲೀಸರ ತಂಡ ಅರ್ಜಿದಾರರು ನೀಡಿದ್ದ ವಿಳಾಸ ಹುಡುಕಿಕೊಂಡು ಮಂಡ್ಯ ಹಾಗೂ ಚನ್ನಪಟ್ಟಣದ ಕುಟುಂಬ ಸದಸ್ಯರನ್ನು ಸಂಪರ್ಕಿಸಿದಾಗ ತಮ್ಮ ಮನೆಯಲ್ಲಿ ಯಾರೂ ಅನಾರೋಗ್ಯಕ್ಕೀಡಾಗಿಲ್ಲ. ಅಲ್ಲದೇ, ಪರಿಹಾರ ಕೋರಿ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com