
ಬೆಂಗಳೂರು: ಚುನಾವಣಾ ಆಯೋಗಕ್ಕೆ ಎಲ್ಲ ದಾಖಲೆ ಸಲ್ಲಿಸಿದ್ದರೂ ತೇಜೋವಧೆ ಮಾಡಲು ಆರೋಪ ಮಾಡಲಾಗಿದೆ ಎಂದು ಮೇಯರ್ ಮಂಜುನಾಥ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಆಸ್ತಿ ಘೋಷಣೆಯ ದಾಖಲೆಗಳ ನ್ನು ನೀಡಿ ಮಾತನಾಡಿದ ಅವರು, ನಾಲ್ಕನೇ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು,ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಬಗ್ಗೆ ನನಗೂ ಅರಿವಿದೆ.ಪಾನ್ ಕಾರ್ಡ್ ಸಂಖ್ಯೆ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳು,ಆದಾಯ ತೆರಿಗೆ ಪಾವತಿ ಮಾಡಿರುವ ಪ್ರತಿಗಳನ್ನು ಆಸ್ತಿ ಘೋಷಣೆ ಜೊತೆಗೆ ಸಲ್ಲಿಸಿದ್ದೇನೆ.ನಾಮಪತ್ರದ ಕೆಲವು ಕಡೆ ಪೊಲೀಸ್ ತನಿಖೆಗೆ ಒಳಪಟ್ಟಿರುವ ಬಗ್ಗೆ ಪ್ರಶ್ನೆಗಳಿವೆ. ಇದಕ್ಕೆ ಉತ್ತರಿಸುವಾಗ ಎಲ್ಲಕ್ಕೂ `ಇಲ್ಲ' ಎಂಬ ಉತ್ತರ ನೀಡಿದ್ದೇನೆ. ಇದರ ಜೊತೆಗೆ ಪಾನ್
ಕಾರ್ಡ್ ಕೂಡ ಇಲ್ಲ ಎಂಬುದನ್ನು ಸೇರಿಸಿ ತಪ್ಪು ತಿಳಿವಳಿಕೆ ಸೃಷ್ಟಿಸಲಾಗಿ ದೆ. ತೇಜೋವಧೆ ಮಾಡುವ ದುರುದ್ದೇಶದಿಂದ ವಕೀಲರೊಬ್ಬರು ದಾಖಲೆ ಸಲ್ಲಿಸಿಲ್ಲ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ತಿಳಿಸಿದರು.
ಆಯೋಗಕ್ಕೆ ದೂರು ನೀಡಿದವರು ವಕೀಲರಾಗಿದ್ದರೂ ದಾಖಲೆಗಳನ್ನು ಸರಿಯಾಗಿ ಪರಿಶೀಲ
ನೆ ಮಾಡಿಲ್ಲ. ಬಿಬಿಎಂಪಿಯ ಅಂತರ್ಜಾಲದಲ್ಲಿ ಹಾಕಿದ್ದ ಕೆಲವು ದಾಖಲೆಗಳನ್ನು ಮಾತ್ರ ನೋಡಿ ದೂರು ನೀಡಲಾಗಿದೆ. ಆದರೆ,ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗ ದಾಖಲೆಗಳ ಪರಿಶೀಲನೆ ಮಾಡಿ ನಾಮಪತ್ರ ಸ್ವೀಕರಿಸಿತ್ತು. ಆಯೋಗಕ್ಕೆ ತಿಳಿಸಿರುವ
ಎಲ್ಲ ಮಾಹಿತಿ ನಿಜವಾಗಿದ್ದು,ಸುಳ್ಳು ಸುದ್ದಿ ಹಬ್ಬಿಸಿ ಗೌರವಕ್ಕೆ ಧಕ್ಕೆ ತರಲಾಗಿದೆ. ನೋಟರಿ ಸಂಖ್ಯೆ, ದಿನಾಂಕಗಳಂತಹ ಸಣ್ಣ ಸಂಗತಿಗಳ ನ್ನು ಪ್ರಸ್ತಾಪಿಸಿ ವಿನಾಕಾರಣ ದೂರು ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ವಕೀಲರ ಸಂಘಕ್ಕೆ ದೂರು ಸಲ್ಲಿಸುವ ಬಗ್ಗೆ, ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸುತ್ತೇನೆ. ಪಕ್ಷದ ಹಿರಿಯರ ಸಲಹೆ ಪಡೆದು ಗೌರವಕ್ಕೆ ಧಕ್ಕೆ ತಂದವರ ವಿರುದ್ಧ ದೂರು ನೀಡುತ್ತೇನೆ ಎಂದು ಮೇಯರ್ ಹೇಳಿದರು.
Advertisement