ರಾಜಕೀಯ ಪಕ್ಷಗಳಿಂದ ಹೊರಬನ್ನಿ: ರೈತ ಮುಖಂಡ ಪಂಚಪ್ಪ

ಮಹದಾಯಿ ನೀರಿನ ಹಕ್ಕಿಗಾಗಿ ನರಗುಂದದಲ್ಲಿ ಕಳೆದ 51 ದಿನಗಳಿಂದ ನಡೆಯುತ್ತಿರುವ ರೈತ ಹೋರಾಟಕ್ಕೆ ಶನಿವಾರ ಕೃಷ್ಣಾತೀರದ ರೈತರು ಬೆಂಬಲ...
ಮಹದಾಯಿ ನೀರಿನ ಹಕ್ಕಿಗಾಗಿ ನರಗುಂದದಲ್ಲಿ ಹೋರಾಟ ನಡೆಸುತ್ತಿರುವ ರೈತರು
ಮಹದಾಯಿ ನೀರಿನ ಹಕ್ಕಿಗಾಗಿ ನರಗುಂದದಲ್ಲಿ ಹೋರಾಟ ನಡೆಸುತ್ತಿರುವ ರೈತರು

ಹುಬ್ಬಳ್ಳಿ: ಮಹದಾಯಿ ನೀರಿನ ಹಕ್ಕಿಗಾಗಿ ನರಗುಂದದಲ್ಲಿ ಕಳೆದ 51 ದಿನಗಳಿಂದ ನಡೆಯುತ್ತಿರುವ ರೈತ ಹೋರಾಟಕ್ಕೆ ಶನಿವಾರ ಕೃಷ್ಣಾತೀರದ ರೈತರು ಬೆಂಬಲ ಸೂಚಿಸಿದ್ದಾರೆ.

ವಿವಿಧ ಸಂಘಟನೆಗಳು, ವಿವಿಧ ಕ್ಷೇತ್ರಗಳ ಗಣ್ಯರು ರೈತ ಹೋರಾಟವನ್ನು  ಬೆಂಬಲಿಸುತ್ತಿದ್ದಾರೆ. ಶನಿವಾರ ಕೃಷ್ಣೆ ಒಡಲಿನ ರೈತರ ಬೆಂಬಲ ನೀಡಿರುವುದು ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ನಿನ್ನೆ ಕರೆ ನೀಡಲಾಗಿದ್ದ ರಾಜ್ಯ ಬಂದ್ ಗೆ  ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಶಕ್ತಿ ತುಂಬಿದ್ದರು, ಅದರೆ, ಬೇರೆಡೆ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಹತ್ತಾರು ಹೋರಾಟಗಾರರೊಂದಿಗೆ ನರಗುಂದಕ್ಕೆ ಆಗಮಿಸಿದ್ದ
ಕೃಷ್ಣಾ ಭೀಮಾನದಿ ಹೋರಾಟಗಾರ ಪಂಚಪ್ಪ ಕಲಬುರ್ಗಿ `ರಾಜಕೀಯ ಪಕ್ಷಗಳಿಂದ ಹೊರಬನ್ನಿ' ಎಂದು ಮಹದಾಯಿ ಹೋರಾಟಗಾರರಿಗೆ ಕರೆ ನೀಡಿದರು.

ರೈತರು ವಿವಿಧ ರಾಜಕೀಯ ಪಕ್ಷಗಳಿಂದ ಹೊರಬನ್ನಿ ಎಂದು ಮಹದಾಯಿ ಹೋರಾಟಗಾರರಿಗೆ ಕರೆ ನೀಡಿದರು. ರೈತರು ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳುವುದರಿಂದ ನದಿ ನೀರಿನಂತ ಹೋರಾಟಗಳು ಯಶಸ್ವಿಯಾಗುವುದಿಲ್ಲ. ಹೋರಾಟಕ್ಕೆ ರಾಜಕೀಯ ಅಡ್ಡಿಯಾಗುತ್ತದೆ. ರಾಜಕಾರಣಿಗಳನ್ನು ಅವರಷ್ಟಕ್ಕೆ ಬಿಟ್ಟು, ನಮ್ಮ ಹೋರಾಟ ಮುಂದುವರೆಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ' ಎಂದರು.

ಐದು ನಿರ್ಣಯಗಳು

ರಾಜ್ಯ ವಕೀಲರ ಪರಿಷತ್ ಸದಸ್ಯರು ಬೆಂಬಲ ಸೂಚಿಸಿ, ಐದು ನಿರ್ಣಯಗಳನ್ನು ಮಂಡಿಸಿದ್ದಾರೆ. ನಿರಂತರ ಧರಣಿ, ಮಹಾದಾಯಿ ಹೋರಾಟಕ್ಕಾಗಿ ವಕೀಲರನ್ನೋಳಗೊಂಡ ಕ್ರಯಾ ಸಮಿತಿ ರಚನೆ, ಸೆ. 13ರಂದು ಎಲ್ಲ ಸಂಸದರ, ಶಾಸಕರ ಸಭೆ, ಸೆ. 8ರಂದು ಗೋವಾಕ್ಕೆ ವಕೀಲರ ನಿಯೋಗದ ಭೇಟಿ, ನ್ಯಾಯಾಧೀಕರಣ ರದ್ದು ಮಾಡಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com