ಸರಗಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್ ಬಂಧನ

ಸರಗಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್ ನ ಏಳು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸರಗಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್ ನ ಏಳು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 21 ಲಕ್ಷ 60 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಹೋಷಂಗಾ ಬಾದ್ ನ ಇರಾನಿ ಕಾಸಿಂ ಅಲಿ(35), ಸೈಯದ್ ಸಾದಿಕ್(32), ಸೈಯ್ಯದ್ ಸಿದ್ದಿಕ್(31), ಹರಿಹರದ ಟಿಪ್ಪುನಗರದ ಲಾಲ್ ಖಾನ್ (32), ಅಂಬೇವಾಲಿಯ ಶಬೀರ್ ಆಸೀಫ್ ಸೈಯ್ಯದ್ (28) ಆಂಧ್ರಪ್ರದೇಶದ ಅಬ್ಬು ಆಲಿ(29) ಗುಂತಕಲ್ ನ ಅಸಾದುಲ್ಲಾ ಆಲಿ(25) ಬಂಧಿತ ಆರೋಪಿಗಳು. 
ನಗರದ ವಿವಿದೆಡೆ ಬೈಕ್ ಗಳಲ್ಲಿ ಸಂಚರಿಸುತ್ತಿದ್ದ ಈ ಗ್ಯಾಂಗ್, ಒಂಟಿಯಾಗಿ ಓಡಾಡುವ ಮಹಿಳೆಯರ ಗಮನ ಬೇರೆಡೆ ಸೆಳೆದು, ಅವರ ಸರ ಕಸಿದು ಪರಾರಿಯಾಗುತ್ತಿದ್ದರು.
ಪೊಲೀಸರ ಸೋಗಿನಲ್ಲಿ ಬರುತಿದ್ದ ಈ ಗ್ಯಾಂಗ್, ಮಹಿಳೆಯರಿಗೆ ನೀವು ನಿಮ್ಮ ಆಭರಣ ತೆಗೆದು ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ, ಇಲ್ಲದಿದ್ದರೇ ದಂಡ ವಿಧಿಸುತ್ತೇವೆ ಎಂದು ಹೇಳುತ್ತಿದ್ದರು. ಈ ವೇಳೆ ಮಹಿಳೆಯರು ಬ್ಯಾಕಿನಲ್ಲಿ ಆಭರಣವನ್ನು ಹಾಕುವಾಗ ಕಸಿದು ಪರಾರಿಯಾಗುತ್ತಿದ್ದರು. ಈ ಗ್ಯಾಂಗ್ ನ್ನು ಬಂಧಿಸುವ ಮೂಲಕ ಸರ ಅಪಹರಣದ 21 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com