ಹಲ್ಲೆ ಹಿಂದೆ ಯಾವುದೇ ಉದ್ದೇಶವಿರಲಿಲ್ಲ: ಅಮಿತ್ ಮಿಶ್ರಾ

ವಂದನಾ ನನ್ನನ್ನು ನಿಂದಿಸಿದ್ದಳು. ಹೀಗಾಗಿ ಆಕೆಗೆ ಹೊಡೆದಿದ್ದೇ ಹೊರತು ಹೊಡೆತ ಹಿಂದೆ ಯಾವುದೇ ರೀತಿಯ ಉದ್ದೇಶವಿರಲಿಲ್ಲ ಎಂದು ಭಾರತೀಯ ಕ್ರಿಕೆಟಿಗ ಅಮಿತ್ ಮಿಶ್ರಾ ಬುಧವಾರ ಹೇಳಿದ್ದಾರೆ...
ಬಂಧನಕ್ಕೊಳಗಾದ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಡಿಸಿಪಿ ಕಚೇರಿಯಿಂದ ಹೊರ ಬರುತ್ತಿರುವ ಚಿತ್ರ
ಬಂಧನಕ್ಕೊಳಗಾದ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಡಿಸಿಪಿ ಕಚೇರಿಯಿಂದ ಹೊರ ಬರುತ್ತಿರುವ ಚಿತ್ರ

ಬೆಂಗಳೂರು: ವಂದನಾ ನನ್ನನ್ನು ನಿಂದಿಸಿದ್ದಳು. ಹೀಗಾಗಿ ಆಕೆಗೆ ಹೊಡೆದಿದ್ದೇ ಹೊರತು ಹೊಡೆತ ಹಿಂದೆ ಯಾವುದೇ ರೀತಿಯ ಉದ್ದೇಶವಿರಲಿಲ್ಲ ಎಂದು ಭಾರತೀಯ ಕ್ರಿಕೆಟಿಗ ಅಮಿತ್ ಮಿಶ್ರಾ ಬುಧವಾರ ಹೇಳಿದ್ದಾರೆ.

ಬಾಲಿವುಡ್ ನಿರ್ಮಾಪಕಿ ಹಾಗೂ ಗೆಳತಿ ವಂದಾನಾ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಭಾರತದ ಕ್ರಿಕೆಟಿಗ ಅಮಿತ್ ಮಿಶ್ರಾ ನಿನ್ನೆಯಷ್ಟೇ ಬಂಧನಕ್ಕೊಳಪಟ್ಟು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಬಂಧನಕ್ಕೊಳಗಾದ ಸಂದರ್ಭದಲ್ಲಿ ಅಶೋಕನಗರ ಪೊಲೀಸರು ವಿಚಾರಣೆ ನಡೆಸಿದ್ದರೆಂಬುದಾಗಿ ತಿಳಿದುಬಂದಿದೆ.  ವಿಚಾರಣೆ ವೇಳೆ ಅಮಿತ್ ಮಿಶ್ರಾ ಅವರು, ಹೇಳಿಕೆ ನೀಡಿದ್ದು, ಗೆಳತಿ ವಂದನಾ ನಾನಿದ್ದ ರೂಮಿಗೆ ಬಂದು ಕ್ಷುಲ್ಲಕ ಕಾರಣಕ್ಕೆ ಬಾಯಿಗೆ ಬಂದಂತೆ ಮಾತನಾಡಿ ನನ್ನನ್ನು ನಿಂದಿಸಿದ್ದರು. ಹೀಗಾಗಿ ಆಕೆಗೆ ಹೊಡೆದಿದ್ದೆ. ಹೊಡೆತದ ಹಿಂದೆ ಯಾವುದೇ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.

ವಂದನಾ ನಾನು ಹಲವು ವರ್ಷಗಳಿಂದಲೂ ಸ್ನೇಹಿತರಾಗಿದ್ದೇವೆ. ಘಟನೆ ನಡೆಯುವ ದಿನದಂದು ನನ್ನ ರೂಮಿಗೆ ಇದ್ದಕ್ಕಿದ್ದಂತೆ ಬಂದ ವಂದನಾ ದೂರವಿರುವಂತೆ ಹೇಳಿ ಬಾಯಿಗೆ ಬಂದಂತೆ ಮಾತನಾಡಿ ನನ್ನನ್ನು ನಿಂದಿಸಿದ್ದಳು. ನಂತರ ನನ್ನನ್ನು ಹೊಡೆಯಲು ಬಂದಿದ್ದಳು. ಹೀಗಾಗಿ ಆಕೆಯನ್ನು ತಡೆಯುವ ಸಲುವಾಗಿ ಆಕೆಗೆ ಹೊಡೆದಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾರೆ.

ಅಮಿತ್ ಮಿಶ್ರಾ ವಿಚಾರಣೆ ಕುರಿಂತೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಸಂಜೀಪ್ ಪಾಟೀಲ್ ಅವರು, ಬಂಧನದ ಸಂದರ್ಭದಲ್ಲಿ ಅಮಿತ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಮಿಶ್ರಾ ನೀಡಿದ್ದ ಎಲ್ಲಾ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ವಿಚಾರಣೆ ವೇಳೆ ಈ ಘಟನೆಗೂ ಮಿಶ್ರಾ ಗೆಳಯನಾಗಿರುವ ರಘ್ವೀನ್ ಎಂಬುವವವರಿಗೆ ಸಂಬಂಧವಿರುವ ಕುರಿತಂತೆ ಮಾಹಿತಿ ದೊರೆತಿದೆ.. ರಘ್ವೀನ್ ಎಂಬುವವನೇ ವಂದನಾ ಅವರನ್ನು ಮಿಶ್ರಾ ಅವರಿಗೆ ಪರಿಚಯ ಮಾಡಿಕೊಟ್ಟಿದ್ದನು ಎಂಬುದಾಗಿ ತಿಳಿದುಬಂದಿದೆ. ಪ್ರಸ್ತುತ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯ ಮುಂದೆ ಪ್ರಕರಣವನ್ನು ಪ್ರಸ್ತುತ ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್ 25ರಂದು ರಿಟ್ಜ್ ಕಾರ್ಲ್ಟನ್ ಹೊಟೆಲ್ ಗೆ ಅಮಿತ್ ಮಿಶ್ರಾ ಮತ್ತು ಅವರ ಗೆಳತಿ ವಂದನಾ ಜೈನ್ ಅವರು ಆಗಮಿಸಿದ್ದರು . ರಾತ್ರಿ ಮಿಶ್ರಾ ಮತ್ತು ವಂದನಾ ಜೈನ್ ನಡುವೆ  ವೈಯುಕ್ತಿಕ ಕಾರಣಕ್ಕಾಗಿ ವಾಗ್ವಾದ ನಡೆದಿದ್ದು, ಮಿಶ್ರಾ ವಂದನಾರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ಮಾಡಿದ್ದರು ಎಂದು ವಂದನಾ ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ  ಸೆ.27ರಂದು ಅಶೋಕ್ ನಗರ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com