
ಬೆಂಗಳೂರು: ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ಗೆ ಭೂ ಮಂಜೂರಾತಿ ಬಗ್ಗೆ ಲೋಕಾಯುಕ್ತ ಎಸ್.ಪಿ. ಸೋನಿಯಾ ನಾರಂಗ್ ಅವರಿಗೆ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.
ಅತ್ರಿ ಸಲ್ಲಿಸಿರುವ ದೂರಿನ ಬಗ್ಗೆ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಬಿ.ಜೆ. ಪುಟ್ಟಸ್ವಾಮಿ ಅವರು ಸ್ಪಷ್ಟನೆ ನೀಡಿದ್ದು, ಭೂ ಮಂಜೂರಾತಿ ವೇಳೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದಿದ್ದಾರೆ.
ಈ ಬಗ್ಗೆ ಲೋಕಾಯುಕ್ತ ಎಸ್.ಪಿ. ಸೋನಿಯಾ ನಾರಂಗ್ ಅವರಿಗೂ ಆಗಸ್ಟ್ 31, 2015ರಂದು ಮನವಿ ಸಲ್ಲಿಸಿದ್ದಾರೆ. ಈ ರಾಜಕೀಯ ಅಧಿಕಾರವನ್ನ ಎಂದಿಗೂ ಸ್ವಾರ್ಥಕ್ಕೆ ಉಪಯೋಗ ಮಾಡಿಕೊಂಡಿಲ್ಲ. ಶೋಷಣೆಗೆ ಒಳಪಟ್ಟ ಜನಾಂಗದ ಬಡವರ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿಯುತ್ತಿದ್ದು, ಕಳಂಕರಹಿತ ಜೀವನ ನಡೆಸಿದ್ದೇನೆ. ಆದಿಚುಂಚನಗಿರಿ ಟ್ರಸ್ಟ್ ಗೆ ಭೂ ಮಂಜೂರು ಮಾಡಿರುವ ಕಾನೂನಿನ ರೀತಿಯಲ್ಲೇ ವಿಶ್ವ ಗಾಣಿಗ ಸಮುದಾಯ ಟ್ರಸ್ಟïಗೂ ಭೂ ಮಂಜೂರಾತಿ ಆಗಿದೆ. ಎಲ್ಲಿಯೂ ಕಾನೂನುಬಾಹಿರ ಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸೋನಿಯಾ ನಾರಂಗ್ ಅವರಿಗೆ ನೀಡಿರುವ ಮನವಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಮಾಜಿ ಸಿ. ಎಂ. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಮತ್ತು ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರ ಹೆಸರು ತಂದಿರುವುದು ಸರಿಯಲ್ಲ. ಇವರು ಮಾಡಿರುವ ಆರೋಪ ಆಧಾರರಹಿತವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಫೆಬ್ರುವರಿ 11, 2011ರಲ್ಲಿ ನಡೆದ ಜನಾಂಗದ ಸಮ್ಮೇಳನದಲ್ಲಿ ಭೂ ಮಂಜೂರಾತಿ ಬಗ್ಗೆ ಮನವಿ
ಮಾಡಿದ್ದು, ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ನ ಎಲ್ಲಾ ಒಳ ಪಂಗಡಗಳ ಪ್ರಾತಿನಿಧ್ಯದೊಡನೆ ನೊಂದಾಯಿಸಲಾಗಿದೆ. ಇದರನ್ವಯ ಮಾರ್ಚ್ 28, 2011ರಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು ಎಂದು ಎಸ್.ಪಿ. ನಾರಂಗ್ ಅವರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
Advertisement