ಮೇಯರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಮೇಯರ್ ಮಂಜುನಾಥ ರೆಡ್ಡಿ ಸಲ್ಲಿಸಿರುವ ಅಸ್ತಿ ವಿವರ ಘೋಷಣೆ ದೋಷದಿಂದ ಕೂಡಿದ್ದು, ಕ್ರಿಮಿನಲ್ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ಮಂಜುನಾಥ ರೆಡ್ಡಿ
ಮಂಜುನಾಥ ರೆಡ್ಡಿ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಮೇಯರ್ ಮಂಜುನಾಥ ರೆಡ್ಡಿ ಸಲ್ಲಿಸಿರುವ ಅಸ್ತಿ ವಿವರ ಘೋಷಣೆ ದೋಷದಿಂದ ಕೂಡಿದ್ದು, ಕ್ರಿಮಿನಲ್ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಅಡ್ವೊಕೇಟ್ ಎನ್.ಪಿ ಅಮೃತೇಶ್ ದೂರು ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ನೋಟರಿ ರಿಜಿಸ್ಟಾರ್ ಸಂಖ್ಯೆಯನ್ನು ಉಲ್ಲೇಖಿಸಿಲ್ಲ. ಇದರಿಂದ ಜನಪ್ರತಿನಿಧಿ ಕಾಯ್ದೆ-1951 ರ 125 (ಎ) ಉಲ್ಲಂಘನೆಯಾಗಿದ್ದು, ಆ ಸಂದರ್ಭದಲ್ಲೇ ನಾಮಪತ್ರ ತಿರಸ್ಕೃತವಾಗ ಬೇಕಿತ್ತು. ನಾಮಪತ್ರದಲ್ಲಿ ಈ ಎರಡು ವಿಷಯಗಳ ಕುರಿತು ಮಾಹಿತಿ ನೀಡದೆ ಕಾನೂನು ಉಲ್ಲಂಘಿಸಲಾಗಿದೆ.
ಹೀಗಾಗಿ ಕ್ರಿಮಿನಲ್ ಮೊಕದ್ದಮೆ ಹುಡಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. 2010 ರ ಚುನಾವಣೆ ವೇಳೆ ಪ್ಯಾನ್ ಕಾರ್ಡ್ ಆದಾಯ ತೆರಿಗೆ ಪಾವತಿಸಿದ್ದ ಬಗ್ಗೆ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದ ಮೇಯರ್ ಮೇಯರ್ ಮಂಜುನಾಥ್ ರೆಡ್ಡಿ, 2015 ರ ಆಗಸ್ಟ್ ನಲ್ಲಿ ನಡೆದ ಚುನಾವಣೆಯಲ್ಲಿ ಸೂಕ್ತವಾದ ಮಾಹಿತಿ ನೀಡಿಲ್ಲ. ಆದಾಯ ತೆರಿಗೆ ಪಾವತಿಸಿರುವ ಬಗ್ಗೆ  ಅಫಿಡವಿಟ್ ನಲ್ಲಿ ತಿಳಿಸಿದ್ದು, ಪ್ಯಾನ್ ಸಂಖ್ಯೆಯನ್ನೇ ಉಲ್ಲೇಕ್ಲ್ಹಿಸಿಲ್ಲ. ಐಸಿಐಸಿಐ ಬ್ಯಾಂಕ್ ನಿಂದ 5 ಲಕ್ಷಹ್ ಹಾಗೂ ಪಾವಗಡ ಸಹಕಾರಿ ಬ್ಯಾಂಕ್ ನಿಂದ ರೂ 28 ಲಕ್ಷ ಸಾಲ ಪಡೆದಿರುವ ಬಗ್ಗೆ ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಹೀಗೆ ಸಾಲ ಪಡೆಯಬೇಕೆಂದರೆ ಪ್ಯಾನ್ ಕಾರ್ಡ್ ಇರಲೇಬೇಕು. ಪ್ಯಾನ್ ಕಾರ್ಡ್ ಇದ್ದರೂ ಸಂಖ್ಯೆಯನ್ನು ಉಲ್ಲೇಖಿಸಿಲ್ಲ ಎಂದು ಅಡ್ವೊಕೇಟ್ ಎನ್.ಪಿ ಅಮೃತೇಶ್ ತಿಳಿಸಿದ್ದಾರೆ.
ಅಫಿಡವಿಟ್ ನ ದಾಖಲೆಯಲ್ಲಿ ನೋಟರಿ ನೋಂದಣಿ ಸಂಖ್ಯೆ ಹಾಗೂ ದಿನಾಂಕವನ್ನು ಉಲ್ಲೇಖಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ನೋಟರಿ ಕಾಯ್ದೆ ಪ್ರಕಾರ ನೋಟರಿಯ ನೋಂದಣಿ ಸಂಖ್ಯೆಯನ್ನು ಅಫಿಡವಿಟ್ ನಲ್ಲಿ ತಿಳಿಸಬೇಕು. ಆದರೆ ಈ ಜಾಗದಲ್ಲಿ ಖಾಲಿ ಬಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com