ವ್ಯಾಪಾರಿ ಅಪಹರಣಕಾರರ ಸೆರೆ

ಕಡಿಮೆ ದರದಲ್ಲಿ ಐಷಾರಾಮಿ ಫ್ಲ್ಯಾಟ್ ಕೊಡಿ ಸುವುದಾಗಿ ನಂಬಿಸಿ ಕರೆದೊಯ್ದು ಚಿನ್ನಾಭರಣ ಮಳಿಗೆ ವ್ಯಾಪಾರಿಯನ್ನು ಅಪಹರಿಸಿ 700 ಗ್ರಾಂ ಚಿನ್ನದ ಗಟ್ಟಿಗಳನ್ನು ದೋಚಿ ಪರಾರಿಯಾಗಿದ್ದ ನಾಲ್ವರನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕಡಿಮೆ ದರದಲ್ಲಿ ಐಷಾರಾಮಿ ಫ್ಲ್ಯಾಟ್ ಕೊಡಿ ಸುವುದಾಗಿ ನಂಬಿಸಿ ಕರೆದೊಯ್ದು ಚಿನ್ನಾಭರಣ ಮಳಿಗೆ ವ್ಯಾಪಾರಿಯನ್ನು ಅಪಹರಿಸಿ 700 ಗ್ರಾಂ ಚಿನ್ನದ ಗಟ್ಟಿಗಳನ್ನು ದೋಚಿ ಪರಾರಿಯಾಗಿದ್ದ ನಾಲ್ವರನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ.
 
ಪಾಲಿಕೆ ಮಾಜಿ ಉಪ ಮೇಯರ್ ಹರೀಶ್ ಅವರ ಕಾರ್ಯದರ್ಶಿಯಾಗಿದ್ದ ನಂದಿನಿ ಲೇಜೌಟ್ ನಿವಾಸಿ ಹರೀಶ್ (29), ರಾಜಾಜಿನಗರ 1ನೇ ಬ್ಲಾಕ್ ನಿವಾಸಿ ಎಸ್.ಉಮೇಶ್ (26), ಆರ್.ಟಿ.ನಗರ ಭೈರಸಂದ್ರದ ಎಂ.ಪ್ರಕಾಶ್ (24) ಹಾಗೂ ಕೆ.ಜಿ ರಸ್ತೆ ನಿವಾಸಿ ಪ್ರತಾಪ್ (23) ಬಂಧಿತರು. ಇವರಿಂದ ದರೋಡೆ ಮಾಡಿದ್ದ ತಲಾ 100 ಗ್ರಾಂ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಆಭರಣ ವ್ಯಾಪಾರಿ ಮಂಗಲ್ ದಾಸ್ ಎಂಬುವರನ್ನು ಅಪಹರಿಸಿ ದರೋಡೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಾಜಿನಗರ 1ನೇ ಬ್ಲಾಕ್ ನಿವಾಸಿ ಮಂಗಲ್‍ದಾಸ್ ಅವರು ರಾಜಾಜಿನಗರ 19ನೇ ಮುಖ್ಯರಸ್ತೆಯಲ್ಲಿ ಶ್ರೀಗುರುಪ್ರಸಾದ್ ಆಭರಣ ಮಳಿಗೆ ಇಟ್ಟುಕೊಂಡಿದ್ದಾರೆ. ಆರೋಪಿ ಹರೀಶ್, ಕಡಿಮೆ ದರದ ಐಷಾರಾಮಿ ಫ್ಲ್ಯಾಟ್ ಕೊಡಿಸುವುದಾಗಿ ದಾಸ್ ಗೆ ಕರೆ ಮಾಡುತ್ತಿದ್ದ. ಆದರೆ, ಮಂಗಲ ದಾಸ್ ತಮಗೆ ಫ್ಲ್ಯಾಟ್ ನಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದರು. ಆದರೆ, ಅ.30ರಂದು ಮಧ್ಯಾಹ್ನ 2.30ಕ್ಕೆ ಮಂಗಲ್ ದಾಸ್ ಅವರ ಅಂಗಡಿಗೆ ತನ್ನ ಮೂವರು ಸಹಚರರೊಂದಿಗೆ ಹರೀಶ್ ಬಂದಿದ್ದ. ಫ್ಲ್ಯಾಟ್ ತೋರಿಸುತ್ತೇಂದು ಕರೆದೊಯ್ದಿದ್ದ.

ರು.50 ಲಕ್ಷ ನೀಡುವಂತೆ ಹೇಳಿ ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ತನ್ನ ಬಳಿ ಹಣ ಇಲ್ಲ ಎಂದಾಗ ಆಭರಣ ನೀಡುವಂತೆ ಹೇಳಿದ್ದರು. ಬಳಿಕ ಅಂಗಡಿಗೆ ಕರೆದೊಯ್ದು 700 ಗ್ರಾಂ ತೂಕದ ಚಿನ್ನದ ಬಿಸ್ಕಿಟ್ ಗಳನ್ನು ದೋಚಿ ಪರಾರಿಯಾಗಿದ್ದರು. ಮನೆಗೆ ತೆರಳಿದ ಮಂಗಲ್ ದಾಸ್ ಮನೆಯಲ್ಲಿ ವಿಷಯ ತಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ದಾಸ್ ರಿಂದ ಆರೋಪಿ ಹರೀಶನ ಮೊಬೈಲ್ ಮತ್ತು ಕಾರಿನ ಮಾಹಿತಿ ಪಡೆದು ಕಾರ್ಯಪ್ರವೃತ್ತರಾದ ಪೊಲೀಸರು ಆಭರಣ ದೋಚಿ ಮೈಸೂರು ರಸ್ತೆ ಕಡೆ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನದ ಗಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com