ಚಾಲಕರೆ, ಚಲಿಸುವಾಗ ಬೇಡ ಮೊಬೈಲ್ ಕರೆ

ನಗರದಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳಲ್ಲಿ ಶೇ.20ರಷ್ಟು ಅಪಘಾತಗಳು ಸಂಭವಿಸುವುದುಮೊಬೈಲ್ ಬಳಕೆಯಿಂದ...
ವಾಹನ ಸಂಚಾರ ಮಾಡುವಾಗ ಆಗುವ ಮೊಬೈಲ್ ಮೂಲಕ ಮಾತನಾಡಿದರೆ ಆಗುವ ತೊಂದರೆಯನ್ನು ಅಭಿನಯದ ಮೂಲಕ ತೋರಿಸಲಾಯಿತು.
ವಾಹನ ಸಂಚಾರ ಮಾಡುವಾಗ ಆಗುವ ಮೊಬೈಲ್ ಮೂಲಕ ಮಾತನಾಡಿದರೆ ಆಗುವ ತೊಂದರೆಯನ್ನು ಅಭಿನಯದ ಮೂಲಕ ತೋರಿಸಲಾಯಿತು.
Updated on

ಬೆಂಗಳೂರು: ನಗರದಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳಲ್ಲಿ ಶೇ.20ರಷ್ಟು ಅಪಘಾತಗಳು ಸಂಭವಿಸುವುದು ಮೊಬೈಲ್ ಬಳಕೆಯಿಂದ. ವಾಹನ ಚಾಲಕರು ಮೊಬೈಲ್‍ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಕೂಡ ಹೆಚ್ಚುತ್ತವೆ.

ಇದು ಕಾನೂನು ಪ್ರಕಾರ ಅಪರಾಧವೂ ಹೌದು.ಹೀಗೆ ಮೊಬೈಲ್‍ನಲ್ಲಿ ಮಾತನಾಡುತ್ತ ಚಾಲನೆ ಮಾಡುವವರ ವಿರುದ್ಧ 2015ರ ಆರಂಭದಿಂದ ಇಲ್ಲಿಯವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಚಾಲನೆಯಲ್ಲಿ ಮೊಬೈಲ್ ಬಳಸುತ್ತಿರುವುದರಿಂದ ಅಪಘಾತಗಳೂ ಹೆಚ್ಚುತ್ತಿವೆ.ಹಾಗಾಗಿ ಜನರಲ್ಲಿ ಅರಿವು ಮೂಡಿಸಲು ನಗರ ಸಂಚಾರ ಪೊಲೀಸರು ವಿಶೇಷ ಅಭಿಯಾನ ಕಾರ್ಯಕ್ರಮ ಆರಂಭಿಸಿದ್ದಾರೆ.

`ನಿಮ್ಮ ಪ್ರಾಣ ಅತಿಗಣ್ಯ, ಮೊಬೈಲ್ ಕರೆ ನಗಣ್ಯ' ಎಂದು ಸಂಚಾರ ಪೊಲೀಸರು ರೂಪಿಸಿರುವ ಆಂದೋಲನಕ್ಕೆ ಬುಧವಾರ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. ಈ ಅಭಿಯಾನ ನ.27 ರವರೆಗೆ ನಡೆಯಲಿದೆ.

ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ, ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಗಮನ ಮಾತಿನ ಮೇಲಿರುತ್ತದೆ. ಆಗ ರಸ್ತೆ, ವಾಹನದ ಮೇಲೆ ನಿಯಂತ್ರಣ ತಪ್ಪುತ್ತದೆ. ತಾವು ತೊಂದರೆ ಅನುಭವಿಸುವುದರ ಜತೆಗೆ ಇತರೆ ಪ್ರಯಾಣಿಕರಿಗೂ ತೊಂದರೆ ನೀಡಿದಂತಾಗುತ್ತದೆ. ಆದ್ದರಿಂದ ತೀರಾ ಅಗತ್ಯಬಿದ್ದಲ್ಲಿ ವಾಹನ ಪಕ್ಕಕ್ಕೆ ನಿಲ್ಲಿಸಿ ಮಾತನಾಡಿ.
ನಂತರ ಮುಂದೆ ಸಾಗಿ. ಅಪಾಯಕ್ಕೆ ನೀವೇ ದಾರಿ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಫ್ಲೆಕ್ಸ್, ಭಿತ್ತಿಚಿತ್ರದ ಮೂಲಕ ಜಾಗೃತಿ
ನಗರದ ಪೂರ್ವ ಮತ್ತು ಪಶ್ಚಿಮ ವಿಭಾಗದ ಎಲ್ಲ ಸಂಚಾರ ಠಾಣೆಗಳಲ್ಲಿ ಈ ಆಂದೋಲನ ಆರಂಭಿಸಲಾಗಿದೆ. ಮೊಬೈಲ್ ಬಳಕೆಯಿಂದ ನಗರದಲ್ಲಿ ನಿತ್ಯ ಮೂರ್ನಾಲ್ಕು ಅಪಘಾತ ಸಂಭವಿಸುತ್ತಿವೆ. ಅದೃಷ್ಟವಶಾತ್ ಸಾವು ನೋವು ಸಂಭವಿಸಿರುವ ಪ್ರಕರಣಗಳು ಕಡಿಮೆ. ಸಂಚಾರ ನಿಯಮ ಪಾಲಿಸದಿರುವುದೇ ಇದಕ್ಕೆ ಕಾರಣ. ಹಾಗಾಗಿ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.ಫ್ಲೆಕ್ಸ್ ಅಳವಡಿಕೆ, ಕರಪತ್ರ ಹಂಚಿಕೆ, ಬೀದಿ ನಾಟಕ ಪ್ರದರ್ಶನದ ಮೂಲಕ ಅರಿವು ಮೂಡಿಸಲಾಗುವುದು.
●ಡಾ.ಎಂ.ಎ.ಸಲೀಂ, ಹೆಚ್ಚುವರಿ ಪೊಲೀಸ್ ಆಯುಕ್ತ, ಸಂಚಾರ ಮತ್ತು ಭದ್ರತೆ

ಯಾಕೆ ಆಂದೋಲನ?

  •  ಶೇ.20ರಷ್ಟು ಅಪಘಾತಕ್ಕೆಚಲಿಸುವಾಗ ಮೊಬೈಲ್ ಬಳಕೆಯೇ ಕಾರಣ
  •   2015 ಜನವರಿಯಿಂದ ಇಲ್ಲಿವರೆಗೆ 2 ಲಕ್ಷ ಇಂತಹಕೇಸುಗಳು ಪತ್ತೆ ಇದಕ್ಕಾಗಿ ವಾಹನ
  •  ಸವಾರರಿಗೆ ನ.27ರವರೆಗೆ ಜಾಗೃತಿ ಮೂಡಿಸಲು ನಿರ್ಧಾರ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com